Begur, Anekal: ಸುಖವಾದ ಸಂಸಾರ, ಮುದ್ದಾಗ ಮಗು, ಇನ್ನೇನು ಆ ಮಗುವಿನ ಫಸ್ಟ್ ಇಯರ್ ಬರ್ತ್ ಡೇ ಸೆಲಬ್ರೇಷನ್ ಮಾಡಬೇಕು ಅನ್ನೋ ಖುಷಿಯಲ್ಲಿದ್ದ ಆ ಕುಟುಂಬಕ್ಕೆ ಬರಸಿಡಿಲು ಬಡಿದಿದೆ. ಗರ್ಭಧಾರಣೆ ತಡೆಗಟ್ಟುವ ಮಾತ್ರೆ (birth control pill) ನುಂಗಿದ್ದ ತಾಯಿ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾಳೆ. ವಿಧಿ ಎಷ್ಟು ಕ್ರೂರಿ ಅನ್ನೋದು ಮತ್ತೆ ಮತ್ತೆ ಸಾಬೀತು ಆಗ್ತಾನೆ ಇರುತ್ತೆ. ಸುಖವಾಗಿ ಬಾಳ್ತಿದ್ದ ಈ ಜೋಡಿಗೆ ಅದ್ಯಾರ ಕಣ್ಣುಬಿತ್ತೋ ಏನೋ, ಇದಕ್ಕಿದ್ದಂತೆ ಇವರ ಬಾಳಲ್ಲಿ ವಿಧಿಯಾಟ ನಡೆದು ಹೋಗಿದೆ. 33 ವರ್ಷದ, ಮೂರೂವರೆ ತಿಂಗಳ ಗರ್ಭಿಣಿ (pregnant) ಪ್ರೀತಿ ಕುಶ್ವಾ ಗರ್ಭಕೋಶದ ಹೊಟ್ಟೆ ನೋವು ತಾಳಲಾರದೇ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ (death).
ಬೆಂಗಳೂರಿನ ಮೈಕೋ ಲೇಔಟ್ ನಿವಾಸಿ ದೇವಬ್ರತ್ ಹಾಗೂ ಆತನ ಪತ್ನಿ ಪ್ರೀತಿ 2016 ರರಲ್ಲಿ ಮದುವೆ ಆಗಿದ್ರು. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮೈಕೊ ಲೆಔಟ್ ನ (Mico lay out) ಕಂಫರ್ಟ್ ಅಪಾರ್ಟ್ಮೆಂಟ್ ಒಂದರಲ್ಲಿ ಸುಖೀ ಸಂಸಾರ ನಡೆಸುತ್ತಿದ್ದ ಈ ದಂಪತಿ ಎಲ್ಲರ ಜೊತೆ ಅನೋನ್ಯವಾಗಿದ್ರು. ಪ್ರೀತಿ ಹಾಗೂ ದೇವಬ್ರತ್ ದಂಪತಿಗೆ ಒಂದು ಮುದ್ದಾದ ಗಂಡು ಮಗು ಇದೆ.
ಇದೇ ಡಿಸೆಂಬರ್ 26 ಕ್ಕೆ ರೆಯಾನ್ ನ ಮೊದಲ ವರ್ಷದ ಹುಟ್ಟು ಹಬ್ಬವ. ಇದರದ್ದೇ ಸಂಭ್ರಮದಲ್ಲಿದ್ದ ದಂಪತಿ, ಕಾರ್ಯಕ್ರಮದ ತಯಾರಿಯಲ್ಲಿದ್ರು, ಸ್ನೇಹಿತರು ಹಾಗೂ ಸಂಬಂಧಿಕರಿಗೆ ವಾಟ್ಸಪ್ ಮುಖಾಂತರ ಆಮಂತ್ರಣ ಕೂಡ ನೀಡಿದ್ದರು, ಆದರೆ ಆ ಒಂದು ವಿಚಾರ ಪ್ರೀತಿ ಹಾಗೂ ದೇವಬ್ರತ್ ಗೆ ಶಾಕ್ ನೀಡಿತ್ತು, ಅದುವೇ ಪ್ರೀತಿ ಮೂರು ತಿಂಗಳ ಗರ್ಭಿಣಿ ಅನ್ನೋದು…
Also Read:
ಪ್ರೀತಿ ಮೂರೂವರೆ ತಿಂಗಳ ಗರ್ಭಣಿ ಅನ್ನೋ ವಿಚಾರ ಗೊತ್ತಾಗ್ತಿದ್ದ ಹಾಗೆ ಮಗುವನ್ನು ಅಬಾರ್ಷನ್ ಮಾಡೋದು ಬೇಡ ಅಂತ ಮೊದಲಿಗೆ ಪ್ರೀತಿಯೇ ಗಂಡನಿಗೆ ಹೇಳಿದ್ದಾಳೆ. ಸರಿ ಅಂತ ಒಪ್ಪಿದ್ದ ಪ್ರೀತಿ ನಂತರ ತನ್ನ ನಿರ್ಧಾರ ಬದಲಿಸಿದ್ದಾಳೆ. ಇನ್ನೊಂದು ಮಗುವಾದ್ರೆ ಇರುವ ಮಗುವಿಗೆ ಅಷ್ಟು ಕಾಳಜಿ ಮಾಡೋಕೆ ಆಗುತ್ತೋ ಇಲ್ಲವೋ ಅಂತಾ ಯೋಚನೆ ಮಾಡಿದ ಪ್ರೀತಿ ಕುಶ್ವಾ ತನ್ನ ಗಂಡನಿಗೆ ಒಂದು ಮಾತೂ ಹೇಳದೇ ಗರ್ಭಧಾರಣೆ ತಡೆಗಟ್ಟುವ ಪಿಲ್ಸ್ ತೆಗೆದುಕೊಂಡಿದ್ದಾಳೆ.
ಕೆಲ ಹೊತ್ತಿನ ಬಳಿಕ ತೀವ್ರ ನೋವು ಶುರುವಾದ ನಂತರ ತಾನು ಟ್ಯಾಬ್ಲೆಟ್ ತೆಗೆದುಕೊಂಡಿದ್ದು ತನಗೆ ಗರ್ಭದಿಂದ ರಕ್ತಸ್ರಾವ ಆಗ್ತಿದೆ ಅಂತ ಗಂಡನಿಗೆ ಕರೆ ಮಾಡಿ ತಿಳಿಸಿದ್ದಾಳೆ. ಗಂಡ ದೇವಬ್ರತ್ ಕೂಡಲೇ ಮನೆಗೆ ಬಂದಿದ್ದಾರೆ. ಆದರೆ ಎಷ್ಟೇ ಕೇಳಿಕೊಂಡ್ರು ಆಸ್ಪತ್ರೆ ಗೆ ತೆರಳದ ಪತ್ನಿ ಪ್ರೀತಿ ತಡರಾತ್ರಿ ವೇಳೆಗೆ ರಕ್ತಸ್ರಾವ ನಿಲ್ಲಬಹುದು ಅಂತ ಯೋಚಿಸಿ ಕೊನೆಗೆ ಪ್ರಜ್ಞೆ ತಪ್ಪಿ, ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.
ಯಾವ ಟ್ಯಾಬ್ಲೆಟ್ ಅನ್ನೋದು ಸ್ಪಷ್ಟವಾಗದೆ ಗುಪ್ತವಾಗಿದೆ!
ಇನ್ನು ಪ್ರೀತಿ ಕುಶ್ವಾ ಯಾವ ಟ್ಯಾಬ್ಲೆಟ್ ನುಂಗಿದ್ದಾರೆ ಅನ್ನೋ ಕುರಿತಾಗಿ ವೈದ್ಯರಿಗಾಗಲಿ, ಅಥವಾ ಕುಟುಂಬದವರಿಗಾಗಲಿ ಮಾಹಿತಿ ಸಿಕ್ಕಿಲ್ಲ. ಸಾಮಾನ್ಯವಾಗಿ ಪ್ರಗ್ನೆನ್ಸಿ ತಡೆಗಟ್ಟುವ ನಿಟ್ಟಿನಲ್ಲಿ ಕೆಲವೇ ಗಂಟೆಗಳಲ್ಲಿ ಉಪಯೋಗಿಸಬಹುದಾದ ಟ್ಯಾಬ್ಲೆಟ್ ಮೆಡಿಕಲ್ ಗಳಲ್ಲಿ ಸಿಗುತ್ತವೆ. ಆದರೆ ಮೂರು ತಿಂಗಳ ಬಳಿಕವೂ ಮಗು ಆಗದಂತೆ ತಡೆಗಟ್ಟುವ ಮಾತ್ರೆಗೆ ವೈದ್ಯರು ಮಾತ್ರ ಸೂಚಿಸುತ್ತಾರೆ.
ಹೀಗಾಗಿ ಯಾವ ಮಾತ್ರೆ ಇವರು ನುಂಗಿದ್ದು ಅನ್ನೋ ಪ್ರಶ್ನೆ ಸದ್ಯ ಮೂಡಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣವೂ ದಾಖಲಾಗಿದ್ದು, ಸ್ತ್ರೀಯರಿಗೆ ಇಂತಹ ಕಷ್ಟದ ಸನ್ನಿವೇಶ ಎದುರಾಗಬಾರದು ಅನ್ನೋದು ಬೇಗೂರು ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ. ಕೂಡಲೇ ಆ ಟ್ಯಾಬ್ಲೆಟ್ ಬಗ್ಗೆ ಪತ್ತೆ ಹಚ್ಚುವ ಕಾರಣ ತೀವ್ರ ಪರಿಶೀಲನೆಗೆ ಇಳಿದಿರುವ ಪೊಲೀಸರು ಪೋಸ್ಟ್ ಮಾರ್ಟಮ್ ರಿಪೊರ್ಟ್ ಗಾಗಿ ಕಾಯುತ್ತಿದ್ದಾರೆ.
ವರದಿ: ಸೈಯ್ಯದ್ ನಿಜಾಮುದ್ದೀನ್, ಟವಿ 9, ಬೆಂಗಳೂರು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ