ಅನಾವಶ್ಯಕವಾಗಿ ಹೊರಗೆ ಬಂದ್ರೆ ಹುಷಾರ್! ಗಾಡಿ ಸೀಜ್ ಮಾಡಿ ಕೇಸ್ ಹಾಕ್ತೀವಿ -ಕಮಲ್ ಪಂತ್ ಎಚ್ಚರಿಕೆ

|

Updated on: Apr 22, 2021 | 7:54 AM

ನೈಟ್ ಕರ್ಫ್ಯೂ ವೇಳೆ ಗಾಡಿ ಹೊರಗೆ ತಂದ್ರೆ ಗಾಡಿ ಸೀಜ್ ಮಾಡಿ ದಂಡ ಹಾಕಲಾಗುತ್ತೆ. ದಂಡದ ಜೊತೆಗೆ ಕೇಸ್ ಕೂಡ ಬೀಳುತ್ತೆ. ಸುಮ್ಮನೆ ಬಿಟ್ಟು ಕಳಿಸೋ ಮಾತೆ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ಕೊಟ್ಟಿದ್ದಾರೆ.

ಅನಾವಶ್ಯಕವಾಗಿ ಹೊರಗೆ ಬಂದ್ರೆ ಹುಷಾರ್! ಗಾಡಿ ಸೀಜ್ ಮಾಡಿ ಕೇಸ್ ಹಾಕ್ತೀವಿ -ಕಮಲ್ ಪಂತ್ ಎಚ್ಚರಿಕೆ
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​
Follow us on

ಬೆಂಗಳೂರು: ಅನಾವಶ್ಯಕವಾಗಿ ಹೊರಗೆ ಬಂದ್ರೆ ಹುಷಾರ್. ರಾತ್ರಿ ವೇಳೆ ಓಡಾಡಿದ್ರೆ ಐಡಿ ತೋರಿಸಬೇಕು, ಪ್ರಯಾಣಿಕರು ಟಿಕೆಟ್ ತೋರಿಸಬೇಕು. ನೈಟ್ ಕರ್ಫ್ಯೂ ವೇಳೆ ಗಾಡಿ ಹೊರಗೆ ತಂದ್ರೆ ಗಾಡಿ ಸೀಜ್ ಮಾಡಿ ದಂಡ ಹಾಕಲಾಗುತ್ತೆ. ದಂಡದ ಜೊತೆಗೆ ಕೇಸ್ ಕೂಡ ಬೀಳುತ್ತೆ. ಸುಮ್ಮನೆ ಬಿಟ್ಟು ಕಳಿಸೋ ಮಾತೆ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ಕೊಟ್ಟಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಕೊರೊನಾ 2ನೇ ಅಲೆಯ ಆರ್ಭಟ ಹೆಚ್ಚಾಗಿದ್ದು ಪ್ರತಿ ದಿನ ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾಗೆ ಕಡಿವಾಣ ಹಾಕಲು ಪೊಲೀಸರು ತಯಾರಿ ಮಾಡಿಕೊಂಡಿದ್ದು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಅನಾವಶ್ಯಕವಾಗಿ ರಸ್ತೆಗೆ ಇಳಿಯದಂತೆ ಸಾರ್ವಜನಿಕರಿಗೆ ಕಮಲ್ ಪಂತ್ ಎಚ್ಚರಿಕೆ ಕೊಟ್ಟಿದ್ದಾರೆ.

ಸಭೆ ಸಮಾರಂಭ ಧಾರ್ಮಿಕ ಕಾರ್ಯಕ್ರಮಗಳಿಗೆ ಬ್ರೇಕ್ ಬೀಳಲಿದೆ. ರೆಸ್ಟೋರೆಂಟ್ ಹೋಟೆಲ್ನಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿದೆ. 144 ಸೆಕ್ಷನ್ ಪ್ರಕಾರ ಎಲ್ಲೂ ಕೂಡ 4 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಬಸ್ಗಳಲ್ಲಿ 50% ರಷ್ಟು ಮಾತ್ರ ಜನ ತುಂಬಿಸಿಕೊಳ್ಳಬೇಕು. ಆದೇಶ ಪಾಲನೆ ಮಾಡದಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ತಿಳಿಸಿದ್ದಾರೆ. ಇನ್ನು ಕಲ್ಯಾಣ ಮಂಟಪ ಮಾಲೀಕರಿಂದ ನಿಯಮ‌ ಉಲ್ಲಂಘನೆಯಾದ್ರೆ ಕಲ್ಯಾಣ ಮಂಟಪ ಸೀಜ್ ಮಾಡಲು ನಿರ್ಧಾರ ಮಾಡಲಾಗಿದೆ.

ಚೆಕ್ ಪೋಸ್ಟ್ಗಳಲ್ಲಿ ಸೂಕ್ತ ಐಡಿ, ದಾಖಲೆಗಳನ್ನು ತೋರಿಸಿದ್ರೆ ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ. ಆದ್ರೆ ಅನವಶ್ಯಕ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ವಾಹನಗಳನ್ನು ಸೀಜ್ ಮಾಡಿ ದಂಡ ವಿಧಿಸಲಾಗುವುದು. ನಾಗರೀಕರು ಸಹಕರಿಸಬೇಕು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು. ತಮ್ಮ ಭದ್ರತೆ ಸಲುವಾಗಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕೆಂದು ನಗರ ಪೊಲೀಸ್ ಆಯುಕ್ತ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ನೈಟ್ ಕರ್ಫ್ಯೂ: ಭದ್ರತೆಗೆ ಪೊಲೀಸರಿಂದ ಸಿದ್ಧತೆ, ಎಲ್ಲಾ ಡಿಸಿಪಿಗಳ ಜೊತೆ ಕಮಲ್ ಪಂತ್ ಚರ್ಚೆ