ಬೆಂಗಳೂರಿನಲ್ಲಿ ಮನೆಯ ಕಿಟಕಿ ಕಂಬಿ ಕತ್ತರಿಸಿ 19 ಲಕ್ಷ ಬೆಲೆಬಾಳುವ ಚಿನ್ನಾಭರಣ ಕಳ್ಳತನ

ಸಿಸಿ ಕ್ಯಾಮಾರಗಳಿಗೆ ಅಳವಡಿಸಿದ್ದ ಬ್ಯಾಟರಿಗಳನ್ನ ಕದ್ದಿರುವ ಘಟನೆ ಮಲ್ಲಸಂದ್ರ ವಾರ್ಡ್ ಸರ್ಕಲ್​ನಲ್ಲಿ ನಡೆದಿದೆ. 30 ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಬ್ಯಾಟರಿಗಳನ್ನ ಕದ್ದು ಪರಾರಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಮನೆಯ ಕಿಟಕಿ ಕಂಬಿ ಕತ್ತರಿಸಿ 19 ಲಕ್ಷ ಬೆಲೆಬಾಳುವ ಚಿನ್ನಾಭರಣ ಕಳ್ಳತನ
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Edited By:

Updated on: Jan 03, 2022 | 12:14 PM

ನೆಲಮಂಗಲ: ದುಷ್ಕರ್ಮಿಗಳು ಮನೆಯ ಕಿಟಕಿ ಕಂಬಿಗಳನ್ನು ಕತ್ತರಿಸಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಬೆಂಗಳೂರಿನ ಮಂಜುನಾಥನಗರದಲ್ಲಿ ಈ ಘಟನೆ ನಡೆದಿದೆ. ಕುಟುಂಬಸ್ಥರು ತಿರುವಣ್ಣಾಮಲೈನಲ್ಲಿರುವ ದೇವಾಲಯಕ್ಕೆ ತೆರಳಿದ್ದಾಗ ಘಟನೆ ನಡೆದಿದೆ. ವಾಪಸ್ ಮನೆ ಬಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. 19 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ 10 ಸಾವಿರ ನಗದು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.

ಬ್ಯಾಟರಿಗಳು ಕಳ್ಳತನ
ಸಿಸಿ ಕ್ಯಾಮಾರಗಳಿಗೆ ಅಳವಡಿಸಿದ್ದ ಬ್ಯಾಟರಿಗಳನ್ನ ಕದ್ದಿರುವ ಘಟನೆ ಮಲ್ಲಸಂದ್ರ ವಾರ್ಡ್ ಸರ್ಕಲ್​ನಲ್ಲಿ ನಡೆದಿದೆ. 30 ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಬ್ಯಾಟರಿಗಳನ್ನ ಕದ್ದು ಪರಾರಿಯಾಗಿದ್ದಾರೆ. ಬ್ಯಾಟರಿ ಕಳವು ಬಗ್ಗೆ ಪೀಣ್ಯಾ ಸಂಚಾರಿ ಪೊಲೀಸರು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳ್ಳತನಕ್ಕೆ ಯತ್ನ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗಲಾಪುರ ಗ್ರಾ.ಪಂ. ಕಚೇರಿ, ಸಹಕಾರಿ ಬ್ಯಾಂಕ್​ನಲ್ಲಿ  ದುಷ್ಕರ್ಮಿಗಳು ಕಳ್ಳತನಕ್ಕೆ ಯತ್ನಿಸಿದ್ದಾರೆ. ಬೀಗ ಒಡೆದು ಏನೂ ಸಿಗದೆ ವಾಪಸಾಗಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಚೇರಿಯಲ್ಲಿ ಎರಡು ಕಡೆ ಬೀಗ ಮುರಿದಿದ್ದಾರೆ. ಆದರೆ ತಿಜೋರಿಗಳಲ್ಲಿ ಬರೀ ಕಡತಗಳು ಪತ್ತೆಯಾಗಿವೆ. ಈ ಹಿನ್ನೆಲೆ ಬರಿಗೈಯಲ್ಲಿ ಕಳ್ಳರು ವಾಪಸ್ಸಾಗಿದ್ದಾರೆ.

ಇದನ್ನೂ ಓದಿ

Omicron: ಡೆಲ್ಟಾಗಿಂತ ಒಮಿಕ್ರಾನ್ ವೇಗವಾಗಿ ಹರಡುತ್ತದೆ, ಲಸಿಕೆ ಪಡೆದವರಿಗೂ ತಗಲುತ್ತದೆ; WHO ವಿಜ್ಞಾನಿ

Viral : 60ರ ಹರೆಯದ ವೃದ್ಧೆಯ ಬ್ರಾಂಡ್​ ಫೋಟೋಶೂಟ್​: ವೃದ್ಧೆಯ ಸ್ಟೈಲಿಷ್​ ಲುಕ್​ಗೆ ನೆಟ್ಟಿಗರು ಫಿದಾ

Published On - 1:19 pm, Tue, 21 December 21