ಆನೆಕಲ್​​: ಪೋಸ್ಟ್​ಮಾಸ್ಟರ್​ ವಿರುದ್ಧ ಕೋಟ್ಯಂತರ ಹಣ ವಂಚನೆ ಆರೋಪ

| Updated By: ವಿವೇಕ ಬಿರಾದಾರ

Updated on: Jul 25, 2022 | 3:20 PM

ಆನೇಕಲ್ ತಾಲೂಕಿನ ಹಂದೇನಹಳ್ಳಿ ಗ್ರಾಮದ ಪೋಸ್ಟ್​ಮಾಸ್ಟರ್​ ಮಂಜುನಾಥ್ ಕೋಟ್ಯಂತರ ರೂಪಾಯಿ ಹಣ ವಂಚನೆ  ಮಾಡಿದ್ದಾರೆಂದು ಹಂದೇನಹಳ್ಳಿಯ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಆನೆಕಲ್​​: ಪೋಸ್ಟ್​ಮಾಸ್ಟರ್​ ವಿರುದ್ಧ ಕೋಟ್ಯಂತರ ಹಣ ವಂಚನೆ ಆರೋಪ
ಸಾಂದರ್ಭಿಕ ಚಿತ್ರ
Follow us on

ಆನೆಕಲ್​​: ಆನೇಕಲ್ (Anekal) ತಾಲೂಕಿನ ಹಂದೇನಹಳ್ಳಿ ಗ್ರಾಮದ ಪೋಸ್ಟ್​ಮಾಸ್ಟರ್ (Postmaster)​ ಮಂಜುನಾಥ್ ಕೋಟ್ಯಂತರ ರೂಪಾಯಿ ಹಣ ವಂಚನೆ  ಮಾಡಿದ್ದಾರೆಂದು ಹಂದೇನಹಳ್ಳಿಯ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಮೃತಪಟ್ಟವರ ಪಾಸ್ ಬುಕ್ ಬಳಸಿ ಗ್ರಾಮಸ್ಥರಿಗೆ ಹಣ ವಂಚನೆ ಮಾಡಲಾಗಿದ್ದು, ಗ್ರಾಮಸ್ಥರಿಂದ ಸುಮಾರು 40 ಲಕ್ಷ ಹಣ ಸಂಗ್ರಹಿಸಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಸುಮಾರು 2 ಕೋಟಿಗೂ ಹೆಚ್ಚು ಹಣ ದುರ್ಬಳಕೆ  ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಹಾಗೇ ಅತ್ತಿಬೆಲೆಯ ಮಾಯಸಂದ್ರ ನಿವಾಸಿಯಾಗಿರುವ ಮಂಜುನಾಥ್, ತನ್ನ ಊರಿನಲ್ಲೂ ಜನರಿಂದ ಲಕ್ಷಾಂತರ ಹಣ ಪಡೆದ್ದಾನೆಂದು ಆರೋಪವಿದೆ. ಇಲಾಖೆಗೆ ಹಣವನ್ನು ಕಟ್ಟದೆ ಸ್ವಂತಕ್ಕೆ ಬಳಸಿಕೊಂಡ ಆರೋಪ ಕೂಡ ಕೇಳಿಬಂದಿದೆ. ವಿಷಯ ಬೆಳಕಿಗೆ ಬರುತ್ತಲೇ ಪೋಸ್ಟ್​ಮಾಸ್ಟರ್ ಪರಾರಿಯಾಗಿದ್ದಾನೆ.  ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.