ಸಂಬಂಧಿಕನಿಂದಲೇ ಮಹಿಳೆಯ ಭೀಕರ ಕೊಲೆ, ಚಾಕುವಿನಿಂದ ಇರಿದು ಎಸ್ಕೇಪ್ ಆದ..
ಮೃತ ನೇತ್ರಾವತಿ ಸಂಬಂಧಿಕ ಶಿವರಾಜ ಎಂಬಾತನೇ ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಅಲ್ಲಿಂದ ಪರಾರಿಯಾಗಿರಬಹುದು ಎಂದು ಹೇಳಲಾಗುತ್ತಿದೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
ರಾಯಚೂರು: ಚಾಕು ಇರಿದು ಭೀಕರವಾಗಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ವೆಂಕಟರಾಯಪೇಟೆ ಬಡಾವಣೆಯಲ್ಲಿ ನಡೆದಿದೆ. ನೇತ್ರಾವತಿ(33) ಕೊಲೆಯಾದ ಮಹಿಳೆ.
ಮೃತ ನೇತ್ರಾವತಿ ಸಂಬಂಧಿಕ ಶಿವರಾಜ ಎಂಬಾತನೇ ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಅಲ್ಲಿಂದ ಪರಾರಿಯಾಗಿರಬಹುದು ಎಂದು ಹೇಳಲಾಗುತ್ತಿದೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ ಶಿವರಾಜ್ ಕೊಲೆ ಮಾಡಿದ್ದಾನೆ ಎಂಬುವುದು ಮಾತ್ರ ಸ್ಪಷ್ಟವಾಗುತ್ತಿದೆ.
ಸದ್ಯ ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿರುವ ಶಿವರಾಜ ತಲೆ ಮರೆಸಿಕೊಂಡಿದ್ದಾನೆ.
ಅನೈತಿಕ ಸಂಬಂಧ ಶಂಕೆ: ಹೆಂಡತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ಪರಾರಿಯಾದ ಕುಡುಕ ಗಂಡ
Published On - 7:46 am, Mon, 28 December 20