ಚಿಕ್ಕಮಗಳೂರಿನಲ್ಲಿ ಅಪರೂಪದ ಕಾಡುಪಾಪ ದರ್ಶನ.. ನಾಯಿಗಳಿಂದ ರಕ್ಷಿಸಿ, ಸೆಲ್ಫಿ ಕ್ಲಿಕ್ಕಿಸಿ ಸಂತಸಪಟ್ಟ ಜನ

ಕಾಡಿನಿಂದ ದಾರಿ ತಪ್ಪಿ ಬಂದಿದ್ದ ಕಾಡುಪಾಪವನ್ನು ಬೀದಿ ನಾಯಿಗಳು ದಾಳಿ ನಡೆಸಿದ್ದವು. ಸದ್ಯ ನಾಯಿ ದಾಳಿಯಿಂದ ಸ್ಥಳೀಯರು ಕಾಡುಪಾಪವನ್ನು ರಕ್ಷಿಸಿದ್ದಾರೆ. ಅಪರೂಪದ ಪ್ರಾಣಿಕಂಡು ಚಕಿತರಾದ ಜನರು ಅದರ ಜೊತೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂತಸಗೊಂಡಿದ್ದಾರೆ. ..

ಚಿಕ್ಕಮಗಳೂರಿನಲ್ಲಿ ಅಪರೂಪದ ಕಾಡುಪಾಪ ದರ್ಶನ.. ನಾಯಿಗಳಿಂದ ರಕ್ಷಿಸಿ, ಸೆಲ್ಫಿ ಕ್ಲಿಕ್ಕಿಸಿ ಸಂತಸಪಟ್ಟ ಜನ
ಕಾಡುಪಾಪ
Follow us
ಆಯೇಷಾ ಬಾನು
|

Updated on:Mar 24, 2021 | 9:58 AM

ಚಿಕ್ಕಮಗಳೂರು: ಕಾಡಿನಿಂದ ನಾಡಿಗೆ ಬಂದಿದ್ದ ಪ್ರಾಣಿಯೊಂದಿಗೆ ಜನ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟ ಅಪರೂಪದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದಲ್ಲಿ ನಡೆದಿದೆ. ತಡರಾತ್ರಿ ಕಾಡುಪಾಪವೊಂದು ಕಾಡಿನಿಂದ ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್​ಗೆ ದಾರಿತಪ್ಪಿ ಬಂದಿದ್ದು ನಾಯಿಗಳಿಂದ ಅಪರೂಪದ ಅತಿಥಿಯನ್ನು ರಕ್ಷಿಸಿದ್ದಾರೆ. ಅಡವಿ ಪಾಪನ ಕಂಡು ಜನ ಸಂತಸಗೊಂಡಿದ್ದಾರೆ. ಮೊದಲಿಗೆ ಭಯವಾದರೂ ಅದು ಕಾಡುಪಾಪ ಎಂದು ತಿಳಿದ ಮೇಲೆ ಪೆಟ್ರೋಲ್ ಬಂಕ್​ಗೆ ಬಂದಿದ್ದ ಸವಾರರು ಕಾಡುಪಾಪದೊಂದಿಗೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಇನ್ನು ಕಾಡಿನಿಂದ ದಾರಿ ತಪ್ಪಿ ಬಂದಿದ್ದ ಕಾಡುಪಾಪವನ್ನು ಬೀದಿ ನಾಯಿಗಳು ದಾಳಿ ನಡೆಸಿದ್ದವು. ಸದ್ಯ ನಾಯಿ ದಾಳಿಯಿಂದ ಸ್ಥಳೀಯರು ಕಾಡುಪಾಪವನ್ನು ರಕ್ಷಿಸಿದ್ದಾರೆ. ಅಪರೂಪದ ಪ್ರಾಣಿಕಂಡು ಚಕಿತರಾದ ಜನರು ಅದರ ಜೊತೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂತಸಗೊಂಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿ ಅವರ ಸಮ್ಮುಖದಲ್ಲೇ ಚಾರ್ಮಾಡಿ ಅರಣ್ಯದಲ್ಲಿ ಕಾಡುಪಾಪ ಬಿಟ್ಟು ಬಂದಿದ್ದಾರೆ.

ಇನ್ನು ಕಾಡುಪಾಪಗಳಿಗೆ ದೊಡ್ಡ ಕಣ್ಣು(ಪಾಪೆ) ಇರುವುದರಿಂದ ಅದನ್ನು ಅಡವಿ ಪಾಪ ಎಂದೂ ಸಹ ಕರೆಯುತ್ತಾರೆ. ಕಾಡು ಪ್ರಾಣಿಗಳಲ್ಲೇ ಇದು ಅತ್ಯಂತ ಮುಗ್ಧ ಜೀವಿ. ಕಾಡುಪಾಪಗಳಿಗೆ ಹೆಚ್ಚು ನಾಚಿಕೆ ಸ್ವಭಾವವಿರುತ್ತೆ. ಇವು ನಿಶಾಚರಿ ಜೀವಿಗಳಾದ್ದರಿಂದ ಜನರ ಕಣ್ಣಿಗೆ ಬೀಳುವುದು ಅಪರೂಪ. ತಂಪು ಹವೆಯ ಎಲೆ ತೋಟಗಳು, ಮಾವಿನಮರ, ನೀಲಗಿರಿ, ಆಲ, ಅರಳಿ, ಹುಣಸೆ ಮರಗಳಲ್ಲಿ ಇವು ಬೀಡು ಬಿಡುತ್ತವೆ. ಹಣ್ಣು, ಕಾಯಿ, ಕೀಟ, ಜೀರುಂಡೆ, ಮಿಡತೆ, ಹಲ್ಲಿ, ಹಾವುರಾಣಿ, ಹಕ್ಕಿಗಳ ಮೊಟ್ಟೆ, ಮರಗಪ್ಪೆ ತಿನ್ನುತ್ತವೆ ಎಂದು ಪ್ರಾಣಿ ಪ್ರಿಯರು ಹೇಳುತ್ತಾರೆ.

kadupapa slender loris

ಕಾಡುಪಾಪ

kadupapa slender loris

ಅಪರೂಪದ ಅತಿಥಿ ನೋಡಿ ಸಂತಸಗೊಂಡ ಮಂದಿ

ಇದನ್ನೂ ಓದಿ: ನೆಲಮಂಗಲದಲ್ಲಿ ಕಾಡುಪಾಪ ಕಂಡು ಪುಳಕಿತಗೊಂಡ ಮಾನವ ಪಾಪಾಗಳು!

Published On - 8:36 am, Wed, 24 March 21