ಬೆಂಗಳೂರು: ಹಂದಿಗಳನ್ನೂ ಬಿಡದ ಕಳ್ಳರು; ಎರಡೇ ತಿಂಗಳಲ್ಲಿ 300 ಕ್ಕೂ ಹೆಚ್ಚು ಸಾಕು ಹಂದಿ ಕಳ್ಳತನ

ಹಂದಿ(Pig) ಸಾಕಾಣಿಕೆ ಮೂಲಕ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದ ರೈತನಿಗೆ ಶಾಕ್​ ಎದುರಾಗಿದೆ. ಹೌದು, ಕಳೆದೆರಡು ತಿಂಗಳಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಹಂದಿಗಳನ್ನು ಕದ್ದಿದ್ದಾರೆ. ಈ ಕುರಿತು ದೂರು ನೀಡಿದರೂ ಸೋಲದೇವನಹಳ್ಳಿ ಪೊಲೀಸರು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬಂದಿದೆ.

ಬೆಂಗಳೂರು: ಹಂದಿಗಳನ್ನೂ ಬಿಡದ ಕಳ್ಳರು; ಎರಡೇ ತಿಂಗಳಲ್ಲಿ 300 ಕ್ಕೂ ಹೆಚ್ಚು ಸಾಕು ಹಂದಿ ಕಳ್ಳತನ
ಸೋಲದೇವನಹಳ್ಳಿಯಲ್ಲಿ ಎರಡೇ ತಿಂಗಳಲ್ಲಿ 300 ಕ್ಕೂ ಹೆಚ್ಚು ಸಾಕು ಹಂದಿ ಕಳ್ಳತನ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 27, 2024 | 7:50 PM

ಬೆಂಗಳೂರು, ಜೂ.27: ನಗರದ ಸೋಲದೇವನಹಳ್ಳಿ(Soladevanahalli) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಂದಿಗಳ್ಳರ ಹಾವಳಿ ಹೆಚ್ಚಾಗಿದ್ದು, ಹಂದಿ(Pig) ಸಾಕಾಣಿಕೆ ಮೂಲಕ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದ ರೈತನಿಗೆ ಶಾಕ್​ ಎದುರಾಗಿದೆ. ಹೌದು, ಚಿಕ್ಕಬ್ಯಾಲಕೆರೆಯ ಮುನಿರಾಜು ಎಂಬುವವರ 130 ಸಾಕು ಹಂದಿ, ಹೆಸರಘಟ್ಟದ ನಿವಾಸಿ ಮಹೇಶ್ ಎಂಬುವವರ 40 ಹಂದಿಗಳು ಸೇರಿ ಕಳೆದೆರಡು ತಿಂಗಳಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಹಂದಿಗಳನ್ನು ಕದ್ದಿದ್ದಾರೆ.

ದೂರು ನೀಡಿದ್ರೂ ಕ್ರಮಕೈಗೊಳ್ಳದ ಪೊಲೀಸರು

ಇನ್ನು ಈ ಕುರಿತು ದೂರು ನೀಡಿದರೂ ಸೋಲದೇವನಹಳ್ಳಿ ಪೊಲೀಸರು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಕಳ್ಳರು ಕದಿಯುತ್ತಿರುವ ಸಿಸಿ ಕ್ಯಾಮರಾ ದೃಶ್ಯ ನೀಡಿದರೂ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿಲ್ಲ. ನಿರಂತರವಾಗಿ ಹಂದಿ ಕಳ್ಳತನದಿಂದ ಇಲ್ಲಿನ ನಿವಾಸಿಗಳು ಬೇಸತ್ತಿದ್ದು, ಕ್ರಮ ಕೈಗೊಳ್ಳದ ಸೋಲದೇವನಹಳ್ಳಿ ಠಾಣೆಯ ಪೊಲೀಸರ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:Viral News: ನಾಯಿ ಬೆಕ್ಕಿನಂತೆ ಕಾಡು ಹಂದಿಯನ್ನು ಸಾಕಿದ ದಂಪತಿಗಳು

ವಾಕಿಂಗ್ ಮಾಡುವ ವೇಳೆ ಮಹಿಳೆಯ ಸರ ಕಿತ್ತು ಪರಾರಿಯಾದ ಸರಗಳ್ಳ

ನೆಲಮಂಗಲ: ಹೆಸರಘಟ್ಟ ರಸ್ತೆ ನೇವಿ ಲೇಔಟ್​ನಲ್ಲಿ ವಾಕಿಂಗ್ ಮಾಡುವ ವೇಳೆ ಸರಗಳ್ಳನೊಬ್ಬ ಮಹಿಳೆಯ ಸರ ಕಿತ್ತು ಪರಾರಿಯಾದ ಘಟನೆ ನಡೆದಿದೆ. ಮಣಿಮಾಲ(55)ಸರ ಕಳೆದುಕೊಂಡವರು. ಪಲ್ಸರ್ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಯಿಂದ ಕೃತ್ಯ ಎಸಗಲಾಗಿದೆ. ನಿನ್ನೆ ರಾತ್ರಿ 8:50ರ ಸುಮಾರಿಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ