ಆನೇಕಲ್: ವಯಸ್ಸಾದ ತಾಯಿಯನ್ನು ರಸ್ತೆ ಬದಿ ಬಿಟ್ಟು ಮಗಳು, ಅಳಿಯ ಪರಾರಿ; ಮಾನವೀಯತೆ ತೋರಿದ ಗ್ರಾಮಸ್ಥರು

ಪತಿಯೊಂದಿಗೆ ಸೇರಿಕೊಂಡು ತನ್ನ ವಯಸ್ಸಾದ ತಾಯಿಯನ್ನು ಮಗಳು ರಾತ್ರೋರಾತ್ರಿ ರಸ್ತೆ ಬದಿ ಬಿಟ್ಟು ಪರಾರಿಯಾದ ಅಮಾಯನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​​​ ತಾಲೂಕಿನ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 80 ವರ್ಷದ ವೃದ್ಧೆ ಓಬಮ್ಮ ಅವರನ್ನು ಗ್ರಾಮಸ್ಥರು ರಕ್ಷಿಸಿ ಮಾನವೀಯತೆ ತೋರಿದರು.

ಆನೇಕಲ್: ವಯಸ್ಸಾದ ತಾಯಿಯನ್ನು ರಸ್ತೆ ಬದಿ ಬಿಟ್ಟು ಮಗಳು, ಅಳಿಯ ಪರಾರಿ; ಮಾನವೀಯತೆ ತೋರಿದ ಗ್ರಾಮಸ್ಥರು
ವಯಸ್ಸಾದ ತಾಯಿಯನ್ನು ರಸ್ತೆ ಬದಿ ಬಿಟ್ಟು ಮಗಳು, ಅಳಿಯ ಪರಾರಿ, ಮಾನವೀಯತೆ ತೋರಿದ ಗ್ರಾಮಸ್ಥರು
Edited By:

Updated on: Jan 06, 2024 | 3:26 PM

ಆನೇಕಲ್, ಜ.6: ಪತಿಯೊಂದಿಗೆ ಸೇರಿಕೊಂಡು ತನ್ನ ವಯಸ್ಸಾದ ತಾಯಿಯನ್ನು ಮಗಳು ರಸ್ತೆ ಬದಿ ಬಿಟ್ಟು ಪರಾರಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ (Anekal)​​​ ತಾಲೂಕಿನ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ವೃದ್ಧೆ ತಾಯಿಯನ್ನು ಕಾರಿನಿಂದ ಇಳಿಸಿ ಮಗಳು ಮತ್ತು ಅಳಿಯ ಪರಾರಿಯಾಗಿದ್ದಾರೆ.

ದೊಮ್ಮಸಂದ್ರದಲ್ಲಿ ಮಗಳು ಆಶಾರಾಣಿ, ಅಳಿಯ ಮಂಜುನಾಥ್ ಹಾಗೂ ಮೊಮ್ಮಕ್ಕಳ ಜೊತೆ ವಾಸ ಓಬಮ್ಮ ವಾಸವಾಗಿದ್ದಳು. ಈಕೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಹೆತ್ತವ್ವ ಎನ್ನುವುದನ್ನು ನೋಡದೆ ರಾತ್ರಿ ವೇಳೆ ತನ್ನ ಪತಿಯೊಂದಿಗೆ ಸೇರಿ ಮಗಳು ಆಶಾರಾಣಿ ಆಕೆಯನ್ನು ದೇಗುಲವೊಂದರ ಬಳಿ ಕರೆತಂದು ಬಿಟ್ಟು ಹೋಗಿದ್ದಾರೆ.

ಇದನ್ನೂ ಓದಿ: Viral Video: ಅಮಾನವೀಯ.. ಮೂಕ ಪ್ರಾಣಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ಕೊನೆಗೆ ಏನಾಯ್ತು?

ದೇವಾಲಯದ ಬಳಿ ಚಳಿಯಲ್ಲಿ ಮಲಗಿದ್ದ ವೃದ್ಧೆಯನ್ನು ನೋಡಿದ ಗ್ರಾಮಸ್ಥರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಗಳು ಹಾಗೂ ಅಳಿಯ ತನ್ನನ್ನು ಬಿಟ್ಟು ಹೋಗಿರುವುದಾಗಿ ಹೇಳಿದ್ದಾಳೆ. ಬಳಿಕ ಆಕೆಯನ್ನು ಗ್ರಾಮಸ್ಥರು ರಕ್ಷಿಸಿ ಬನ್ನೇರುಘಟ್ಟದ ಏರ್​​​ಹ್ಯೂಮಟೇರಿಯನ್​​​ ಹೋಮ್ಸ್ ಆಶ್ರಮಕ್ಕೆ ಸೇರಿಸಿ ಮಾನವೀಯತೆ ತೋರಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ರಾತ್ರಿ ವೇಳೆ ದೇಗುಲದ ಬಳಿ ತಾಯಿಯನ್ನು ಕಾರಿನಿಂದ ಇಳಿಸಿ ಮಗಳು ಮತ್ತು ಅಳಿಯ ಹೋಗಿರುವ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೃದ್ಧೆ​​ ಮೇಲೆ ಹಲ್ಲೆ ನಡೆಸಿರುವ ಗುರುತು ಕೂಡ ಪತ್ತೆಯಾಗಿದ್ದು, ಹಲ್ಲೆಯಿಂದ ಕಾಲು ಮುರಿತ ಹಾಗೂ ಮೈಮೇಲಿನ ಗಾಯಗಳಿಂದ ವೃದ್ಧೆ ನರಳಾಟ ನಡೆಸುತ್ತಿದ್ದಳು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ