Kerala: 5 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ತಂದೆ ಹಾಗೂ ಮತ್ತೋರ್ವನಿಗೆ 84 ವರ್ಷಗಳ ಜೈಲು ಶಿಕ್ಷೆ
ಮಗಳನ್ನು ರಕ್ಷಣೆ ಮಾಡಬೇಕಿದ್ದ ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣದಲ್ಲಿ ಬಾಲಕಿಯ ತಂದೆ ಹಾಗೂ ಸಂಬಂಧಿಗೆ ಕೇರಳ ನ್ಯಾಯಾಲಯ 84 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಮಗಳನ್ನು ರಕ್ಷಣೆ ಮಾಡಬೇಕಿದ್ದ ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣದಲ್ಲಿ ಬಾಲಕಿಯ ತಂದೆ ಹಾಗೂ ಸಂಬಂಧಿಗೆ ಕೇರಳ ನ್ಯಾಯಾಲಯ 84 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ದೇವಿಕುಲಂ ಪೋಕ್ಸೊ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ರವಿಚಂದರ್ ಸಿಆರ್ ಅವರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಬಾಲಾಪರಾಧ ನ್ಯಾಯ ಕಾಯ್ದೆಯಡಿಯಲ್ಲಿ ಪ್ರತಿಯೊಬ್ಬ ಪುರುಷರಿಗೆ ಪ್ರತ್ಯೇಕವಾಗಿ ಒಟ್ಟು 84 ವರ್ಷಗಳವರೆಗೆ ಶಿಕ್ಷೆ ವಿಧಿಸಿದೆ.
ಜೈಲು ಶಿಕ್ಷೆಯ ಹೊರತಾಗಿ, ವಿಶೇಷ ನ್ಯಾಯಾಲಯವು ಇಬ್ಬರೂ ಅಪರಾಧಿಗಳಿಗೆ ತಲಾ 3 ಲಕ್ಷ ರೂ. ದಂಡವನ್ನು ವಿಧಿಸಿದೆ ಮತ್ತು ಅವರಿಂದ ವಸೂಲಿಯಾದ ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ಸೂಚಿಸಿದೆ ಎಂದು ಎಸ್ಪಿಪಿ ಹೇಳಿದರು.
ಮತ್ತಷ್ಟು ಓದಿ: ಲವರ್ ಜತೆ ಲಾಡ್ಜ್ಗೆ ತೆರಳಿದ್ದ ಮೇಕಪ್ ಆರ್ಟಿಸ್ಟ್ ದುರಂತ ಅಂತ್ಯ: ಬ್ಯೂಟಿಷಿಯನ್ ವರ್ಕರ್ಸ್ ಸಮಾವೇಶಕ್ಕೆ ಹೋದವಳು ಹೆಣವಾದಳು
ತಾಯಿ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದು, ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವಕೀಲರು ತಿಳಿಸಿದ್ದಾರೆ. ನಂತರ ಮರಯೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಬಿಜೋಯ್ ಪಿಪಿ ಮತ್ತು ಡೆಪ್ಯುಟಿ ಎಸ್ಪಿ ಕೆಆರ್ ಮನೋಜ್ ಅವರು ಪ್ರಕರಣದ ತನಿಖೆ ನಡೆಸಿ ಕಳೆದ ವರ್ಷ ಚಾರ್ಜ್ ಶೀಟ್ ಸಲ್ಲಿಸಿದ್ದರು ಎಂದು ಎಸ್ಪಿಪಿ ಹೇಳಿದರು.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು 18 ಸಾಕ್ಷಿಗಳು ಮತ್ತು 23 ದಾಖಲೆಗಳನ್ನು ಪರಿಶೀಲಿಸಿತು ನಂತರ ಇಬ್ಬರಿಗೆ ಶಿಕ್ಷೆ ವಿಧಿಸಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ