Pig Operation! ಹಂದಿಗಳ ಕಾಟಕ್ಕೆ ಹೈರಾಣಗೊಂಡ ನರೇಗಲ್ ಜನರು, ಆದರೆ ಅದಕ್ಕಿಂತ ದೊಡ್ಡ ಬೆದರಿಕೆ ಅದರ ಮಾಲೀಕರಿಂದ! ಏನಿದರ ಕಾಟ?
pig menace in Naregal: ಹಂದಿ ಮಾಲೀಕರು ಪಾಲಿಕೆ ಸದಸ್ಯನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಶರ್ಟ್ ಕಾಲರ್ ಹಿಡಿದು ಎಳೆದಾಡಿದ್ದಾರೆ. ಅಷ್ಟೇ ಅಲ್ಲ ಪಟ್ಟಣ ಪಂಚಾಯತ್ ಗೆ ಬಂದು ನಿನ್ನನ್ನು ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ ಅಂತ ಸದಸ್ಯ ಆರೋಪಿಸಿದ್ದಾನೆ.
ಆ ಪಟ್ಟಣದಲ್ಲಿ ಹಂದಿಗಳ (Pigs) ಹಾವಳಿ ಮೀತಿ ಮೀರಿದೆ. ನಾಗರಿಕರಿಗೆ ಹಾಗೂ ರೈತರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಹಂದಿಗಳ ಕಾಟಕ್ಕೆ ಜನ್ರು ಅಕ್ಷರಶಃ ಬೇಸತ್ತು ಹೋಗಿದ್ದಾರೆ ( pig menace). ಅದ್ರಲ್ಲೂ ರೈತರಿಗೆ ನಿದ್ದೆ ಇಲ್ಲದಂತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಹಂದಿಗಳ ಹಿಂಡು ರಾತ್ರೋರಾತ್ರಿ ಸರ್ವನಾಶ ಮಾಡ್ತಾಯಿದೆಯಂತೆ. ಹೀಗಾಗಿ ಆ ಪಟ್ಟಣದಲ್ಲಿ ಹಂದಿ ಕಾರ್ಯಚರಣೆ ನಡೆದಿದೆ. ಇದರಿಂದ ಪಾಲಿಕೆ ಸದಸ್ಯರೊಬ್ಬರು ಸ್ಪಾಟ್ ಗೆ ಹೋಗಿ ನಮ್ಮ ವಾರ್ಡ್ ಗಳಲ್ಲೂ ಹಂದಿಗಳ ಕಾಟ ಹೆಚ್ಚಾಗಿದೆ ಅಂದಿದ್ದಾನೆ. ಅಷ್ಟೇ ತಡ ಅಲ್ಲಿನ ಹಂದಿ ಮಾಲೀಕರು ಸದಸ್ಯನ ಶರ್ಟ್ ಹಿಡಿದು ಎಳೆದಾಡಿದ್ದಾರೆ. ಅಷ್ಟೇ ಅಲ್ಲ ನಿನ್ನ ಕೊಲೆ ಮಾಡುವುದಾಗಿ ಸದಸ್ಯನಿಗೆ ಧಮ್ಕಿ ಹಾಕಿದ್ದಾನೆ. ಇದು ಇಡೀ ಪಟ್ಟಣದ ಜನ್ರನ್ನೇ ಕೊತ ಕೊತ ಕುದಿಯುವಂತೆ ಮಾಡಿದೆ… ಏನಿದು ವರಾಹಗಳ ಕಾಟ ಅಂತೀರಾ ಓದಿ ಈ ಸ್ಟೋರಿ… ಹಂದಿಗಳ ಕಾಟಕ್ಕೆ ಪಟ್ಟಣದ ಜನ್ರು ಕೊತ ಕೊತ…! ಹಂದಿಗಳಿಂದ ಬಚಾವ್ ಮಾಡಿ ಅಂತ ಜನ್ರ ಆಕ್ರೋಶ…! ಹಂದಿಗಳ ಕಾರ್ಯಚಾರಣೆ ಮಾಡುವಂತೆ ಪಟ್ಟಣ ಪಂಚಾಯತ್ ಗೆ ಒತ್ತಡ….! ಹಂದಿಗಳ ಕಾರ್ಯಾಚರಣೆ ವೇಳೆ ಅಡ್ಡಿ ಅರೋಪ…! ಹಂದಿ ಕಾಟ ನಮ್ಮ ವಾರ್ಡ್ ನಲ್ಲೂ ಹೆಚ್ಚಾಗಿದೆ ಅಂದಿದ್ದ ಸದಸ್ಯನ್ನು ಎಳೆದಾಡಿ, ಕೊಲೆ ಬೆದರಿಕೆ ಹಾಕಿದ ಹಂದಿ ಮಾಲೀಕರು…! ಹಂದಿ ಮಾಲೀಕರ ಅಟ್ಟಹಾಸ ವಿರುದ್ಧ ಇಡೀ ಪಟ್ಟಣ (Naregal) ಜನ್ರು ಕೆಂಡಾಮಂಡಲ…!
ಪಟ್ಟಣದಲ್ಲಿ ಎಲ್ಲಿ ನೋಡಿದ್ರೂ ಹಂದಿಗಳ ದರ್ಬಾರ್ ಮಿತಿಮೀರಿದೆ. ಹಂದಿಗಳ ಕಾಟಕ್ಕೆ ರೈತರು, ನಾಗರಿಕರ ಆಕ್ರೋಶ. ಭಯದಲ್ಲಿ ಪಟ್ಟಣ ಪಂಚಾಯತಿ ಸದಸ್ಯರು. ಮಹಿಳೆಯರು, ಮಕ್ಕಳು ಹಂದಿಗಳ ಕಾಟದಿಂದ ಅಕ್ಷರಶಃ ಬೇಸತ್ತು ಹೋಗಿದ್ದಾರೆ. ಅದ್ರಲ್ಲೂ ರೈತರ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ. ಕಷ್ಟಪಟ್ಟು ಬೆಳೆದ ಫಸಲು ರಾಶಿ ಮಾಡಲು ಹಾಕಿದ್ದ ಧಾನ್ಯಗಳು ರಾತ್ರೋರಾತ್ರಿ ನುಂಗಿ ನೀರು ಕುಡಿಯುತ್ತಿವೆ ವರಾಹಗಳ ಹಿಂಡು. ಬೆಳೆ ಕಳೆದುಕೊಂಡ ರೈತರ ರೋಷಾವೇಶ.
ಎಸ್… ಈ ಎಲ್ಲ ಚಿತ್ರಣಗಳು ಕಂಡಿದ್ದು, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ. ಪಟ್ಟಣದಲ್ಲಿ ಸಂದಿಗೊಂದಿಗಳಲ್ಲೂ ಹಂದಿಗಳ ಕಾಟ. ಜಮೀನುಗಳಿಗೆ ಹೋದ್ರೆ ಅಲ್ಲೂ ಹಂದಿಗಳ ಕಾಟ. ಹೀಗಾಗಿ ನರೇಗಲ್ ಪಟ್ಟಣದ ಸರ್ವಜನಾಂಗಕ್ಕೆ ಅಕ್ಷರಶಃ ನೆಮ್ಮದಿ ಇಲ್ಲದಂತಾಗಿದೆ. ಹಂದಿಗಳ ಕಾಟಕ್ಕೆ ರೋಸಿಹೋಗಿದ್ದಾರೆ.
ಹೀಗಾಗಿ ಪಟ್ಟಣ ಪಂಚಾಯತಿಯು ಬೆಂಗಳೂರು ಮೂಲದ ಹಂದಿ ಹಿಡಿಯವ ಗ್ಯಾಂಗ್ ತರಿಸಿದ್ದು, ಪಟ್ಟಣದಲ್ಲಿ ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ಆದ್ರೆ, ಮೊದಲ ದಿನವೇ ಹಂದಿ ಮಾಲೀಕರು ಪಿಗ್ ಆಪರೇಷನ್ ಗೆ ಅಡ್ಡಿ ಮಾಡಿದ್ದಾರೆ. ಸದಸ್ಯ ಮಲ್ಲಿಕಾರ್ಜುನಗೌಡ ಎಂಬುವರು ನಮ್ಮ ವಾರ್ಡ್ ನಲ್ಲೂ ಹಂದಿಗಳ ಕಾಟ ಹೆಚ್ಚಾಗಿದೆ ಅಂತ ಹಂದಿ ಹಿಡಿಯೋ ಗ್ಯಾಂಗ್ ಗೆ ಹೇಳಿದ್ದಾನೆ.
ಅಷ್ಟೇ ತಕ್ಷಣವೇ ಅಲ್ಲಿದ್ದ ಹಂದಿ ಮಾಲೀಕರು ಸದಸ್ಯನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಶರ್ಟ್ ಕಾಲರ್ ಹಿಡಿದು ಎಳೆದಾಡಿದ್ದಾರೆ. ಅಷ್ಟೇ ಅಲ್ಲ ಪಟ್ಟಣ ಪಂಚಾಯತ್ ಗೆ ಬಂದು ನಿನ್ನನ್ನು ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ ಅಂತ ಸದಸ್ಯ ಆರೋಪಿಸಿದ್ದಾನೆ. ಹಂದಿಗಳ ಕಾರ್ಯಾಚರಣೆ ಮಾಡಲು ಬಂದವ್ರ ಜೊತೆಗೆ ಜಗಳ ಮಾಡಿದ್ದಾರೆ. ಹಿಡಿದ ಹಂದಿಗಳನ್ನು ಬಿಟ್ಟಿದ್ದಾರೆ. ಸದಸ್ಯನಾಗಿ ಜನ್ರ ಸಮಸ್ಯೆ ನಿವಾರಣೆ ಮಾಡಬೇಕಂದ್ರೆ ಈಗ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ಬೇಕು ಅಂತ ಸದಸ್ಯ ಹೇಳ್ತಿದ್ದಾರೆ.
ಹಂದಿ ಮಾಲೀಕರು ಸದಸ್ಯನಿಗೆ ಎಳೆದಾಡಿ ಧಮ್ಕಿ ಹಾಕಿದ್ದೇ ತಡ ಇಡೀ ಪಟ್ಟಣ ನಾಗರಿಕರನ್ನ ಕೆರಳುವಂತೆ ಮಾಡಿದೆ. ಪಟ್ಟಣದಲ್ಲಿ ಮಹಿಳೆಯರು, ವಯಸ್ಸಾದವ್ರು ಬಯಲು ಬಹಿರ್ದೆಸೆಗೆ ಹೋದ್ರೆ ಸುರಕ್ಷಿತ ಮನೆಗೆ ವಾಪಸ್ ಬರಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಇನ್ನು ರೈತರು ಕಷ್ಟುಪಟ್ಟ ಬೆಳೆದ ಗೋವಿನ ಜೋಳ, ಬಿಳಿಜೋಳ, ಕಡಲೆ ಸೇರಿ ವಿವಿಧ ಬೆಳೆಗಳು ನುಂಗಿ ನೀರು ಕುಡಿಯುತ್ತಿವೆ.
ಹಂದಿ ಹಿಂಡುಗಳು ಜಮೀನಿಗೆ ಎಂಟ್ರಿ ಕೊಟ್ರೆ ಸಾಕು ಬೆಳಗ್ಗೆ ನೋಡುವಷ್ಟರಲ್ಲಿ ಇಡೀ ಫಸಲು ಸರ್ವನಾಶ ಗ್ಯಾರಂಟಿ. ಹೀಗಾಗಿ ಕಟಾವುಗೆ ಬಂದ ಫಸಲು ಕಾಪಾಡಿಕೊಳ್ಳುವುದಕ್ಕೆ ರೈತರು ಹೆಣಗಾಡುತ್ತಿದ್ದಾರೆ. ನಿತ್ಯವೂ ಜಮೀನುಗಳಿಗೆ ದಾಂಗುಡಿ ಇಡೋ ಗ್ಯಾಂಗ್ ರೈತರ ನೆಮ್ಮದಿ ಹಾಳು ಮಾಡಿದೆ. ಅದೇಷ್ಟೋ ರೈತರು ಹಂದಿಗಳ ಕಾಟದಿಂದ ಕೃಷಿಯನ್ನೇ ಕೈಬಿಟ್ಟಿದ್ದಾರಂತೆ. ನರೇಗಲ್ ಸುತ್ತಮುತ್ತಲಿನ ಜಮೀನುಗಳು ಪಾಳು ಬಿದ್ದಿವೆ ಅಂತಿದ್ದಾರೆ. ಒಂದೆಡೆ ಜಿಂಕೆಗಳ ಕಾಟ ಮತ್ತೊಂದೆಡೆ ಹಂದಿಗಳ ಕಾಟಕ್ಕೆ ಅನ್ನದಾತರ ಬದುಕು ಬರ್ಬಾದ್ ಆಗಿ ಹೋಗಿದೆ.
ಪಟ್ಟಣದ ಪ್ರತಿಯೊಂದು ಓಣಿಯಲ್ಲೂ ಸಾಕಷ್ಟು ಹಂದಿಗಳು ಜನ್ರ ಜೀವ ಹಿಂಡುತ್ತಿವೆ. ನಾಗರಿಕರು ಹಾಗೂ ರೈತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ರೂ ಗೋಳು ಕೇಳೋರೇ ಇಲ್ಲದಂತಾಗಿದೆ. ಸದಸ್ಯರಿಗೂ ಕೊಲೆ ಧಮ್ಕಿ ಹಾಕಿರೋದ್ರಿಂದ ಪಟ್ಟಣದ ನಾಗರಿಕರು ಕೊತ ಕೊತ ಕುದಿಯುತ್ತಿದ್ದಾರೆ. ನರೇಗಲ್ ಪಟ್ಟಣ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನರೇಗಲ್ ಪಟ್ಟಣದ ಜನ್ರನ್ನು ಹಂದಿಗಳ ಕಾಟದಿಂದ ಮುಕ್ತ ಮಾಡಬೇಕಿದೆ. ಇಲ್ಲಾಂದ್ರೆ ಹಂದಿಗಳ ಮಾಲೀಕರು ಹಾಗೂ ನಾಗರಿಕರ ನಡುವೆ ಎಲ್ಲಿ ಗುದ್ದಾಟ ಆಗುತ್ತೋ ಅನ್ನೋ ಭಯ ಪಟ್ಟಣದ ಜನ್ರನ್ನು ಕಾಡುತ್ತಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ