ಬೆಂಗಳೂರು, ಮೇ 13: ಕಳೆದ ಮೂರು ದಿನಗಳಿಂದ ನಿರಂತರವಾಗಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಮಳೆಯಾಗುತ್ತಿದೆ (Rain). ಇಂದು ಕೂಡ ನಗರದಲ್ಲಿ ಮಳೆ ಶುರುವಾಗಿದ್ದು, ಕೋರಮಂಗಲ, ಶಾಂತಿನಗರ, ಆಡುಗೋಡಿ, ವಿಲ್ಸನ್ ಗಾರ್ಡನ್, ಕೆ.ಆರ್.ಮಾರ್ಕೆಟ್, ಲಾಲ್ಬಾಗ್, ಕಾರ್ಪೊರೇಷನ್, ಮೈಸೂರು ರಸ್ತೆ ,ಟೌನ್ ಹಾಲ್, ಮೆಜೆಸ್ಟಿಕ್, ಜೆ.ಸಿ.ರೋಡ್ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ವಾಹನ ಸವಾರರು ಪರದಾಡಿದ್ದಾರೆ. ನಿನ್ನೆ ತಡರಾತ್ರಿಯೂ ಜೋರು ಮಳೆ ಆಗಿತ್ತು.
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಾದ್ಯಂತ ಗುಡುಗು ಸಹಿತ ಭಾರಿ ಮಳೆ ಆರಂಭವಾಗಿದೆ. ಗಾಳಿ ಮಳೆಗೆ ಹತ್ತಕ್ಕೂ ಅಧಿಕ ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಕುಟುಂಬಗಳು ಬೀದಿಗೆ ಬಂದಿವೆ. ತಗಡಿನ ಶೆಡ್ಗಳ ಮೇಲಿನ ಸೀಟ್ ಹಾರಿ ಹೋಗಿ ಅನಾಹುತ ಸಂಭವಿಸಿದೆ.
ಇದನ್ನೂ ಓದಿ: Bengaluru Rain Today: ಬೆಂಗಳೂರಿನಲ್ಲಿ ತಡರಾತ್ರಿ ಭಾರಿ ಮಳೆ; ಇನ್ನೂ 4 ದಿನ ಮಳೆಯ ಮುನ್ಸೂಚನೆ
ಐದಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಎರಡು ಬೈಕ್ಗಳು ಜಖಂಗೊಂಡಿವೆ. ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಗಾಳಿ ಮಳೆಯಿಂದ ಚಲಿಸುತ್ತಿದ್ದ ರೈಲಿನ ಮೇಲೆ ಮರ ಬಿದ್ದಿದೆ. ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ವಿಶ್ವಮಾನವ ರೈಲಿನ ಮೇಲೆ ಮರ ಬಿದ್ದು ರೈಲು ಮುಂಭಾಗದ ಗ್ಲಾಸ್ ಪುಡಿ ಪುಡಿ ಆಗಿದೆ. ಘಟನೆಯಲ್ಲಿ ಲೋಕೋ ಪೈಲಟ್ಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯ ಲೆಕ್ಕಿಸದೇ ರೈಲ್ವೆ ನಿಲ್ದಾಣದವರೆಗೂ ಲೋಕೋ ಪೈಲಟ್ ರೈಲು ತಲುಪಿಸಿದ್ದಾರೆ.
ಇದನ್ನೂ ಓದಿ: Bengaluru Rain: ಬೆಂಗಳೂರಿನ ವಿಜಯನಗರ ಸೇರಿದಂತೆ ಹಲವೆಡೆ ತುಂತುರು ಮಳೆ ಆರಂಭ
ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಹಲವಡೆ ಕಳೆದ ರಾತ್ರಿ ಮಿಂಚು, ಗುಡುಗ ಸಹಿತ ಬಾರಿ ಮಳೆಯಾಗಿತ್ತು. ಕಳೆದ ಕೆಲ ದಿನಗಳಿಂದ ಕೊಪ್ಪಳ ಜಿಲ್ಲೆ ಬಿಸಿಲಿನಿಂದ ಕಾದ ಹಂಚಿನಂತಾಗಿತ್ತು. ಆದರೆ ಕಳೆದ ರಾತ್ರಿ ಸುರಿದ ಮಳೆಗೆ ಕೊಪ್ಪಳ ಇದೀಗ ಕೂಲ್ ಕೂಲ್ ಆಗಿತ್ತು. ಇನ್ನು ರಾತ್ರಿ ಸುರಿದ ಮಳೆಯಿಂದ ಕೆಲವಡೇ ಅಸ್ತವ್ಯಸ್ಥ ಸ್ಥಿತಿ ಕೂಡಾ ನಿರ್ಮಾಣವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:23 pm, Mon, 13 May 24