ಗಾಳಿ, ಮಳೆಯಿಂದ ಮನೆ ಮೇಲ್ಚಾವಣಿ ಶೀಟ್ ಬಿದ್ದು 9 ತಿಂಗಳ ಮಗು ಸಾವು; 5 ಲಕ್ಷ ರೂ. ಪರಿಹಾರ ಚೆಕ್ ವಿತರಣೆ
ಮೃತ ಮಗುವಿನ ಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಮಗುವಿನ ತಂದೆ- ತಾಯಿಗೆ 5 ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು. ಪಕ್ಕದ ಮನೆ ಮೇಲ್ಚಾವಣಿ ಮೇಲೆ ಇಟ್ಟಿದ್ದ ಇಟ್ಟಿಗೆ ಜನಾರ್ದನ್ ಮನೆ ಶೀಟ್ ಮೇಲೆ ಬಿದ್ದಿತ್ತು.
ದೇವನಹಳ್ಳಿ: ನಿನ್ನೆ (ಜೂನ್ 4) ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ (Rain) ಮನೆ ಮೇಲ್ಚಾವಣಿ ಶೀಟ್ ಬಿದ್ದು ಮಗು (Baby) ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ನೀರುಗುಂಟೆಪಾಳ್ಯದಲ್ಲಿ ನಡೆದಿದೆ. ಶ್ವೇತಾ, ಜನಾರ್ದನ್ ಎಂಬ ದಂಪತಿ ಮಗು ಮೃತಪಟ್ಟಿದೆ. ತಲೆ ಮೇಲೆ ಶೀಟ್ ಬಿದ್ದಿದ್ದರಿಂದ ಮಗುವಿಗೆ ತೀವ್ರ ರಕ್ತಸಾವ್ರವಾಗಿ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ. ಸಾವನ್ನಪಿದ ಮಗುವಿನ ಮನೆಗೆ ಜಿಲ್ಲಾಧಿಕಾರಿ ಶ್ರೀನಿವಾಸ್ ಮತ್ತು ಶಾಸಕ ನಿಸರ್ಗ ನಾರಾಯಣಸ್ವಾಮಿ ಭೇಟಿ ನೀಡಿ, ಮನೆಯಲ್ಲಿ ಮುರಿದು ಬಿದ್ದ ಶೀಟ್ ಪರಿಶೀಲನೆ ಮಾಡಿದರು.
ಮೃತ ಮಗುವಿನ ಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಮಗುವಿನ ತಂದೆ- ತಾಯಿಗೆ 5 ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು. ಪಕ್ಕದ ಮನೆ ಮೇಲ್ಚಾವಣಿ ಮೇಲೆ ಇಟ್ಟಿದ್ದ ಇಟ್ಟಿಗೆ ಜನಾರ್ದನ್ ಮನೆ ಶೀಟ್ ಮೇಲೆ ಬಿದ್ದಿತ್ತು. ಹೀಗಾಗಿ ಮನೆಯಲ್ಲಿದ್ದ 9 ತಿಂಗಳ ಮಗು ತಲೆ ಮೇಲೆ ಬಿದ್ದು ದುರ್ಘಟನೆ ನಡೆದಿದೆ. ಮಗುವನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ದಯವಿಟ್ಟು ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯ
ಮನೆಗಳ ಮೇಲೆ ಬಿದ್ದ ಬೃಹತ್ ಮರ: ಮಳೆಗೆ ಬೃಹತ್ ಮರ ಬಿದ್ದು ಬೆಂಗಳೂರು ಮಾರತ್ತಹಳ್ಳಿಯ ಸಂಜಯ್ ನಗರದ 10ನೇ ಕ್ರಾಸ್ನಲ್ಲಿ ಮನೆಗಳಿಗೆ ಹಾನಿಯಾಗಿದೆ. ಮನೆಗಳ ಮೇಲೆ ಮರ ಬಿದ್ದ ಹಿನ್ನೆಲೆ ನಿವಾಸಿಗಳು ರಾತ್ರಿಯೆಲ್ಲಾ ಅಕ್ಕಪಕ್ಕದ ಮನೆಯಲ್ಲಿ ಕಾಲ ಕಳೆದಿದ್ದಾರೆ. ಘಟನೆ ನಡೆದು ಇಲ್ಲಿಯವರೆಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಬಿಬಿಎಂಪಿ ಕಂಟ್ರೋಲ್ ರೂಮ್ಗೆ ಕರೆ ಮಾಡಿದರೆ ಸ್ಪೀಕರಿಸುತ್ತಿಲ್ಲ. ನಮ್ಮ ಸಮಸ್ಯೆ ಕೇಳುವವರು ಯಾರೂ ಇಲ್ಲ. ಇದೀಗ ಬೆಸ್ಕಾಂ ಅಧಿಕಾರಿಗಳು ಬಂದು ಮರಗಳನ್ನ ತೆರವುಗೊಳಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Sun, 5 June 22