Bus Strike: ಮುಗಿಯದ ಮುಷ್ಕರ.. ಸಾಲು ಸಾಲು ರಜೆ ಹಿನ್ನೆಲೆ ನೆರೆ ರಾಜ್ಯಗಳ ಸಾರಿಗೆ ಇಲಾಖೆ ಮೊರೆ ಹೋದ ಕೆಎಸ್ಆರ್ಟಿಸಿ
ರಾಜ್ಯದಲ್ಲಿ ಹೆಚ್ಚುವರಿ ಬಸ್ ಸಂಚಾರಕ್ಕೆ ಸಹಕರಿಸುವಂತೆ ನೆರೆ ರಾಜ್ಯಗಳಿಗೆ ಕೆಎಸ್ಆರ್ಟಿಸಿ ಮನವಿ ಮಾಡಿದ್ದು, ರಾಜ್ಯದಲ್ಲಿ ಹೆಚ್ಚುವರಿಯಾಗಿ 150 ಬಸ್ ಸಂಚಾರ ನಡೆಸಲಿವೆ. ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳ ಬಸ್ ಸಂಚಾರ ನಡೆಸಲಿದ್ದು, ಬೇರೆ ಬೇರೆ ಊರುಗಳಿಗೆ ತೆರಳುವವರಿಗೆ ಕೊಂಚ ಸಹಕಾರಿಯಾಗಲಿದೆ.
ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ತಿಕ್ಕಾಟದಿಂದಾಗಿ ನಾಲ್ಕನೇ ದಿನವೂ ಜನಸಾಮಾನ್ಯರು ಬಸ್ ಇಲ್ಲದೇ ಪರದಾಡುತ್ತಿದ್ದಾರೆ. ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರ ಮುಂದಾಗದ ಕಾರಣ ಮುಷ್ಕರ ಮುಂದುವರೆದಿದೆ. ಇತ್ತ ಇಂದಿನಿಂದ ಸಾಲು ಸಾಲು ರಜೆಗಳಿರುವ ಕಾರಣ ಜನರು ಊರಿಗೆ ತೆರಳಲು ಸಿದ್ಧತೆ ನಡೆಸಿಕೊಂಡಿದ್ದು ಸಂಚಾರ ವ್ಯವಸ್ಥೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಹೀಗಾಗಿ ಜನ ಸಾಮಾನ್ಯರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು ಸಾರಿಗೆ ಇಲಾಖೆಯ ಮೊರೆ ಹೋಗಿದೆ.
ರಾಜ್ಯದಲ್ಲಿ ಹೆಚ್ಚುವರಿ ಬಸ್ ಸಂಚಾರಕ್ಕೆ ಸಹಕರಿಸುವಂತೆ ನೆರೆ ರಾಜ್ಯಗಳಿಗೆ ಕೆಎಸ್ಆರ್ಟಿಸಿ ಮನವಿ ಮಾಡಿದ್ದು, ರಾಜ್ಯದಲ್ಲಿ ಹೆಚ್ಚುವರಿಯಾಗಿ 150 ಬಸ್ ಸಂಚಾರ ನಡೆಸಲಿವೆ. ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳ ಬಸ್ ಸಂಚಾರ ನಡೆಸಲಿದ್ದು, ಬೇರೆ ಬೇರೆ ಊರುಗಳಿಗೆ ತೆರಳುವವರಿಗೆ ಕೊಂಚ ಸಹಕಾರಿಯಾಗಲಿದೆ. ಅದರೊಂದಿಗೆ ಖಾಸಗಿ ಬಸ್ಗಳು ಸಂಚಾರ ನಿರ್ವಹಿಸಲಿವೆಯಾದರೂ ಹಬ್ಬದ ನೆಪದಲ್ಲಿ ದುಪ್ಪಟ್ಟು ವಸೂಲಿ ಮಾಡುವ ಸಾಧ್ಯತೆ ಇರುವ ಕಾರಣ ಪ್ರಯಾಣಿಕರಿಗೆ ತಲೆಬಿಸಿಯಾಗಿದೆ.
ಬೆಂಗಳೂರು ಮೈಸೂರು ನಡುವೆ ವಾರದ ಏಳು ದಿನವೂ ಮೆಮು ರೈಲುಗಳ ಸಂಚಾರ ಸಾರಿಗೆ ನೌಕರರ ಮುಷ್ಕರ ಹಾಗೂ ಯುಗಾದಿ ಹಬ್ಬ ಹಿನ್ನಲೆ ನೈರುತ್ಯ ರೈಲ್ವೇ ಮೆಮು ರೈಲುಗಳ ಕಾರ್ಯಾಚರಣೆ ವಿಸ್ತರಿಸಿದೆ. ಈ ಮೊದಲು ಭಾನುವಾರ ಹೊರತು ಪಡಿಸಿ, ವಾರದ ಉಳಿದ ದಿನಗಳಲ್ಲಿ ಸಂಚರಿಸುತ್ತಿದ್ದ ರೈಲುಗಳು ಯುಗಾದಿ ಹಬ್ಬ ಹಾಗೂ ಮುಷ್ಕರದ ನಿಮಿತ್ತ ಏಳು ದಿನಗಳಲ್ಲೂ ಸಂಚಾರ ನಿರ್ವಹಿಸಲಿವೆ. ಈ ಬಗ್ಗೆ ನೈರುತ್ಯ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ವಿಭಾಗ ಮಾಹಿತಿ ನೀಡಿದ್ದು, ಬೆಂಗಳೂರು – ಮೈಸೂರು ಮಾರ್ಗದ ಮೆಮು ರೈಲುಗಳು ವಾರಪೂರ್ತಿ ಸಂಚರಿಸುವುದಾಗಿ ತಿಳಿದುಬಂದಿದೆ.
ಏಪ್ರಿಲ್ 15 ರವರೆಗೆ ಕರ್ನಾಟಕದಲ್ಲಿ ಹೆಚ್ಚುವರಿ ರೈಲು ಸಂಚಾರ ಯುಗಾದಿ ಹಬ್ಬ ಮತ್ತು ಕರ್ನಾಟಕದಲ್ಲಿನ ಸಾರಿಗೆ ಸಿಬ್ಬಂದಿಗಳ ಮುಷ್ಕರದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಪ್ರಿಲ್ 15 ರವರೆಗೆ ಒಟ್ಟು 20 ಹೊಸ ರೈಲುಗಳನ್ನು ಪ್ರಾರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೇ ವಲಯ ತಿಳಿಸಿದೆ. ಈ ರೈಲುಗಳ ಪ್ರಯಾಣ ದರ ಸಾಮಾನ್ಯ ರೈಲುಗಳ ದರಕ್ಕಿಂತ ಶೇ 1.3 ರಷ್ಟು ಹೆಚ್ಚಿದೆ. ಇತರ ರೈಲುಗಳಿಗಿಂತ ಹೆಚ್ಚು ಸೌಲಭ್ಯವನ್ನೂ ಒದಗಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಏಪ್ರಿಲ್ 13 ರಂದು ಯುಗಾದಿ ಹಬ್ಬವಿದ್ದು , ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ರೈಲು ಮುಷ್ಕರವೂ ನಡೆಯುತ್ತಿದೆ. ಬೆಂಗಳೂರಿನಿಂದ ತಮ್ಮ ಊರುಗಳಿಗೆ ಸಾಮಾನ್ಯ ದಿನಗಳಿಗಿಂತ ಹೆಚ್ಚು ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ.
20 ವಿಶೇಷ ರೈಲುಗಳ ಪೈಕಿ 8 ರೈಲುಗಳು ಬೆಂಗಳೂರಿನ ಯಶವಂತಪುರದಿಂದ ಮೂರು ರೈಲುಗಳು ಪ್ರಯಾಣ ಬೆಳೆಸಲಿವೆ. ಎರಡು ರೈಲುಗಳು ಬೆಳಗಾವಿ, ಬೀದರ್ಗಳಿಂದ ಹೊರಡಲಿವೆ. ತಲಾ ಒಂದೊಂದು ರೈಲುಗಳು ಕೆಎಸ್ಆರ್ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಕಾರವಾರ ಮತ್ತು ವಿಜಯಪುರಗಳಿಂದ ಹೊರಡಲಿವೆ. ಏಪ್ರಿಲ್ 8 ರಿಂದ ಈ ವಿಶೇಷ ರೈಲುಗಳು ಆರಂಭವಾಗಲಿದ್ದು, ಯುಗಾದಿ ಹಬ್ಬಕ್ಕೆ ಪ್ರಯಾಣಿಕರಿಗೆ ಭರ್ಜರಿ ಕೊಡುಗೆ ನೀಡಿದಂತಾಗಿದೆ.
ವಿವರ ಇಲ್ಲಿದೆ: ಯುಗಾದಿ ಹಬ್ಬ, ಸಾರಿಗೆ ಸಿಬ್ಬಂದಿ ಮುಷ್ಕರ: ಸಾರ್ವಜನಿಕರ ನೆರವಿಗೆ ನೈರುತ್ಯ ರೈಲ್ವೆಯಿಂದ 20 ವಿಶೇಷ ರೈಲು
ಇದನ್ನೂ ಓದಿ: Bus Strike: ಬಸ್ ಮುಷ್ಕರದ ಬೆನ್ನಲ್ಲೇ ವಿವಿಧ ವಿಭಾಗಗಳಿಂದ ಸಾರಿಗೆ ನೌಕರರ ವರ್ಗಾವಣೆ
(KSRTC Requests other state government transport to operate in Karnataka during Ugadi)