Parappana Agrahara Jail: ಪರಪ್ಪನ ಅಗ್ರಹಾರ ಜೈಲಿನಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ

|

Updated on: May 24, 2023 | 10:24 AM

ಪರಪ್ಪನ ಅಗ್ರಹಾರ ಜೈಲಿನಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ರಾಜ್ಯ ಸರ್ಕಾರ ಸನ್ನಡತೆ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 81 ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದೆ.

Parappana Agrahara Jail: ಪರಪ್ಪನ ಅಗ್ರಹಾರ ಜೈಲಿನಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ
ಪರಪ್ಪನ ಅಗ್ರಹಾರ ಜೈಲಿನಿಂದ 81 ಕೈದಿಗಳು ಬಿಡುಗಡೆ
Follow us on

ಆನೇಕಲ್: ಮೈಸೂರು ಕೇಂದ್ರ ಕಾರಾಗೃಹದಲ್ಲಿ(Mysore Central Jail) ಸುಮಾರು 14 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ಕೈದಿಗಳನ್ನು ಸನ್ನಢತೆ ಆಧಾರದ ಮೇಲೆ ಸೋಮವಾರ ರಿಲೀಸ್ ಮಾಡಲಾಗಿತ್ತು. ಅದೇ ರೀತಿ ಈಗ ಪರಪ್ಪನ ಅಗ್ರಹಾರ(Parappana Agrahara Jail) ಜೈಲಿನಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ರಾಜ್ಯ ಸರ್ಕಾರ ಸನ್ನಡತೆ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 81 ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದೆ.

214 ಕೈದಿಗಳ ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಆದ್ರೆ ಮಂಗಳವಾರ(ಮೇ 23) ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ 81 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ತಮ್ಮವರು ಶಿಕ್ಷೆಯಿಂದ ಬಿಡುಗಡೆಯಾಗಿ ವಾಪಾಸಾಗುತ್ತಿರುವುದು ತಿಳಿದ ಬಳಿಕ ಕುಟುಂಬಸ್ಥರು ಕಾರಾಗೃಹದ ಬಳಿ ಬಂದು ಸ್ವಾಗತಿಸಿದರು. ಬಿಡುಗಡೆ ಆಗ್ತಾ ಇದ್ದಂತೆ ಕುಟುಂಬಸ್ಥರನ್ನು ತಬ್ಬಿ ಬಿಡುಗಡೆಗೊಂಡ ಕೈದಿಗಳು ಕಣ್ಣೀರು ಹಾಕಿದರು.

ಜೈಲಿನ ಅಧಿಕಾರಿಗಳು ಬಿಡುಗಡೆ ಪ್ರಮಾಣ ಪತ್ರ ನೀಡಿ ಕಳುಹಿಸಿದ್ದಾರೆ. ಮತ್ತೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಲ್ಲ ಎಂದು ಕೈದಿಗಳು ಬರೆದುಕೊಟ್ಟಿದ್ದಾರೆ. ಹಾಗೂ ಕೆಟ್ಟ ವ್ಯಕ್ತಿಗಳ ಜೊತೆ ಸೇರಲ್ಲ ಎಂದು ಸಹಿ ಹಾಕಿ ಮನೆಗಳ ಕಡೆ ತೆರಳಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ತೆಗೆದುಕೊಳ್ಳಲಾಗಿದ್ದ ಬಿಡುಗಡೆ ನಿರ್ಣಯವನ್ನು ಸೋಮವಾರ ರಾಜ್ಯಪಾಲರ ಅಂಕಿತ ನಂತರ ಬಿಡುಗಡೆ ಭಾಗ್ಯ ಸಿಕ್ಕಿದೆ. ಇನ್ನು ಉತ್ತಮ ಸನ್ನಡತೆ ಇರೋ ಒಟ್ಟು 214 ಕೈದಿಗಳ ಬಿಡುಗಡೆಗೆ ಸ್ಥಾಯಿ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಇದನ್ನೂ ಓದಿ: Kerala: 5 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ತಂದೆ ಹಾಗೂ ಮತ್ತೋರ್ವನಿಗೆ 84 ವರ್ಷಗಳ ಜೈಲು ಶಿಕ್ಷೆ

ಮೈಸೂರು ಕೇಂದ್ರ ಕಾರಾಗೃಹದ ಕೈದಿಗಳಿಗೆ ಬಿಡುಗಡೆ ಭಾಗ್ಯ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ರಿಲೀಸ್

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸುಮಾರು 14 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ಕೈದಿಗಳನ್ನು ಸನ್ನಢತೆ ಆಧಾರದ ಮೇಲೆ ಸೋಮವಾರ ರಿಲೀಸ್ ಮಾಡಲಾಗಿದೆ. ಕಾರಾಗೃಹದ ಆವರಣದಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ದಿನೇಶ್ ಸಮ್ಮುಖದಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೈದಿಗಳಿಗೆ ದಿನೇಶ್ ಅವರು, ಬಿಡುಗಡೆ ಪತ್ರ ನೀಡಿ ಮುಂದಿನ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ