ಬೆಂಗಳೂರು, ಆಗಸ್ಟ್ 05: ಇಂದು(ಆಗಸ್ಟ್ 05) ಮೊದಲ ಶ್ರಾವಣ ಸೋಮವಾರದಂದು ಸಂಜೆ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, (rain) ಇದೀಗ ರಾತ್ರಿ ಎರಡನೇ ಸುತ್ತಿನ ಮಳೆ ಜೋರಾಗಿದೆ. ಸಂಜೆಗಿಂತ ರಾತ್ರಿ ಮಳೆಯಾರ್ಭಟ ಜೋರಾಗಿದೆ. ಕಳೆದೊಂದು ಗಂಟೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಸಿಲಿಕಾನ್ ಸಿಟಿ ಮಂದಿ ಬೆಚ್ಚಿಬಿದ್ದಿದ್ದು, ಎಲ್ಲೆಡೆ ನೀರು ತುಂಬಿಕೊಂಡು ವಾಹನ ಸವಾರರು ಟ್ರಾಫಿಕ್ನಿಂದ ಪರದಾಡುವಂತಾಗಿದೆ.
ರಾತ್ರಿ ವೇಳೆ ಬಂದ ಭಾರೀ ಧಾರಾಕಾರ ಮಳೆಗೆ ನಗರದ ರಸ್ತೆಗಳಲ್ಲಿ ಮಿನಿ ಕೆರೆಗಳು ನಿರ್ಮಾಣವಾಗಿವೆ. ವಾಹನ ಸವಾರರು ಮಳೆಗೆ ಹೈರಾಣಾಗಿದ್ದಾರೆ. ಬೆಂಗಳೂರಿನ ಕೆಂಗೇರಿ, ರಾಜರಾಜೇಶ್ವರಿನಗರ, ಈಜಿಪುರ, ಶಾಂತಿನಗರ, ವಿಜಯನಗರ, ಜಯನಗರ, ಕೆ.ಆರ್.ಮಾರ್ಕೆಟ್, ಬನಶಂಕರಿ, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ವೃತ್ತ, ವಿಧಾನಸೌಧದ ಸುತ್ತಮುತ್ತ ಭಾರೀ ವರ್ಷಧಾರೆ ಸುರಿದಿದೆ.
Slow moving traffic towards Airport due to water logging at Hebbal downramp narrow bridge. Commuters please cooperate. Will be cleared at the earliest…@blrcitytraffic pic.twitter.com/91nlC9wA4h
— HEBBALA TRAFFIC PS (@hebbaltrafficps) August 5, 2024
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲೂ ಮಳೆ ಸುರಿಯುತ್ತಿದ್ದು, ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಹೆಸರಘಟ್ಟ, ಸುಬ್ರಹ್ಮಣ್ಯಪುರ ಮುಖ್ಯ ರಸ್ತೆ ಸುತ್ತಮುತ್ತ ಸಂಜೆಯಿಂದಲೂ ಮಳೆ ಅಬ್ಬರಿಸಿದೆ. ಧಾರಾಕಾರ ಮಳೆಯಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಮೆಟ್ರೋ ನಿಲ್ದಾಣಗಳ ಕೆಳಗೆ ವಾಹನ ಸವಾರರು ಆಶ್ರಯ ಪಡೆದುಕೊಂಡಿದ್ದಾರೆ. ಜೋರು ಮಳೆ ಹಿನ್ನೆಲೆ ಮುಂದೆ ಸಾಗಲಾಗದೆ ಸವಾರರು ಕೈಕಟ್ಟಿನಿಂತಿದ್ದಾರೆ.
“ಸಂಚಾರ ಸಲಹೆ “
ಹೆಬ್ಬಾಳ ವೃತ್ತದಲ್ಲಿ ನೀರು ನಿಂತಿರುವುದರಿಂದ ವೀರಣ್ಣಪಾಳ್ಯ
ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.
“Traffic advisory”
Slow-moving traffic due to water logging at Hebbal Cricle towards Veerannapalya .Kindly cooperate. pic.twitter.com/Jz0QrmAXK2— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 5, 2024
ಹೆಬ್ಬಾಳ ವೃತ್ತದಲ್ಲಿ ನೀರು ನಿಂತಿರುವುದರಿಂದ ವೀರಣ್ಣಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ದಯಮಾಡಿ ಸಹಕರಿಸಿ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
Slow moving traffic towards Hebbal circle due to water logging on Veerannapalya service road. Commuters are requested to cooperate. @blrcitytraffic pic.twitter.com/5Y6L9aSjw2
— HEBBALA TRAFFIC PS (@hebbaltrafficps) August 5, 2024
ಪೂರ್ವ ಅರಬ್ಬೀ ಸಮುದ್ರದಲ್ಲಿ ಸುಳಿಗಾಳಿ ಹಿನ್ನೆಲೆ ಇನ್ನೂ 4 ದಿನ ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ. ಮಳೆಯಿಂದಾಗಿ ಮನೆಗಳಿಗೆ ಹೋಗುವ ಜನರಿಗೆ ಮಳೆ ಎಫೆಕ್ಟ್ ತಟ್ಟಿದೆ. ಕಳೆದ ಅರ್ಧ ಗಂಟೆಗೂ ಕಾಲ ಅಧಿಕ ಸುರಿದ ಮಳೆಯಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:59 pm, Mon, 5 August 24