ಕೊರೊನಾ ನೈಟ್ ಕರ್ಫ್ಯೂ: ಭದ್ರತೆಗೆ ಪೊಲೀಸರಿಂದ ಸಿದ್ಧತೆ, ಎಲ್ಲಾ ಡಿಸಿಪಿಗಳ ಜೊತೆ ಕಮಲ್ ಪಂತ್ ಚರ್ಚೆ
ನೈಟ್ ಕರ್ಫ್ಯೂ ವೇಳೆ ಭದ್ರತೆಗೆ ಪೊಲೀಸರು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಭದ್ರತೆ ವಿಚಾರವಾಗಿ ಇಂದು ಪೊಲೀಸ್ ಆಯುಕ್ತರ ಸಭೆ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪೊಲೀಸ್ ಆಯುಕ್ತರ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದುಬಂದಿದೆ.
ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ಕೆಲವು ನಗರದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿ ಗುರುವಾರ ಆದೇಶ ಹೊರಡಿಸಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ರವರೆಗೆ ಸುಮಾರು 8 ನಗರಗಳಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಮತ್ತು ಈ ಕರ್ಫ್ಯೂ ಇಂದಿನಿಂದ ಆರಂಭವಾಗಲಿದೆ. ನೈಟ್ ಕರ್ಫ್ಯೂ ವೇಳೆ ಭದ್ರತೆಗೆ ಪೊಲೀಸರು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಭದ್ರತೆ ವಿಚಾರವಾಗಿ ಇಂದು ಪೊಲೀಸ್ ಆಯುಕ್ತರ ಸಭೆ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪೊಲೀಸ್ ಆಯುಕ್ತರ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದುಬಂದಿದೆ.
ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಎಲ್ಲ ಸಂಚಾರಕ್ಕೆ ತಡೆ ಹಿಡಿಯಲಾಗುತ್ತದೆ. ಆದರೆ ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡುತ್ತೇವೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ರಾತ್ರಿ ಪಾಳಿ ಕೆಲಸ ಮಾಡುವವರಿಗೂ ನಿಯಮ ಅನ್ವಯವಾಗಲಿದ್ದು, ರಾತ್ರಿ 10 ರೊಳಗೆ ಕಚೇರಿ ತಲುಪಿ ಬೆಳಗ್ಗೆ 5ರ ನಂತರ ಹೊರಬರಲಿ ಎಂದಿದ್ದಾರೆ. ರಾತ್ರಿ ಸಮಯದಲ್ಲಿ ಪ್ರಯಾಣಕ್ಕೆ ಟಿಕೆಟ್ ಕಡ್ಡಾಯವಾಗಿದೆ. ರಾತ್ರಿ ಸಮಯದಲ್ಲಿ ಬೆಂಗಳೂರಿಗೆ ತೆರಳುವ ರೈಲು, ಬಸ್, ವಿಮಾನದ ಟಿಕೆಟ್ ತೋರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೊರೊನಾ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ. ಕೊರೊನಾ ಕರ್ಫ್ಯೂ ವೇಳೆ ಯಾವುದೇ ಪಾಸ್ ಬೇಕಿಲ್ಲ. ಸುಖಾಸುಮ್ಮನೆ ವಾಹನ ಓಡಾಡಿದರೆ ಸೀಜ್ ಮಾಡುತ್ತೇವೆ. ಏನೇ ಕೆಲಸ ಇದ್ದರೂ ರಾತ್ರಿ 10ರೊಳಗೆ ಮನೆ ತಲುಪಬೇಕು. ರಾತ್ರಿ 10 ಗಂಟೆಯೊಳಗೆ ಎಲ್ಲಾ ಅಂಗಡಿ ಮುಚ್ಚಬೇಕು. ಇಲ್ಲವಾದರೆ ಅಂಗಡಿಗಳನ್ನು ಸೀಜ್ ಮಾಡಲಾಗುವುದು. ಎನ್ಡಿಎಂಎ ಅಡಿ ಕೇಸ್ ದಾಖಲು ಮಾಡಲಾಗುವುದು ಮತ್ತು ರಾತ್ರಿ ವೇಳೆ ನಗರದ ಎಲ್ಲಾ ಫ್ಲೈ ಓವರ್ಗಳು ಬಂದ್ ಆಗಲಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ
ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ: ಜಂಟಿ ಕಾರ್ಯದರ್ಶಿ ಆನಂದ್
ಕೋಳಿಗಳಿಗೆ ಅಂತ್ಯಸಂಸ್ಕಾರ; ಸಾಕು ಪ್ರಾಣಿ ಸಾವಿಗೆ ಮರುಕ ವ್ಯಕ್ತಪಡಿಸಿದ ಕೋಲಾರದ ಕುಟುಂಬ
(Corona night curfew ADGP kamal pant to discuss with all DCP regarding security)