
ಬೆಂಗಳೂರು, ಜನವರಿ 01: 2025ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷ 2026ನ್ನು (New Year) ಎಲ್ಲರೂ ವೆಲ್ಕಂ ಮಾಡಿದರು. ರಾಜ್ಯದ ಜನರು ಹೊಸ ವರ್ಷವನ್ನು ಸಂಭ್ರಮ ಸಡಗರದಿಂದ ಬರಮಾಡಿಕೊಂಡಿದ್ದಾರೆ. ಬೆಂಗಳೂರಿನ (bangaluru) ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಚರ್ಚ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಹಲವೆಡೆ ಸೆಲೆಬ್ರೇಷನ್ ಜೋರಾಗಿತ್ತು. ಕಿಕ್ಕೇರಿಸಿಕೊಂಡು ಎಲ್ಲರೂ ಕುಣಿದು ಕುಪ್ಪಳಿಸಿದ್ದು, ಹೊಸ ವರ್ಷವನ್ನ ಮಸ್ತ್ ಎಂಜಾಯ್ ಮಾಡಿದರು. ಸಂಭ್ರಮಾಚರಣೆ ನಡುವೆಯೇ ಕೆಲ ಕಿರಿಕ್ ಕೂಡ ನಡೆದಿದ್ದು, ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಂತೆ ಮನೆ ದಾರಿ ಹಿಡಿದರು.
ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಓಪೇರಾ ರಸ್ತೆಯಲ್ಲಿ ಸೆಲೆಬ್ರೇಷನ್ ಜೋರಾಗಿತ್ತು. ಈ ವೇಳೆ ಸಂಭ್ರಮಾಚರಣೆ ನಡುವೆಯೇ ಹಲವು ಕಿರಿಕ್ ನಡೆದಿವೆ. ಒಪೇರಾ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಗೆಳೆಯನ ಮೇಲೆ ಯುವತಿ ಹಲ್ಲೆ ಮಾಡಿದ್ದಾಳೆ. ನ್ಯೂಇಯರ್ ಆಚರಣೆಗೆ ಆಗಮಿಸಿದ್ದ ಜೋಡಿ ನಡುರೋಡಲ್ಲೇ ಹೈಡ್ರಾಮಾ ಕ್ರಿಯೇಟ್ ಮಾಡಿದೆ. ನಶೆಯಲ್ಲಿದ್ದ ಜೋಡಿಯನ್ನು ಸಮಾಧಾನಪಡಿಸಲು ಪೊಲೀಸು ಹರಸಹಾಸ ಪಡುವಂತಾಯ್ತು. ಕುಡಿದು ಟೈಟಾದ ಪ್ರೇಯಸಿಯನ್ನ ಮಗುವಿನ ರೀತಿ ಪ್ರಿಯಕರ ಹೊತ್ತೊಯ್ದಿದ್ದಾನೆ.
ಇದನ್ನೂ ಓದಿ: ನ್ಯೂ ಇಯರ್ ಕಿಕ್: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್
ಕೋರಮಂಗಲದ ಟೋಕಾ ಪಬ್ನಲ್ಲಿ ಯುವಕರಿಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಓರ್ವ ಯುವಕನ ತಲೆಗೆ ಗಾಯವಾಗಿದೆ. ಗಾಯಗೊಂಡ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಆ್ಯಂಬುಲೆನ್ಸ್ ಹತ್ತಲು ಹಿಂದೇಟು ಹಾಕಿದ ಯುವಕನಿಗೆ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ.
ಬ್ರಿಗೇಡ್ ರಸ್ತೆಯಲ್ಲಿ ನಡು ರಸ್ತೆಯಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ನ್ಯೂ ಇಯರ್ ಖುಷಿಯಲ್ಲಿ ಯುವಕರು ನಡುರೋಡಲ್ಲೇ ಪಟಾಕಿ ಸಿಡಿಸಿದ್ದರು. ರಸ್ತೆಯಲ್ಲೇ ಪಟಾಕಿ ಹಚ್ಚಿದಕ್ಕೆ ಕುಡಿದು ಮತ್ತಿನಲ್ಲಿದ್ದ ಯುವಕರ ಗುಂಪಿಗೆ ಪೊಲೀಸರು ಲಾಠಿ ಬೀಸಿ ಕಿಕ್ ಇಳಿಸಿದರು. ಯುವಕರ ಗುಂಪು ಎದ್ನೋ ಬಿದ್ನೋ ಅಂತಾ ಓಡಿ ಹೋದರು.
ಇದನ್ನೂ ಓದಿ: New Year 2026: ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಯುವಸಮೂಹ
ಇನ್ನು ಖುದ್ದು ಜನರನ್ನ ಕಂಟ್ರೋಲ್ ಮಾಡಲು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಫೀಲ್ಡಿಗಿಳಿದರು. ಯಾವುದೇ ತೊಂದರೆ ಇಲ್ಲದೆ ಸೇಫ್ಟಿ ನೀಡಿದ ಕಮಿಷನರ್ಗೆ ಕೆಲ ಜನರು ಹೂವಿನ ಗುಚ್ಚ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.