ನ್ಯೂ ಇಯರ್ ಸಂಭ್ರಮಕ್ಕೆ ಹೆಮ್ಮಾರಿ ಶಾಕ್, ದೇಶದ ಈ 4 ರಾಜ್ಯಗಳಲ್ಲಿ ಹಲವು ನಿರ್ಬಂಧ..

ಹೊಸ ವರ್ಷದ ಸಂಭ್ರಮಕ್ಕೆ ಕೊರೊನಾ ಮಹಾಮಾರಿ ಕಂಟಕ ತಂದಿದೆ. ಅದ್ರಲ್ಲೂ ಬ್ರಿಟನ್ ಭೂತ ಭಾರತಕ್ಕೆ ವಕ್ಕರಿಸಿದೆ ಅಂತಾ ಗೊತ್ತಾದ ಬಳಿಕ ದೇಶದ ಹಲವು ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಜಾರಿಗೆ ಬಂದಿದೆ. ಇದ್ರಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಕಡಿವಾಣ ಹಾಕಲು ದೇಶದ ನಾಲ್ಕು ರಾಜ್ಯಗಳು ನಿರ್ಧರಿಸಿವೆ. ಅದ್ರ ಡಿಟೇಲ್ಸ್ ಇಲ್ಲಿದೆ.

ನ್ಯೂ ಇಯರ್ ಸಂಭ್ರಮಕ್ಕೆ ಹೆಮ್ಮಾರಿ ಶಾಕ್, ದೇಶದ ಈ 4 ರಾಜ್ಯಗಳಲ್ಲಿ ಹಲವು ನಿರ್ಬಂಧ..
Follow us
ಆಯೇಷಾ ಬಾನು
|

Updated on:Dec 28, 2020 | 7:05 AM

ಇಯರ್ ಟ್ವೆಂಟಿ-ಟ್ವೆಂಟಿ.. ಶುರುವಾಗಿದ್ದು ಭರ್ಜರಿ ಸೆಲೆಬ್ರೇಷನ್​ನಿಂದ. ಆರಂಭವೇನೋ ಭರ್ಜರಿಯಾಗಿ ಆಯ್ತು. ಆರಂಭ ಆಗಿ ಎರಡೇ ಎರಡು ತಿಂಗಳು. ಕೇವಲ ಎರಡು ತಿಂಗಳು ಕಳೆಯುವಷ್ಟರಲ್ಲಿ.. ವಿಶ್ವದಲ್ಲಿ ಕಾಣಿಸಿಕೊಂಡಿದ್ದೇ ಕೊರೊನಾ ಅನ್ನೋ ಡೆಡ್ಲಿ ವೈರಸ್. ಮನುಷ್ಯನ ಜೀವಕೋಶಕ್ಕೂ ಸಮನಾಗದ ಈ ವೈರಸ್ ಇಡೀ ವಿಶ್ವದಲ್ಲಿ ಭಾರಿ ಸಂಕಷ್ಟ ತಂದೊಡ್ಡಿತು.

ಯಾವುದಕ್ಕೂ ಜಗ್ಗದ.. ಬಗ್ಗದ ಬಲಿಷ್ಠ ದೇಶಗಳೇ ಈ ವೈರಸ್​ನ ಮುಂದೆ ಮಂಡಿಯೂರಿದ್ವು. ಇದರ ಪರಿಣಾಮ ಲಾಕ್​ಡೌನ್​, ಸೀಲ್​ಡೌನ್, ನೈಟ್​ಕರ್ಫ್ಯೂ ಅನ್ನೋ ಪದಗಳು ಹುಟ್ಟಿಕೊಂಡಿದ್ದೇ ಅಲ್ದೆ.. ಅಕ್ಷರ ಗೊತ್ತಿಲ್ಲದವರಿಗೂ ಈಗ ಚಿರಪರಿಚಿತ ಪದಗಳಾಗಿವೆ. ಇದರ ನಡುವೆ ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಆದ್ರೆ, ಕೊರೊನಾ ಅಬ್ಬರ ಮತ್ತೆ ಹೆಚ್ಚುತ್ತಿರೋದ್ರಿಂದ ಈ ಬಾರಿಯ ಹೊಸ ವರ್ಷಾಚರಣೆ ಹಿಂದಿನ ವರ್ಷಗಳಷ್ಟು ಸುಲಭವಾಗಿ ಆಚರಿಸುವಂತಿಲ್ಲ ಅಂತಾ ಸರ್ಕಾರಗಳು ಹಲವು ನಿರ್ಬಂಧಗಳನ್ನ ವಿಧಿಸಲು ಮುಂದಾಗಿವೆ.

ನಿಯಮ ಮೀರಿ ಹೊಸ ವರ್ಷ ಆಚರಿಸಿದ್ರೆ ಬೀಳಲಿದೆ ಕೇಸ್​ಗಳು! ಕೊರೊನಾ ವೇಷ ಬದಲಿಸಿ ಭಾರತಕ್ಕೆ ಎಂಟ್ರಿ ಕೊಟ್ಟಿದೆ ಅಂತಾ ಗೊತ್ತಾದ ತಕ್ಷಣ ಮಹಾರಾಷ್ಟ್ರದಲ್ಲಿ ನೈಟ್​ಕರ್ಫ್ಯೂ ವಿಧಿಸಲಾಗಿದೆ. ಈ ನಿಯಮಗಳು ಜನವರಿ 5ರ ಮುಂಜಾನೆ 6 ಗಂಟೆವರೆಗೆ ಜಾರಿಯಲ್ಲಿ ಇರಲಿದೆ. ಹೀಗಾಗಿ ಹೊಸವರ್ಷದ ಹಿಂದಿನ ದಿನ ಮತ್ತು ಹೊಸ ವರ್ಷದ ದಿನವೂ ಈ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಒಂದು ವೇಳೆ ಯಾರಾದ್ರೂ ನಿಯಮಗಳನ್ನ ಮೀರಿ ಹೊಸ ವರ್ಷ ಆಚರಿಸಿದ್ರೆ, ಅವರ ವಿರುದ್ಧ ಪ್ರಕರಣ ದಾಖಲಿಸಲು ಸಹ ಹಿಂದೆ ಮುಂದೆ ನೋಡಲ್ಲ ಅಂತಾ ಬಿಎಂಸಿ ಹೇಳಿದೆ.

ತಮಿಳುನಾಡಿನ ಬೀಚ್​ಗಳಲ್ಲಿ ಹೊಸವರ್ಷಾಚರಣೆಗೆ ಬಿತ್ತು ಬ್ರೇಕ್ ಮಹಾರಾಷ್ಟ್ರದಲ್ಲಿ ಕಠಿಣ ಕ್ರಮ ಜರುಗಿಸುತ್ತಿದ್ರೆ, ತಮಿಳುನಾಡಿನ ಬೀಚ್​ಗಳಲ್ಲಿ ಹೊಸ ವರ್ಷಾಚರಣೆಗೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ. ಯಾವುದೇ ಕಾರಣಕ್ಕೂ ಬೀಚ್​ಗಳು, ಹೋಟೆಲ್​ಗಳು, ರೆಸ್ಟೋರೆಂಟ್​ಗಳು, ಕ್ಲಬ್​ಗಳು ಮತ್ತು ರೆಸಾರ್ಟ್​ಗಳಲ್ಲಿ ಹೊಸವರ್ಷದ ಸಂಭ್ರಮಾಚರಣೆ ಮಾಡುವಂತಿಲ್ಲ ಅಂತಾ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.

ಹೊಸವರ್ಷದ ಹಿಂದಿನ ಕರ್ಫ್ಯೂ ವಿಧಿಸಿದ ರಾಜಸ್ಥಾನ ಸರ್ಕಾರ ಹೊಸ ಅವತಾರದಲ್ಲಿ ಕೊರೊನಾ ದೇಶಕ್ಕೆ ವಕ್ಕರಿಸಿರೋದ್ರಿಂದ ಎಚ್ಚೆತ್ತಿರೋ ರಾಜಸ್ಥಾನ ಸರ್ಕಾರ, ಹೊಸವರ್ಷದ ಹಿಂದಿನ ಕರ್ಫ್ಯೂ ಜಾರಿಗೆ ತರಲು ಆದೇಶಿಸಿದೆ. ಯಾವುದೇ ಕಾರಣಕ್ಕೂ ಹೊಸವರ್ಷದ ಸಂಭ್ರಮಾಚರಣೆಗೆ ಅವಕಾಶವಿಲ್ಲ ಅಂತಾ ಅಲ್ಲಿನ ಸರ್ಕಾರ ಹೇಳಿದೆ. ಇದೇ ಕಾರಣಕ್ಕೆ ಡಿಸೆಂಬರ್ 31ರ ರಾತ್ರಿ 8 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಯಾರೂ ನಿಯಮ ಮೀರದಿರಿ. ನಿಯಮ ಮೀರಿದ್ರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಅಂತಾ ಎಚ್ಚರಿಕೆ ನೀಡಿದೆ.

ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್​ನಲ್ಲೂ ಸಂಭ್ರಮಾಚರಣೆ ಇಲ್ಲ ಉತ್ತರಾಖಂಡ್​ ಸರ್ಕಾರವೂ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದ್ದು, ರಾಜಧಾನಿ ಡೆಹ್ರಾಡೂನ್​ನ ಹೋಟೆಲ್, ಕ್ಲಬ್, ಪಬ್​, ಬಾರ್, ರೆಸ್ಟೋರೆಂಟ್​ಗಳಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಯಾರಾದ್ರೂ ನಿಯಮ ಮೀರಿದ್ರೆ ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ಐಪಿಸಿಯ ಸೂಕ್ತ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಲಾಗುತ್ತೆ ಅಂತಾ ಉತ್ತರಾಖಂಡ್​ ಸರ್ಕಾರ ಎಚ್ಚರಿಕೆ ನೀಡಿದೆ.

ದೈಹಿಕ ಅಂತರ ಕಾಯ್ದುಕೊಳ್ಳದಿದ್ರೆ ಕರ್ನಾಟಕದಲ್ಲೂ ಫುಲ್ ಪ್ರಾಬ್ಲಂ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಹೇರಿ ವಾಪಸ್ ಪಡೆದಿದ್ರೂ.. ಹೋಟೆಲ್, ಕ್ಲಬ್, ಪಬ್, ರೆಸ್ಟೋರೆಂಟ್, ರೆಸಾರ್ಟ್​ಗಳಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳದೇ ಸಂಭ್ರಮಾಚರಣೆ ಮಾಡುವಂತಿಲ್ಲ ಅಂತಾ ಸರ್ಕಾರ ಹೇಳಿದೆ. ಒಟ್ನಲ್ಲಿ.. ಹೋದ್ಯಾ ಪಿಶಾಚಿ ಅಂದ್ರೆ.. ಬಂದೆ ಗವಾಕ್ಷೀಲಿ ಅಂತಾ ಬ್ರಿಟನ್ ಭೂತದ ರೂಪದಲ್ಲಿ ಎಂಟ್ರಿ ಕೊಟ್ಟಿರೋ ಕೊರೊನಾದಿಂದ ಹೊಸ ವರ್ಷಾಚರಣೆಗೆ ಕುತ್ತು ಬಂದಿರೋದು ಮಾತ್ರ ಸುಳ್ಳಲ್ಲ.

ವ್ಯಾಕ್ಸಿನ್ ಡ್ರೈ ರನ್: ಭಾರತದ ನಾಲ್ಕು ರಾಜ್ಯಗಳಲ್ಲಿ ಇಂದಿನಿಂದ ಕೊರೊನಾ ಲಸಿಕೆ ರಿಹರ್ಸಲ್!

Published On - 7:05 am, Mon, 28 December 20

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?