ಬೆಂಗಳೂರು: ಆನ್‌ಲೈನ್ ಆ್ಯಪ್ಗಳ ಮೂಲಕ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತ ಮಾನಸಿಕ ಹಿಂಸೆ ನೀಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಸೈಯದ್ ಅಹ್ಮದ್, ಸೈಯದ್ ಇರ್ಫಾನ್ ಮತ್ತು ಆದಿತ್ಯ ಎಂಬುದಾಗಿ ಗುರುತಿಸಲಾಗಿದೆ.
ಆರೋಪಿಗಳು ಚೀನಿ ಕಂಪನಿಗಳಾದ ಮನಿ ಡೇ, ಪೈಸಾ ಪೇ, ಲೋನ್ ಟೈಮ್, ರೂಪಿ ಡೇ, ರೂಪಿ ಕಾರ್ಟ್, ಇನ್ ಕ್ಯಾಶ್ ಕಂಪನಿಗಳ ಮೂಲಕ ಬಡ್ಡಿ ನೀಡುತ್ತ ಸಾಲ ನೀಡುತ್ತಿದ್ದರು. ಹಣ ನೀಡುವಾಗಲೇ ಶೇ. 36ರಷ್ಟು ಬಡ್ಡಿಗೆಂದು ಹಣವನ್ನು ಕಡಿತಗೊಳಿಸಿ ಸಾಲ ನೀಡುತ್ತಿದ್ದರು.
ಸಾಲ ವಸೂಲಿ ಮಾಡಿದ ನಂತರ, ಹೆಚ್ಚಿನ ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಸಾಲ ಪಡೆದ ಜನರ ಸಂಬಂಧಿಕರಿಗೆ, ಸ್ನೇಹಿತರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಮಾನಸಿಕ ಹಿಂಸೆ ನೀಡುತ್ತಿದ್ದರು. ಸದ್ಯ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕಂಪನಿಯ ಮಾಲೀಕರು ಚೈನಾ ಮೂಲದವರಾಗಿದ್ದು, ಇವರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.