ಕೋಳಿಗಳಿಗೆ ಅಂತ್ಯಸಂಸ್ಕಾರ; ಸಾಕು ಪ್ರಾಣಿ ಸಾವಿಗೆ ಮರುಕ ವ್ಯಕ್ತಪಡಿಸಿದ ಕೋಲಾರದ ಕುಟುಂಬ
ಟಿ.ವಿ. ಗೋಪಾಲಕೃಷ್ಣ ಎಂಬುವವರು ತಮ್ಮ ತೋಟದ ಮನೆಯಲ್ಲಿ ಸೀಟಿ ಕೋಳಿಗಳು, ನಾಟಿ ಕೋಳಿಗಳು, ಟರ್ಕಿ ಕೋಳಿಗಳು, ನಾಯಿ, ಹಸುಗಳು ಸಾಕಿದ್ದಾರೆ. ವಿಶೇಷವಾಗಿ ಸೀಟಿ ಕೋಳಿ ಮತ್ತು ಟರ್ಕಿ ಕೋಳಿಗಳನ್ನು ಮನೆಯ ಸುತ್ತಮುತ್ತಲು ಯಾವುದೇ ರೀತಿಯ ವಿಷಸರ್ಪಗಳು ಬರದಂತೆ ಮನೆಗೆ ರಕ್ಷಣೆಗಾಗಿ ಸಾಕಿದ್ದಾರೆ.
ಕೋಲಾರ: ಕೋಳಿಗಳು ಸಿಕ್ಕರೆ ಅದರಲ್ಲೂ ನಾಟಿ ಕೋಳಿ ಸಿಕ್ಕರೆ ಬಾಯಿ ಚಪ್ಪರಿಸಿಕೊಂಡು ಅದರಿಂದ ಹಲವು ಬಗೆಯ ರುಚಿ ರುಚಿಯಾದ ಅಡುಗೆ ಮಾಡಿ ತಿಂದು ತೇಗುವ ಜನರನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಬಾಲಕ ಕಳೆದ ಐದು ವರ್ಷಗಳಿಂದ ಪ್ರೀತಿಯಿಂದ ಸಾಕಿದ್ದ ಕೋಳಿಗಳು ಅಕಾಲಿಕವಾಗಿ ಸಾವಿಗೀಡಾಗಿದ್ದಕ್ಕೆ ಕಣ್ಣೀರು ಹಾಕಿ ಅವುಗಳಿಗೆ ಅಂತ್ಯಸಂಸ್ಕಾರ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ.
ಕೋಲಾರ ತಾಲ್ಲೂಕು ತೊಟ್ಲಿ ಗ್ರಾಮದ ಟಿ.ವಿ.ಗೋಪಾಲ್ ಅವರ ಮನೆಯಲ್ಲಿ ಹಲವು ಬಗೆಯ ಕೋಳಿಗಳನ್ನು ಸಾಕಲಗಿತ್ತು, ಈ ಕೋಳಿಗಳ ಜೊತೆಗೆ ಅವರ ಮಗ ಮೌನೀಶ್ ಒಂದು ರೀತಿಯ ಅವಿನಾಭಾವ ಸಂಬಂಧ ಹೊಂದಿದ್ದ ಜೊತೆಗೆ ಅವುಗಳನ್ನು ತನ್ನ ಸ್ನೇಹಿತರಂತೆ ನೋಡಿಕೊಳ್ಳುತ್ತಿದ್ದ. ಕಳೆದ ಐದು ವರ್ಷಗಳಿಂದ ತಮ್ಮ ಮನೆಯಲ್ಲಿದ್ದ ಸೀಟಿ ಕೋಳಿಗಳು ಹಾಗೂ ಟರ್ಕಿ ಕೋಳಿಗಳ ಜೊತೆಗೆ ಆಟವಾಡಿ ಕೊಂಡಿದ್ದ, ಪ್ರತಿನಿತ್ಯ ಅವುಗಳಿಗೆ ಆಹಾರ ಹಾಕುವ ಜೊತೆಗೆ ಆಟ ಪಾಠವನ್ನು ಅದರೊಟ್ಟಿಗೆ ಮಾಡಿ ಕಾಲ ಕಳೆಯುತ್ತಿದ್ದ.
ರಾತ್ರೋ ರಾತ್ರಿ ಸಾವನ್ನಪ್ಪಿವೆ ಪ್ರೀತಿಯ ಕೋಳಿಗಳು ಹೀಗಿರುವಾಗ ಇತ್ತೀಚೆಗೆ ಆ ಕೋಳಿಗಳು ರಾತ್ರೋರಾತ್ರಿ ಏಕಾಏಕಿಯಾಗಿ ಸತ್ತು ಬಿದ್ದಿವೆ. ಇದರಿಂದ ಮನನೊಂದ ಮೌನೀಶ್ ತನ್ನ ಗೆಳೆಯರೊಂದಿಗೆ ಸೇರಿ ಮೃತಪಟ್ಟ ಎರಡು ಸೀಟಿ ಕೋಳಿಗಳನ್ನು ತಮ್ಮ ತೋಟದಲ್ಲಿ ಪೂಜೆ ಪುನಸ್ಕಾರದ ಜೊತೆಗೆ ಹಾಲು ತುಪ್ಪ ಹಾಕಿ, ಕೋಳಿಗೆ ಇಷ್ಟವಾದ ಪದಾರ್ಥಗಳನ್ನಿಟ್ಟು ಕೋಳಿಗಳ ಆತ್ಮಕ್ಕೆ ಶಾಂತಿ ಕೋರಿ, ಅಂತ್ಯಸಂಸ್ಕಾರ ಮಾಡಿದ್ದಾರೆ.
ಟಿ.ವಿ. ಗೋಪಾಲಕೃಷ್ಣ ಎಂಬುವವರು ತಮ್ಮ ತೋಟದ ಮನೆಯಲ್ಲಿ ಸೀಟಿ ಕೋಳಿಗಳು, ನಾಟಿ ಕೋಳಿಗಳು, ಟರ್ಕಿ ಕೋಳಿಗಳು, ನಾಯಿ, ಹಸುಗಳನ್ನು ಸಾಕಿದ್ದಾರೆ. ವಿಶೇಷವಾಗಿ ಸೀಟಿ ಕೋಳಿ ಮತ್ತು ಟರ್ಕಿ ಕೋಳಿಗಳನ್ನು ಮನೆಯ ಸುತ್ತಮುತ್ತ ಯಾವುದೇ ರೀತಿಯ ವಿಷಸರ್ಪಗಳು ಬರದಂತೆ ರಕ್ಷಣೆಗಾಗಿ ಸಾಕಿದ್ದಾರೆ. ಈ ಸೀಟಿ ಕೋಳಿಗಳು ಮನೆಗೆ ರಕ್ಷಣೆ ನೀಡುವುದಲ್ಲದೆ ರಾತ್ರಿ ಸಮಯದಲ್ಲಿ ಯಾರೇ ಕಳ್ಳಕಾಕರು ಮನೆ ಬಳಿ ಬಂದರೂ ಕೂಗಾಟ ಮಾಡಿ ಮನೆಯವರಿನ್ನು ಎಚ್ಚರಿಸುತ್ತವೆ.
ಒಟ್ಟಾರೆ ಹೆತ್ತ ತಂದೆ-ತಾಯಿಗಳನ್ನೇ ಮಕ್ಕಳು ನೋಡದಂತಹ ಪರಿಸ್ಥಿಯಲ್ಲಿ ಕೇವಲ ತಾವು ಪ್ರೀತಿಯಿಂದ ಸಾಕಿದ್ದ ಕೋಳಿಗಳಿಗೆ ಅಂತ್ಯಸಂಸ್ಕಾರ ಮಾಡಿ ಸಾಕು ಪ್ರಾಣಿಗಳ ಮೇಲೆ ತಮಗೆ ಇರುವ ಪ್ರೀತಿ, ಕಾಳಜಿ, ಕುರುಣೆಯನ್ನು ತೋರಿಸಿಕೊಟ್ಟಿದ್ದು, ಮಾನವೀಯ ಸಂಬಂಧಗಳಿಗೆ ಇರುವ ಬೆಲೆ ಏನು ಎಂಬುವುದಕ್ಕೆ ಈ ಮಕ್ಕಳು ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ:
ಚಿಕ್ಕಮಗಳೂರಿನಲ್ಲಿ ಅಪರೂಪದ ಕಾಡುಪಾಪ ದರ್ಶನ.. ನಾಯಿಗಳಿಂದ ರಕ್ಷಿಸಿ, ಸೆಲ್ಫಿ ಕ್ಲಿಕ್ಕಿಸಿ ಸಂತಸಪಟ್ಟ ಜನ
(Family expressed regret at the death of chickens and did funeral in Kolar)