Bengaluru Rains: ಮೆಜೆಸ್ಟಿಕ್​ ಸೇರಿ ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ: ಮೈಸೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jun 28, 2024 | 5:46 PM

ಸುಮಾರು ಒಂದು ವಾರದ ಬಳಿಕ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಆರ್​.ಆರ್​ ನಗರ, ನಾಯಂಡಳ್ಳಿ, ಸ್ಯಾಟ್‌ಲೈಟ್, ಸೇರಿದಂತೆ ಹಲವೆಡೆ ಜೋರು ಮಳೆ ಆಗಿದೆ. ಮೈಸೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್ ಕೂಡ ಉಂಟಾಗಿತ್ತು. ಮಳೆ ಹಿನ್ನಲೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಗರದಲ್ಲಿ ಕೇವಲ ಮೋಡ ಕವಿದ ವಾತಾವರಣ ಮಾತ್ರ ಇತ್ತು.

Bengaluru Rains: ಮೆಜೆಸ್ಟಿಕ್​ ಸೇರಿ ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ: ಮೈಸೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್​
ಮೆಜೆಸ್ಟಿಕ್​ ಸೇರಿ ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ: ಮೈಸೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್​
Follow us on

ಬೆಂಗಳೂರು, ಜೂನ್​ 28: ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆರಾಯ (Rain) ಅಬ್ಬರಿಸುತ್ತಿದ್ದಾನೆ. ಇದೀಗ ಸಿಲಿಕಾನ್ ಸಿಟಿಗೂ ಮಳೆ ಎಂಟ್ರಿ ಕೊಟ್ಟಿದೆ. ಬೆಂಗಳೂರಿನಲ್ಲಿ (Bengaluru) ಸುಮಾರು ಒಂದು ವಾರದಿಂದ ಮಳೆ ಇರಲಿಲ್ಲ. ಇಂದು ಕೂಡ ಕೇವಲ ಎಲ್ಲೆಡೆ ಮೋಡ ಕವಿದ ವಾತಾವರಣ ಇತ್ತು. ಆದರೆ ಸಂಜೆ ಹೊತ್ತಿಗೆ ಮೆಜೆಸ್ಟಿಕ್​ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದೆ. ಜೋರು ಮಳೆಗೆ ವಾತಾವರಣ ಕೂಲ್ ಕೂಲ್​ ಆಗಿದೆ.

ಎಲ್ಲೆಲ್ಲಿ ಮಳೆ 

ಆರ್.ಆರ್.ನಗರ, ನಾಯಂಡಳ್ಳಿ, ಸ್ಯಾಟ್‌ಲೈಟ್, ಟೌನ್​ಹಾಲ್, ಶಾಂತಿನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಆಗಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಮೈಸೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್​ ಉಂಟಾಗಿದೆ. ಬಸ್ ನಿಲ್ದಾಣ, ಫ್ಲೈ ಓವರ್ ಕೆಳಗೆ ನಿಲ್ಲುವ ಮೂಲಕ ದ್ವಿಚಕ್ರ ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ತುಂಬಿ ಹರಿಯುತ್ತಿರುವ ಕುಮಾರಧಾರ, ನೇತ್ರಾವತಿ: ನದಿಗಳಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ

ಇನ್ನು ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಹೀಗಾಗಿ ಅದರ ಪರಿಣಾಮ ಬೆಂಗಳೂರಿನ ಮೇಲೂ ಬೀರಲಿದ್ದು, ವಾತಾವರಣದಲ್ಲಿ ಬದಲಾವಣೆ ಸಾಧ್ಯತೆ ಇದೆ ಎಂದು ನಿನ್ನೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಜಿಲ್ಲೆಯಾದ್ಯಂತ ಜೂ.27ರಂದು ಶಾಲೆಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಮಂಜಿನ ನಗರಿ ಮಡಿಕೇರಿಯಲ್ಲಿ ಧಾರಾಕಾರ ಮಳೆಯಾಗ್ತಿದೆ. 2ನೇ ದಿನವೂ ಮಳೆ ಅವಾಂತರ ಮುಂದುವರೆದಿದೆ. ಕಾವೇರಿ ನದಿ ಮೈದುಂಬಿದ್ದು, ಮಡಿಕೇರಿ ತಾಲೂಕಿನ ಬೇಂಗೂರು ಗ್ರಾಮದ ಬಂದ್ ಆಗಿದೆ. ಬೇಂಗೂರು-ಪರಂಬು ಪೈಸಾರಿ ನಡುವೆ ಸಂಪರ್ಕ ಇಲ್ಲದೆ 60ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ವು. ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ದುಬಾರೆಯಿಂದ ದೋಣಿಗಳನ್ನ ತರಿಸಿ ಸಂತ್ರಸ್ತರನ್ನ ರಕ್ಷಿಸಲಾಗಿದೆ.

ಭಾಗಮಂಡಲದ ತ್ರಿವೇಣಿ ಸಂಗಮದ ಸ್ನಾನಘಟ್ಟವೂ ಮುಳುಗಿದೆ. ಮತ್ತೊಂದೆಡೆ ಗ್ಲಾಸ್ ಬ್ರಿಡ್ಜ್ ಸೇತುವೆ ಕೆಳಗೆ ಮಣ್ಣು ಜರಿಯುತ್ತಿದ್ದು, ಸೇತುವೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:26 pm, Fri, 28 June 24