ಬಸ್ ವ್ಯವಸ್ಥೆ ಮಾಡಿಸುವುದಾಗಿ ಹಣ ಪಡೆದು ಎಸ್ಕೇಫ್​; 650ಕ್ಕೂ ಹೆಚ್ಚು ಓಂ ಶಕ್ತಿ ಮಾಲಾಧಾರಿಗಳ ಪರದಾಟ

ಬಸ್ ವ್ಯವಸ್ಥೆ ಮಾಡಿಸುವುದಾಗಿ ಹಣ ಪಡೆದು ಎಸ್ಕೇಫ್​; 650ಕ್ಕೂ ಹೆಚ್ಚು ಓಂ ಶಕ್ತಿ ಮಾಲಾಧಾರಿಗಳ ಪರದಾಟ

ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 06, 2024 | 8:23 PM

ಬೆಂಗಳೂರು(Bengaluru) ಉತ್ತರ ತಾಲೂಕಿನ ಹನುಮಂತೇಗೌಡನಪಾಳ್ಯದಲ್ಲಿ 650ಕ್ಕೂ ಹೆಚ್ಚು ಓಂ ಶಕ್ತಿ ಮಾಲಾಧಾರಿಗಳನ್ನು ತಮಿಳುನಾಡಿನ ಓಂಶಕ್ತಿ ದೇವಾಲಯಕ್ಕೆ ಕರೆದೊಯ್ಯುವುದಾಗಿ ಪ್ರತಿ ಮಾಲಾಧಾರಿಯಿಂದ 2,300 ರೂಪಾಯಿ ಹಣ ವಸೂಲಿ ಮಾಡಿದ್ದ ಏಜೆಂಟ್​ಗಳು ಪರಾರಿಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ, ಜ.06: ಬಸ್ ವ್ಯವಸ್ಥೆ ಮಾಡಿಸುವುದಾಗಿ ಅರ್ಚಕ ಮಂಜುನಾಥ್ ಎಂಬುವವರ ಪರ 2 ಲಕ್ಷ ರೂ. ಹಣ ಪಡೆದಿದ್ದ ಏಜೆಂಟ್‌ಗಳು ಎಸ್ಕೇಫ್ ಆಗಿರುವ ಘಟನೆ ಬೆಂಗಳೂರು(Bengaluru) ಉತ್ತರ ತಾಲೂಕಿನ ಹನುಮಂತೇಗೌಡನಪಾಳ್ಯದಲ್ಲಿ ನಡೆದಿದೆ. ಬೆಳಗ್ಗೆ 5 ಗಂಟೆಯಿಂದ ಬಸ್‌ ಇಲ್ಲದಿದ್ದಕ್ಕೆ 650ಕ್ಕೂ ಹೆಚ್ಚು ಓಂ ಶಕ್ತಿ(Om Shakthi) ಮಾಲಾಧಾರಿಗಳು ಪರದಾಟ ನಡೆಸುವಂತಾಗಿದೆ. ತಮಿಳುನಾಡಿನ ಓಂಶಕ್ತಿ ದೇವಾಲಯಕ್ಕೆ ಕರೆದೊಯ್ಯುವುದಾಗಿ ಪ್ರತಿ ಮಾಲಾಧಾರಿಯಿಂದ 2,300 ರೂಪಾಯಿ ಹಣ ವಸೂಲಿ ಮಾಡಿದ್ದರು. ಆದರೆ, ಇದೀಗ ಪರಾರಿಯಾಗಿದ್ದಾರೆ. ಇದರಿಂದ ವಿಶ್ರಾಂತಿ, ಶೌಚಾಲಯ ವ್ಯವಸ್ಥೆ ಇಲ್ಲದೆ ಮಹಿಳಾ ಮಾಲಾಧಾರಿಗಳು ಪರದಾಟ ನಡೆಸಿದ್ದು, ಮಾದನಾಯಕನಹಳ್ಳಿ ಠಾಣೆ ಸಮೀಪವೇ ಘಟನೆ ನಡೆದ್ರೂ ಪೊಲೀಸರು ಮೌನವಹಿಸಿದ್ದಾರೆ. ಈ ಕುರಿತು ಭಕ್ತರ ಪರದಾಟದ ಬಗ್ಗೆ ಸುದ್ದಿ ಮಾಡಲು ಹೋಗಿದ್ದ ಮಾಧ್ಯಮ ಸಿಬ್ಬಂದಿಗೂ ಅಡ್ಡಿಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 06, 2024 08:22 PM