ದೇವನಹಳ್ಳಿ, ಜೂನ್.27: ಭುವನೇಶ್ವರದಿಂದ ಬೆಂಗಳೂರಿಗೆ ಬಂದ ಪ್ರಶಾಂತಿ ಎಕ್ಸಪ್ರೇಸ್ ರೈಲಿನ ಡೆಸ್ಟ್ ಬಿನ್ನಲ್ಲಿ ನವಜಾತ (Enfant) ಗಂಡು ಮಗು ಪತ್ತೆಯಾಗಿದೆ. ನಿನ್ನೆ ಮುಂಜಾನೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಿಳಿ ಬಟ್ಟೆಯಲ್ಲಿ ಸುತ್ತಿ ಡಸ್ಟ್ ಬಿನ್ಗೆ ಶಿಶುವನ್ನು ಹಾಕಲಾಗಿತ್ತು. ಯಲಹಂಕಕ್ಕೆ ರೈಲು (Yelahanka Railway Station) ಬಂದ ವೇಳೆ ಡಸ್ಟ್ ಬಿನ್ ನಲ್ಲಿ ಶಿಶು ಪತ್ತೆಯಾಗಿದೆ. ರೈಲಿನಲ್ಲೇ ಹೆರಿಗೆಯಾಗಿದ್ದು ತಾಯಿ ಮಗುವನ್ನು ಡಸ್ಟ್ ಬಿನ್ಗೆ ಎಸೆದು ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ನವಜಾತ ಶಿಶುವನ್ನ ಶವಾಗಾರಕ್ಕೆ ರವಾನಿಸಿ ಯಶವಂತಪುರ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಿಡ್ನಾಪ್ ಮಾಡಿ ಮಾರಾಟ ಮಾಡುತ್ತಿದ್ದ ಮಕ್ಕಳ ಮಾರಾಟ ಜಾಲವನ್ನು ತುಮಕೂರು ಪೊಲೀಸರು ಭೇದಿಸಿದ್ದಾರೆ. ಅಲ್ದೇ ಮಾರಾಟವಾಗಿದ್ದ 9 ಮಕ್ಕಳನ್ನು ಪತ್ತೆಹಚ್ಚಿದ್ದಾರೆ. ಗುಬ್ಬಿಯಲ್ಲಿ 11 ತಿಂಗಳ ಮಗು ಕಿಡ್ನಾಪ್ ಕೇಸ್ ಬೆನ್ನತ್ತಿದಾಗ ಈ ಜಾಲ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ 5 ಮಂದಿ ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, 1 ಮಗು ಸಾವನ್ನಪ್ಪಿದೆ. ಜೊತೆಗೆ ಇನ್ನೂ 3 ಮಕ್ಕಳಿಗಾಗಿ ಶೋಧ ನಡೆಸಲಾಗ್ತಿದೆ.
ಇದನ್ನೂ ಓದಿ: ಬೆಂಗಳೂರು ಗಡಿಭಾಗದ ಹೊಸೂರಿನಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ನಿರ್ಧಾರ
ಗರ್ಭ ಧರಿಸಿದ ಅವಿವಾಹಿತ ಮಹಿಳೆಯರು ಹಾಗೂ ಅನೈತಿಕ ಗರ್ಭ ಧರಿಸಿದವರಿಂದ ಮಕ್ಕಳನ್ನು ಖರೀದಿ ಮಾಡಿ 2ರಿಂದ 3 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ನರ್ಸ್ಗಳಾದ ಎನ್.ಪೂರ್ಣಿಮಾ, ಸೌಜನ್ಯ, ಯು.ಡಿ.ಮಹೇಶ್, ಮಹಬೂಬ್ ಪಾಷಾ, ಕೆ.ಎನ್.ರಾಮಕೃಷ್ಣ, ಹನುಮಂತರಾಜು, ಮುಬಾರಕ್ ಪಾಷಾನನ್ನ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಗೊಲ್ಲಹಳ್ಳಿ, ದಾವಣಗೆರೆ, ಮಂಡ್ಯ ಸೇರಿ ಹಲವೆಡೆ ಈ ಬಂಧಿತರು ಮಕ್ಕಳನ್ನು ಮಾರಾಟ ಮಾಡಿದ್ದಾರೆ ಅಂತಾ ಬಯಲಾಗಿದೆ.
ಮಕ್ಕಳ ಮಾರಾಟ ಜಾಲ ಬಗ್ಗೆ ಮಾಹಿತಿ ನೀಡಿದ ತುಮಕೂರು ಎಸ್ಪಿ ಅಶೋಕ್, ಬಂಧಿತ ಆರೋಪಿಗಳು ಖಾಸಗಿ ನರ್ಸಿಂಗ್ ಹೋಮ್, ಖಾಸಗಿ ಆಸ್ಪತ್ರೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು ಅಂತಾ ಹೇಳಿದ್ರು. ಅಲ್ದೇ ಆರೋಪಿಗಳ ಜತೆ ನಂಟಿದ್ದ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿಗಾ ಇಡಲಾಗಿದ್ದು, ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಅಂತಾ ಹೇಳಿದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ