AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಪ್ರಾಣಿಹತ್ಯೆ ನಿಷೇಧ ಪರ, ಆದ್ರೆ ಸಂಪುಟದಲ್ಲಿ ಮಾತಾಡಲ್ಲ: ರಾಮಲಿಂಗಾ ರೆಡ್ಡಿ

ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣ ನಿಷೇಧ ಮಾಡುವುದಿಲ್ಲ. ಬಿಜೆಪಿಯವರು ರೈತರಿಗೆ ಅನಾನುಕೂಲವಾಗು ರೀತಿ ಮಾಡಿದ್ದರು. ಈ ಕಾಯ್ದೆಯ ಮೂಲಕ ಬಿಜೆಪಿಯವರ ಸಂಘಟನೆಗಳು ವಸೂಲಿ ದಂಧೆ ಮಾಡಿಕೊಂಡಿದ್ದರು. ನಾವು ಕಾಯ್ದೆಯ ಕೆಲವು ನಿಯಮಗಳನ್ನು ಸಡಿಲಗೊಳಿಸಲಿದ್ದೇವೆ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ನಾನು ಪ್ರಾಣಿಹತ್ಯೆ ನಿಷೇಧ ಪರ, ಆದ್ರೆ ಸಂಪುಟದಲ್ಲಿ ಮಾತಾಡಲ್ಲ: ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ
Follow us
ವಿವೇಕ ಬಿರಾದಾರ
|

Updated on:Jun 05, 2023 | 1:06 PM

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ (Prohibition of Cow Slaughter Act) ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ (Congress)​ ಮತ್ತು ಬಿಜೆಪಿ (BJP) ನಡುವೆ ವಾಗ್ದಾಳಿ ಜೋರಾಗಿದೆ. ಇನ್ನು ಗೋಹತ್ಯೆ ನಿಷೇಧ ಕಾಯ್ದೆಯನ್ನು ನಿಷೇಧಿಸಲು ಕಾಂಗ್ರೆಸ್​ ಸರ್ಕಾರ ಮುಂದಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಮಾತನಾಡಿ ಪ್ರಾಣಿಗಳನ್ನು ಕೊಲ್ಲಬಾರದು, ನಾನು ಪ್ರಾಣಿಹತ್ಯೆ ನಿಷೇಧ ಪರ ಇದ್ದೇನೆ. ಆದರೆ ಸಂಪುಟದಲ್ಲಿ ಈ ಬಗ್ಗೆ ಮಾತನಾಡುವುದಿಲ್ಲ. 64 ಲಕ್ಷ ಜೀವ ರಾಶಿಗಳನ್ನೂ ಹತ್ಯೆ ಮಾಡಬಾರದೆಂಬ ನಿಲುವು ನನ್ನದು. 64 ಲಕ್ಷ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂದು ಸಾರಿಗೆ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಗರ ಅಭಿವೃದ್ಧಿ ಬಗ್ಗೆ ಮುಕ್ತವಾಗಿ ಶಾಸಕರ ಜೊತೆ ಮಾತನಾಡುತ್ತೇವೆ. ಈ ಹಿಂದೆ ನಾವಿದ್ದಾಗ ಬಿಬಿಎಂಪಿ ಚುನಾವಣೆ ಸಮಯಕ್ಕೆ ಸರಿಯಾಗಿ ಮಾಡಲಾಗಿತ್ತು. ಈಗಲೂ ಬಿಬಿಎಂಪಿ ಚುನಾವಣೆ ಮಾಡುತ್ತೇವೆ. ಚುನಾಯಿತ ಪ್ರತಿನಿಧಿಗಳಿದ್ದರೆ ಕೆಲಸಗಳು ಸುಲಭವಾಗಿ ಆಗುತ್ತದೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣ ನಿಷೇಧ ಮಾಡುವುದಿಲ್ಲ

ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣ ನಿಷೇಧ ಮಾಡುವುದಿಲ್ಲ. ಬಿಜೆಪಿಯವರು ರೈತರಿಗೆ ಅನಾನುಕೂಲವಾಗು ರೀತಿ ಮಾಡಿದ್ದರು. ಈ ಕಾಯ್ದೆಯ ಮೂಲಕ ಬಿಜೆಪಿಯವರ ಸಂಘಟನೆಗಳು ವಸೂಲಿ ದಂಧೆ ಮಾಡಿಕೊಂಡಿದ್ದರು. ನಾವು ಕಾಯ್ದೆಯ ಕೆಲವು ನಿಯಮಗಳನ್ನು ಸಡಿಲಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ.

ನಾವು ಸಂಪೂರ್ಣ ನಿಷೇಧ ಮಾಡುವುದಿಲ್ಲ ಬದಲಾವಣೆ ಮಾಡಲಾಗುತ್ತೆ. ನಮ್ಮ ರಾಜ್ಯದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅದನ್ನು ಅಪ್ ಗ್ರೇಡ್ ಮಾಡಲಾಗುತ್ತೆ ಎಂದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಶುರುವಾಯ್ತು ಗೋವು ಗಲಾಟೆ: ಬಿಜೆಪಿ-ಕಾಂಗ್ರೆಸ್‌ ಮಧ್ಯೆ ‘ಗೋಹತ್ಯೆ’ ಸಮರ

ಒಂದು ಕೋಮಿನವರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ

ಗ್ಯಾರಂಟಿ ಗೊಂದಲವನ್ನು ಡೈವರ್ಟ್​ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇದೇ ಕಾರಣಕ್ಕೆ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ. ಒಂದು ಕೋಮಿನವರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕೆ.ಆರ್​.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ತಮಗೆ ಮತ ನೀಡಿದ್ದಾರೆ ಎಂಬ ಕಾರಣಕ್ಕೆ ಅವರ ಪರ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್​​ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುತ್ತಿದೆ. ಕಾಂಗ್ರೆಸ್​ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:19 pm, Mon, 5 June 23