ಬಾಡಿಗೆಗೆ ಮನೆ ಕೊಟ್ಟಿದ್ದ ಓನರ್ ಆಂಟಿಯನ್ನೇ ತುಂಡು ತುಂಡಾಗಿ ಕತ್ತರಿಸಿದ ಬಿಹಾರ ಯುವಕರು; ಆನೇಕಲ್​ನ ಬೀಭತ್ಸ ಘಟನೆಗೆ ಟ್ವಿಸ್ಟ್

Anekal Woman Murder: ದೇಹದ ತುಂಡುಗಳು ಪತ್ತೆಯಾಗುತ್ತಿದ್ದಂತೆ ತಂಡ ರಚಿಸಿ ಆರೋಪಿಗಳನ್ನು ಹಿಡಿಯಲು ಸಜ್ಜಾದ ಬನ್ನೇರುಘಟ್ಟ ಪೊಲೀಸರು ಮಹಿಳೆಯ ರುಂಡಾ ಪತ್ತೆಯಾದ ಕೇವಲ ಒಂದು ವಾರದಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಬಾಡಿಗೆಗೆ ಮನೆ ಕೊಟ್ಟಿದ್ದ ಓನರ್ ಆಂಟಿಯನ್ನೇ ತುಂಡು ತುಂಡಾಗಿ ಕತ್ತರಿಸಿದ ಬಿಹಾರ ಯುವಕರು; ಆನೇಕಲ್​ನ ಬೀಭತ್ಸ ಘಟನೆಗೆ ಟ್ವಿಸ್ಟ್
ಸ್ಥಳೀಯರಿಂದ ಮಾಹಿತಿ ಪಡೆಯುತ್ತಿರುವ ಪೊಲೀಸರು, ಮೃತ ಮಹಿಳೆ ಗೀತಾ
Follow us
ಆಯೇಷಾ ಬಾನು
|

Updated on: Jun 08, 2023 | 1:56 PM

ಅನೇಕಲ್: ದೆಹಲಿಯ ಶ್ರದ್ಧಾ ಕೊಲೆ(Delhi Shraddha Murder Case) ಪ್ರಕರಣದ ಬಳಿಕ ದೇಶದಲ್ಲಿ ಮತ್ತೆ ಮತ್ತೆ ದೇಹ ತುಂಡರಿಸಿ ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗಿ ಕಿವಿಗೆ ಬೀಳುತ್ತಲೇ ಇವೆ. ನಾಲ್ಕು ದಿನದ ಹಿಂದಷ್ಟೇ ಮಹಾರಾಷ್ಟ್ರದ ಥಾಣೆಯಲ್ಲಿ ಪ್ರಿಯತಮೆ ಕೊಂದು ಪೀಸ್ ಪೀಸ್ ಮಾಡಿ ಕುಕ್ಕರ್​ನಲ್ಲಿ ಬೇಯಿಸಿ ವಿಕೃತಿ ಮೆರೆದಿದ್ದ ಘಟನೆ ನಡೆದಿತ್ತು. ಇದೀಗ ನಮ್ಮ ರಾಜ್ಯದಲ್ಲೇ ಇಂತಹ ಬೀಭತ್ಸ ಘಟನೆ ನಡೆದಿದೆ(Anekal Woman Murder). ಮನೆ ಬಾಡಿಗೆಗೆಂದು ಬಂದಿದ್ದ ಯುವಕರು ಒಂಟಿ ಮಹಿಳೆಯೆಂದು ತಿಳಿಯುತ್ತಿದ್ದಂತೆ ಆಕೆಯ ಮನೆಯನ್ನು ತಮ್ಮ ಹೆಸರಿಗೆ ಬರೆಯುವಂತೆ ಹಿಂಸಿಸಿ ಕೊನೆಗೆ ಕೊಂದು ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ್ದರು. ಸದ್ಯ ಸಿಕ್ಕ ತುಂಡು ದೇಹದ ಜಾಲ ಹಿಡಿದು ಹೊರಟಿದ್ದ ಪೊಲೀಸರ ಕೈಗೆ ಓರ್ವ ಸಿಕ್ಕಿ ಬಿದ್ದಿದ್ದು ಘಟನೆಯ ರಹಸ್ಯ ಬಯಲಾಗಿದೆ.

ಮಹಿಳೆ ಕೊಂದು ತುಂಡು ತುಂಡಾಗಿ ಕತ್ತರಿಸಿದ ಯುವಕರು

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ವಾಸವಿದ್ದ ಐವತ್ನಾಲ್ಕು ವರ್ಷದ ಗೀತಾಮ್ಮ ಮೇ ತಿಂಗಳ ಅಂತ್ಯದಲ್ಲಿ ನಾಪತ್ತೆಯಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗೀತಮ್ಮಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ‌ ಮದುವೆ ಮಾಡಿಕೊಟ್ಟು, ಪತಿ ಸಾವಿನ ಬಳಿಕ ಒಬ್ಬಂಟಿಯಾಗಿದ್ದ ಗೀತಾಮ್ಮ, ಒಂದು ಮನೆಯಲ್ಲಿ ವಾಸವಿದ್ರೆ ಉಳಿದ ಎರಡು ಮನೆಗಳನ್ನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಯುವಕರಿಗೆ ಬಾಡಿಗೆಗೆ ಕೊಟ್ಟಿದ್ದರು.

ಹೇಗೋ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆ ಗೀತಾಮ್ಮರ ತುಂಡರಿಸಿದ ದೇಹ ಜೂನ್ 1ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೆಟ್ಟ ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ವಾಸನೆ ಬರಿತ್ತಿದ್ದ ಸ್ಥಳಕ್ಕೆ ಬಂದು ನೋಡಿದಾಗ ಕಾಲು, ಕೈ ಕತ್ತರಿಸಿದ ರುಂಡ ವಿಲ್ಲದ ದೇಹ ಪತ್ತೆಯಾಗಿತ್ತು. ಬಳಿಕವೇ ನಾಪತ್ತೆಯಾಗಿದ್ದಾರೆ ಎಂದು ತಿಳಿದಿದ್ದ ಗೀತಾ ಬರ್ಬರವಾಗಿ ಕೊಲೆಯಾಗಿದ್ದಾರೆಂಬ ವಿಚಾರ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: Mumbai Crime: ಲಿವ್-ಇನ್ ಸಂಗಾತಿಯ ಕೊಂದು, ದೇಹವನ್ನು 13 ಭಾಗ ಮಾಡಿ, ಕುಕ್ಕರ್​ನಲ್ಲಿ ಬೇಯಿಸಿದ ವ್ಯಕ್ತಿಯ ಬಂಧನ

ತುಂಡರಿಸಿದ ದೇಹದ ಜಾಲ ಭೇದಿಸಿದ ಖಾಕಿ, ಓರ್ವ ಅರೆಸ್ಟ್

ಇನ್ನು ದೇಹದ ತುಂಡುಗಳು ಪತ್ತೆಯಾಗುತ್ತಿದ್ದಂತೆ ತಂಡ ರಚಿಸಿ ಆರೋಪಿಗಳನ್ನು ಹಿಡಿಯಲು ಸಜ್ಜಾದ ಬನ್ನೇರುಘಟ್ಟ ಪೊಲೀಸರು ಮಹಿಳೆಯ ರುಂಡಾ ಪತ್ತೆಯಾದ ಕೇವಲ ಒಂದು ವಾರದಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ಜನರ ಪೈಕಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ನಾಲ್ಕು ಜನ ಯುವಕರು ಕೊಲೆಯಾದ‌ ಗೀತಾ ಮನೆಯಲ್ಲಿ ಬಾಡಿಗೆಗೆ ಇದ್ದರು. ಗೀತಾ ಒಂಟಿಯಾಗಿರುವುದನ್ನೇ ಬಂಡವಾಳ‌ ಮಾಡಿಕೊಂಡು ಮಹಿಳೆಯ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಕಾಗದ ಪತ್ರಗಳ‌ ಮೇಲೆ ಸಹಿ ಹಾಕುಬಂತೆ ಬಲವಂತ ಮಾಡಿ, ನಂತರ ಕೊಲೆ ಮಾಡಿದ್ದಾರೆ ಎಂಬ ಸತ್ಯ ಬಯಲಾಗಿದೆ.

ಕೊಲೆ ಮಾಡಿದ ಆರೋಪಿಗಳು, ಕೊಲೆ ವಿಚಾರ ಗೊತ್ತಾಗದಿರಲು ದೇಹ ಬಿಸಾಡಲು ಪ್ಲ್ಯಾನ್ ಮಾಡಿದ್ದಾರೆ. ಹಂತ ಹಂತವಾಗಿ ದೇಹ ಕತ್ತರಿಸಿ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಕವರ್​ನಲ್ಲಿ ಸಾಗಿಸಿದ್ದಾರೆ. ಕೊಲೆಯಾದ‌ ಒಂದು ದಿನದ ನಂತರವೂ ಕೆಲಸಕ್ಕೆ ತೆರಳಿದ್ದ ಕಿರಾತಕರು, ಒಟ್ಟು ಎರಡು ದಿನಗಳ ವರೆಗೂ ದೇಹ ಕಟ್ ಮಾಡಿ‌ ಸಾಗಿಸಿದ್ದಾರೆ. ಕಟ್ ಮಾಡಿದ ಶವದ ಮುಂದೆಯೇ ಊಟ ಮಾಡಿದ್ದು ಕೃತ್ಯ ನಡೆದ ಮೂರು ದಿನಗಳ ಬಳಿಕ ಆರೋಪಿಗಳಿಗೆ ಭಯ ಕಾಡಲು ಶುರುವಾಗಿದೆ. ಮನೆ ಸುತ್ತಾ ಸತ್ತ ದೇಹದ ವಾಸನೆ ಪಸರಿಸುತ್ತಿದ್ದಂತೆ ನಡುಕ ಶುರುವಾಗಿದೆ. ಅದಕ್ಕೆ ಮನೆಯ ಹಿಂಭಾಗದಲ್ಲಿ ದೇಹ ಬಿಸಾಡಿ ಎಸ್ಕೇಪ್ ಆಗಿದ್ದಾರೆ. ಕಿ.ಮಿ ದೂರದಲ್ಲಿ ಸತ್ತ ಮಹಿಳೆಯ ತಲೆ,‌‌ ಒಂದು ಕೈ ಪತ್ತೆಯಾಗಿದೆ. ಹಂತಕರು ಬನ್ನೇರುಘಟ್ಟ ಪಾರ್ಕ್ ಅರಣ್ಯ ಪ್ರದೇಶದಲ್ಲಿ ರುಂಡ ಬಿಸಾಡಿದ್ದರು. ಇನ್ನು ಕೃತ್ಯದ ಮುಂಚೆ ಅತ್ಯಾಚಾರ ಆಗಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು ಪೊಲೀಸರು ಪೋಸ್ಟ್ ಮಾರ್ಟಮ್‌ ರಿಪೋರ್ಟ್ ಪರಿಶೀಲನೆ ಮಾಡಲಿದ್ದಾರೆ. ಸದ್ಯಕ್ಕೆ ಆಸ್ತಿ ವಿಚಾರವಾಗಿಯೇ ಕೊಲೆ ನಡೆದಿರುವ ಶಂಕೆ ಇದ್ದು ಮತ್ತಷ್ಟು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ