AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದಲ್ಲಿ ಭೀಕರ ಹತ್ಯೆ; ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಶಂಕೆ

ಭೀಕರ ಕೊಲೆಗೆ ಸಕ್ಕರೆ ನಗರಿ ಮಂಡ್ಯ ಸಾಕ್ಷಿಯಾಗಿದೆ. ಮಹಿಳೆಯನ್ನ ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಆಗಂತುಕನ ಕೈಗೆ ಸಿಕ್ಕಿ ಬಲಿಯಾದವಳು ಯಾರು? ಅಸಲಿಗೆ ನಿನ್ನೆ ರಾತ್ರಿ ನಡೆದಿದ್ದಾದ್ರು ಏನು ಎನ್ನುವುದರ ಕುರಿತಾದ ಸ್ಟೋರಿ ಇಲ್ಲಿದೆ.

ಮಂಡ್ಯದಲ್ಲಿ ಭೀಕರ ಹತ್ಯೆ; ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಶಂಕೆ
ಸಾಂದರ್ಭಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್
|

Updated on: May 16, 2023 | 7:52 AM

Share

ಮಂಡ್ಯ: ನೀರಿನಂತೆ ಹರಿದಿರುವ ರಕ್ತದ ಕೋಡಿ, ಟೀ ಶಾಪ್ ಅಂಗಡಿ ಬಳಿ ಕುಳಿತು ರೋದಿಸುತ್ತಿರುವ ಮಹಿಳೆಯರು. ಅನಾಥವಾಗಿ ಬಿದ್ದಿರೊ ಶವ. ಘಟನಾ ಸ್ಥಳದಲ್ಲಿ ಓಡಾಡುತ್ತಿರುವ ಪೊಲೀಸ್ ಜೀಪು. ಈ ಎಲ್ಲ ದೃಶ್ಯ ಕಣ್ಣಿಗೆ ಬಿದ್ದಿದ್ದು ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ. ಹೌದು, ಮಹಿಳೆಯೊರ್ವಳನ್ನ ಬಲತ್ಕಾರ ಮಾಡಿ ಕೊಲೆಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗೆ ಟೀ ಅಂಗಡಿ ಹಿಂಭಾಗದಲ್ಲಿ ಸತ್ತು ಬಿದ್ದಿರುವ ಈಕೆಯ ಹೆಸರು ಗಂಗಾ, ತಮಿಳುನಾಡು ಮೂಲದವಳು. ಅಲೆಮಾರಿ ಜನರಾದ ಕಾರಣ ಮೂರ್ನಾಲ್ಕು ತಿಂಗಳಿಗೊಮ್ಮೆ ಒಂದೊಂದು ಪ್ರದೇಶಕ್ಕೆ ಗುಳೆ ಹೋಗುತ್ತಿದ್ದ ಗಂಗಾ. ಮೂರು ತಿಂಗಳ ಹಿಂದೆಯಷ್ಟೇ ಶ್ರೀರಂಗಪಟ್ಟಣದ ಗಂಜಾಂಗೆ ಬಂದು ನೆಲೆಸಿದ್ರು. ನಿನ್ನೆ(ಮೇ.14) ತಡರಾತ್ರಿ ಯಾರೋ ದುಷ್ಕರ್ಮಿಗಳು ಗಂಗಾಳ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.

ಗಂಗಾ ಹಾಗೂ ಆಕೆಯ ಕುಟುಂಬಸ್ಥರು ಕಳೆದ ಮೂರು ತಿಂಗಳ ಹಿಂದೆಯಷ್ಟೇ ಶ್ರಿರಂಗಪಟ್ಟಣದ ಗಂಜಾಂಗೆ ಬಂದು ನೆಲೆಸಿದ್ರು. ಕಾವೇರಿ ನದಿಯಲ್ಲಿ ನಾಣ್ಯ ಹುಡುಕುವ ಕೆಲಸವನ್ನ ಮಾಡುತ್ತಿದ್ದರು. ಅದೇ ರೀತಿ ಗಂಗಾ ಯಾವಾಗಲೂ ಕಂಠ ಪೂರ್ತಿ ಕುಡಿದು ತಿರುಗಾಡುತ್ತಿದ್ದಳು. ನಿನ್ನೆ ತಡರಾತ್ರಿ ಯಾರೊ ದುಷ್ಕರ್ಮಿಗಳು ಗಂಗಾಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಎಸ್ಕೇಪಾಗಿದ್ದಾರೆ. ಗಂಗಾಳಿಗೆ ಮದ್ಯಪಾನ ಮಾಡಿಸಿ, ಬಳಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪ ಇದೀಗ ಕೇಳಿ ಬಂದಿದೆ. ಸದ್ಯ ಮೃತದೇಹವನ್ನ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ರವಾನಿಸಲಾಗಿದ್ದು. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Crime News: ಅತ್ಯಾಚಾರ ಕೊಲೆಗಿಂತಲೂ ಘೋರವಾದುದು; ಪೋಕ್ಸೋ ನ್ಯಾಯಾಲಯದಿಂದ ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ

ಅದೇನೆ ಇರಲಿ ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಗಬೇಕಿದೆ. ಕೊಲೆ ಪಾತಕಿಯ ಕೈಗೆ ಕೋಳ ಬೀಳ್ಳಬೇಕಿದೆ. ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯಾಸತ್ಯತೆ ಆಚೆ ಬರಬೇಕಿದೆ. ಒಟ್ಟಿನಲ್ಲಿ ಮಹಿಳೆಯ ಹತ್ಯೆಗೆ ಶ್ರಿರಂಗಪಟ್ಟಣವೇ ಬೆಚ್ಚಿ ಬಿದ್ದಿದ್ದು, ಖಾಕಿ ಪಡೆ ಆರೋಪಿಗಾಗಿ ತಲಾಶ್ ನಡೆಸುತ್ತಿದ್ದಾರೆ.

ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ