ಲಾಕ್ಡೌನ್ ನಡುವಿನ ಬೆಂಗಳೂರನ್ನು ಕಂಡಿರಾ? ನೋಡಿ ನಗರದ ಪ್ರಮುಖ ಸ್ಥಳಗಳ ಚಿತ್ರಗಳು
Bengaluru Lockdown photos: ಪ್ರತಿದಿನ, ಪ್ರತಿಕ್ಷಣ..ಒಂದು ಸೆಕೆಂಡೂ ಬಿಡುವಿಲ್ಲದೇ ಲೋಕದ ಆಗುಹೋಗುಗಳಿಗೆ ತೆರೆದುಕೊಳ್ಳುತ್ತಿದ್ದ ಬೆಂಗಳೂರಿನ ರಸ್ತೆಗಳು ಅಕ್ಷರಶಃ ಭಣಗುಡುತ್ತಿವೆ. ( ಚಿತ್ರಗಳು: ಅಪೂರ್ವ ಕುಮಾರ್ ಬಾಳೆಗೆರೆ)

ಇದೇ ನೋಡಿ..ಪ್ರಸಿದ್ಧ ಟೌನ್ ಹಾಲ್. ಲಾಕ್ಡೌನ್ ಜಾರಿಯಾದಾಗಿನಿಂದ ಟೌನ್ಹಾಲ್ ಸುತ್ತಮುತ್ತ ಮೌನದ್ದೇ ಸದ್ದು..
- ಕರ್ನಾಟಕ ಲಾಕ್ಡೌನ್ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧ ಸ್ಥಳಗಳು ಹೇಗಿವೆ ಎಂಬ ಚಿತ್ರಣವನ್ನು ಟಿವಿ9 ಕನ್ನಡ ಡಿಜಿಟಲ್ ಓದುಗರಿಗಾಗಿ ತೆರೆದಿಡುತ್ತಿದೆ.
- ಇಂತಹ ಸಾವಿರಾರು ರಸ್ತೆಗಳು, ಮಾರುಕಟ್ಟೆಗಳು, ಪೇಟೆಗಳು, ಬೀದಿಗಳು ಮತ್ತೆ ಜನರ ಬರುವಿಕೆಗೆ ಕಾದುಕುಳಿತಿವೆ. ಅಂದರೆ ಕೊವಿಡ್ ಸೋಂಕು ಸಂಪೂರ್ಣ ಕಡಿಮೆಯಾಗಲು ಕಾಯ್ದುಕುಳಿತಿವೆ. ಆದಷ್ಟು ಬೇಗ ಕೊವಿಡ್ ಕಳೆಯಲು ಪ್ರಾರ್ಥಿಸುತ್ತಿವೆ.
- ಆದರೆ ಕೊವಿಡ್ ಮುಗಿಯುವುದು ಎಂದು? ಯಾವಾಗ? ಮತ್ತು ಹೇಗೆ? ಬೆಂಗಳೂರಿನಲ್ಲಿ ಕಡಿಮೆಯಾದರೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೊವಿಡ್ ಹರಡುತ್ತಿರುವ ವೇಗ ಗಾಬರಿ ಹುಟ್ಟಿಸುವಂತಿದೆ.
- ಕೆಆರ್ ಮಾರುಕಟ್ಟೆ ಎಂದರೆ ಬೆಂಗಳೂರು ನಗರದ ಜೀವಕೇಂದ್ರ. ಅಲ್ಲಿಯ ಚಲನವಲನ, ಚಟುವಟಿಕೆ, ಧ್ವನಿ- ಪ್ರತಿಧ್ವನಿ ಲಾಕ್ಡೌನ್ನಲ್ಲಿ ಕಳೆದುಹೋಗಿದೆ. ಕೊವಿಡ್ ಸೋಂಕು ಮರೆಯಾದ ಬಳಿಕವಷ್ಟೇ ಇಂತಹ ಎಷ್ಟೋ ಮಾರುಕಟ್ಟೆಗಳು ಮತ್ತೆ ಮೈದಳೆಯಲಿವೆ.
- ಇದೇ ನೋಡಿ..ಪ್ರಸಿದ್ಧ ಟೌನ್ ಹಾಲ್. ಲಾಕ್ಡೌನ್ ಜಾರಿಯಾದಾಗಿನಿಂದ ಟೌನ್ಹಾಲ್ ಸುತ್ತಮುತ್ತ ಮೌನದ್ದೇ ಸದ್ದು..
- ಬೆಂಗಳೂರಿನ ಟೌನ್ಹಾಲ್ ಸರ್ಕಲ್ ಇಡೀ ರಾಜ್ಯಕ್ಕೆ ಚಿರಪರಿಚಿತ ಸ್ಥಳ. ಕೊವಿಡ್ ತಡೆಯಲು ಹರಸಾಹಸ ಪಡುತ್ತಿರುವ ಕರ್ನಾಟಕ ಸರ್ಕಾರ ವಿಧಿಸಿರುವ ಲಾಕ್ಡೌನ್ನಿಂದ ಈ ಜಾಗದಲ್ಲೂ ಜನಸಂಚಾರವಿರಲಿಲ್ಲ.
- ಸಾಂದರ್ಭಿಕ ಚಿತ್ರ
- ಪ್ರತಿದಿನ, ಪ್ರತಿಕ್ಷಣ..ಒಂದು ಸೆಕೆಂಡೂ ಬಿಡುವಿಲ್ಲದೇ ಲೋಕದ ಆಗುಹೋಗುಗಳಿಗೆ ತೆರೆದುಕೊಳ್ಳುತ್ತಿದ್ದ ಬೆಂಗಳೂರಿನ ರಸ್ತೆಗಳು ಅಕ್ಷರಶಃ ಭಣಗುಡುತ್ತಿವೆ.
Published On - 7:32 pm, Sun, 16 May 21