ಬೆಂಗಳೂರು-ಒಡಿಶಾ ರೈಲು ಮಾರ್ಗ ಸಂಚಾರ ಮುಕ್ತ: 8 ರಲ್ಲಿ 2 ರೈಲು ರದ್ದು; ಇಲ್ಲಿದೆ ಮಾಹಿತಿ

|

Updated on: Jun 05, 2023 | 1:56 PM

ಘನ ಘೋರ ದುರಂತ ಸಂಭವಿಸಿ 51 ಗಂಟೆಗಳ ನಂತರ ಬಹನಾಗಾ ರೈಲು ಹಳಿ ಜೋಡಣಾ ಕಾರ್ಯ ಪೂರ್ಣಗೊಂಡಿದ್ದು, ರೈಲು ಸಂಚಾರಕ್ಕೆ ಮುಕ್ತವಾಗಿದೆ. ಈ ಹಿನ್ನೆಲೆ ಇಂದಿನಿಂದ (ಜೂ.05) ಬೆಂಗಳೂರು-ಒಡಿಶಾ ಮಾರ್ಗದ ರೈಲುಗಳು ಸಂಚಾರ ಮಾಡಲಿವೆ.

ಬೆಂಗಳೂರು-ಒಡಿಶಾ ರೈಲು ಮಾರ್ಗ ಸಂಚಾರ ಮುಕ್ತ: 8 ರಲ್ಲಿ 2 ರೈಲು ರದ್ದು; ಇಲ್ಲಿದೆ ಮಾಹಿತಿ
ರೈಲು
Follow us on

ಬೆಂಗಳೂರು: ಒಡಿಶಾದ (Odisha) ಬಾಲಾಸೋರ್ (Balasore) ಜಿಲ್ಲೆಯಲ್ಲಿ ಶುಕ್ರವಾರ (ಜೂ.2) ರಾತ್ರಿ ಸಂಭವಿಸಿದ್ದ ಭೀಕರ ತ್ರಿವಳಿ ರೈಲು ಅಪಘಾತಕ್ಕೆ (Odisha Train Accident) ದೇಶವೇ ಮರುಗುತ್ತಿದೆ. ಈ ಘಟನೆಯ ನಂತರ ಹೌರಾ (ಕೊಲ್ಕತ್ತಾ) ಕಡೆಗೆ ತೆರಳು ರೈಲುಗಳನ್ನು ರದ್ದು ಮಾಡಲಾಗಿತ್ತು. ಇದೀಗ ಘನ ಘೋರ ದುರಂತ ಸಂಭವಿಸಿ 51 ಗಂಟೆಗಳ ಬಳಿಕ ಬಹನಾಗಾ ರೈಲು ಹಳಿ ಜೋಡಣಾ ಕಾರ್ಯ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಈ ಹಿನ್ನೆಲೆ ಇಂದಿನಿಂದ (ಜೂ.05) ಬೆಂಗಳೂರು-ಒಡಿಶಾ (Bengaluru-Odisha) ಮಾರ್ಗದ ರೈಲುಗಳು ಸಂಚಾರ ಮಾಡಲಿವೆ.

ಇಂದು ಒಟ್ಟು ಎಂಟು ರೈಲುಗಳು ಬೆಂಗಳೂರಿನಿಂದ ಬಹನಾಗಾ ಮಾರ್ಗದಲ್ಲಿ ಸಂಚಾರ ಮಾಡಬೇಕಿತ್ತು. ಆದರೆ ಎರಡು ರೈಲುಗಳ ಸಂಚಾರ ರದ್ದಾಗಿದೆ. ಉಳಿದ ಆರು ರೈಲುಗಳು ಯಥಾಪ್ರಕಾರ ಪ್ರಯಾಣ ಮಾಡಲಿವೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರೈಲು ದುರಂತ ನಡೆದ ಸ್ಥಳದಲ್ಲಿ ನಿರ್ಮಾಣವಾದ ಹೊಸ ಹಳಿಯನ್ನು ದಾಟಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

ರದ್ದಾದ ಎರಡು ರೈಲುಗಳು

ಬೈಯಪ್ಪನಹಳ್ಳಿಯ ಸರ್​​.ಎಂ ವಿಶ್ವೇಶ್ವರಯ್ಯ ಟರ್ಮಿನಲ್​ ರೈಲು ನಿಲ್ದಾಣದಿಂದ ತೆರಳಬೇಕಿದ್ದ (ರೈಲು ಸಂಖ್ಯೆ 12246) ಹೌರಾ-ದುರಂತೋ ಎಕ್ಸ್‌ಪ್ರೆಸ್, (ರೈಲು ಸಂಖ್ಯೆ 12864) ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದಾಗಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

51 ಗಂಟೆ ಬಳಿಕ ರೈಲು ಸಂಚಾರ ಪುನರಾರಂಭ

ಅಪಘಾತ ಸಂಭವಿಸಿದ 51 ಗಂಟೆ ಬಳಿಕ ರೈಲು ಸಂಚಾರ ಪುನರಾರಂಭವಾಗಿದೆ. ಹಾಳಾಗಿದ್ದ ಹಳಿ ದುರಸ್ತಿ ಕಾರ್ಯ ಶರವೇಗದಲ್ಲಿ ಮುಗಿದಿದ್ದು, ನಿನ್ನೆ (ಜೂ.04) ರಾತ್ರಿ 11 ಗಂಟೆ ಸುಮಾರಿಗೆ ಬಹಾನಾಗ ಹಳಿ ಮೇಲೆ ಮೊದಲಿಗೆ ಗೂಡ್ಸ್​​ ರೈಲುಗಳ ಸಂಚಾರ ಆರಂಭವಾಯಿತು. ವಿಶಾಖಪಟ್ಟಣಂ-ರೋರ್ಕೆಲಾ ಗೂಡ್ಸ್​ ರೈಲು ಸಂಚಾರ ಆರಂಭವಾಗಿದ್ದು, ಈ ವೇಳೆ ಸ್ಥಳದಲ್ಲೇ ಇದ್ದ ರೈಲ್ವೇ ಸಚಿವ ಅಶ್ವೀನಿ ವೈಷ್ಣವ ರೈಲಿಗೆ ನಮಸ್ಕರಿಸಿದ್ದು, ವಿಶೇಷವಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Mon, 5 June 23