ಪ್ರತ್ಯೇಕ ಪ್ರಕರಣ: ದನದ ಕೊಟ್ಟಿಗೆಗೆ ಬೆಂಕಿ ಬಿದ್ದು 9 ಹಸುಗಳು ಸಾವು, ಹೆದ್ದಾರಿ ಪಕ್ಕದಲ್ಲಿ ಹೆಣ್ಣು ಮಗು ಪತ್ತೆ

ಬೆಂಗಳೂರು ಹೊರವಲಯದ ಹುಲಿಮಂಗಲ ಗ್ರಾಮದ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು 9 ಹಸುಗಳು ಮೃತಪಟ್ಟಿವೆ. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತಾಲೂಕಿನ ಬೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೋರಿ ಬಳಿ 3 ದಿನದ ಹೆಣ್ಣು ಮಗು ಪತ್ತೆಯಾಗಿದೆ.

ಪ್ರತ್ಯೇಕ ಪ್ರಕರಣ: ದನದ ಕೊಟ್ಟಿಗೆಗೆ ಬೆಂಕಿ ಬಿದ್ದು 9 ಹಸುಗಳು ಸಾವು, ಹೆದ್ದಾರಿ ಪಕ್ಕದಲ್ಲಿ ಹೆಣ್ಣು ಮಗು ಪತ್ತೆ
ಬೆಂಕಿ ಬಿದ್ದಿರುವ ಕೊಟ್ಟಿಗೆ
Edited By:

Updated on: Dec 02, 2023 | 10:27 AM

ಆನೇಕಲ್ ಡಿ.02: ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಒಂಬತ್ತು ಹಸುಗಳು (Cows) ಮೃತಪಟ್ಟಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಹುಲಿಮಂಗಲ ಗ್ರಾಮದಲ್ಲಿ ನಡೆದಿದೆ. ಉಳಿದ ಐದು ಹಸುಗಳ ಸ್ಥಿತಿ ಚಿಂತಾಜನಕವಾಗಿದೆ. ಕೊಟ್ಟಿಗೆಯಲ್ಲಿ 15 ಹಸುಗಳನ್ನ ಕಟ್ಟಿಹಾಕಲಾಗಿತ್ತು. ಇದೆ ಕೊಟ್ಟಿಗೆಯಲ್ಲಿ ಎರಡು ಬೈಕ್​ಗಳನ್ನು ಕೂಡ ನಿಲ್ಲಿಸಲಾಗಿತ್ತು. ತಡರಾತ್ರಿ 2 ಗಂಟೆ ಸುಮಾರಿಗೆ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಹಸುಗಳ ಜೊತೆ ಬೈಕ್​ಗಳು ಕೂಡ ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಪಶುವೈದ್ಯರ ತಂಡ ಹಾಗೂ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನೆಲಮಂಗಲ: ರಾಷ್ಟ್ರೀಯ ಹೆದ್ದಾರೆ 4ರಲ್ಲಿ ಹೆಣ್ಣು ಮಗು ಪತ್ತೆ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತಾಲೂಕಿನ ಬೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೋರಿ ಬಳಿ 3 ದಿನದ ಹೆಣ್ಣು ಮಗು ಪತ್ತೆಯಾಗಿದೆ. ಕೂಡಲೆ ಸ್ಥಳೀಯರು ಮಕ್ಕಳ ಸುರಕ್ಷಾ ಕೇಂದ್ರಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸುರಕ್ಷಾ ತಂಡ ಮಗುವನ್ನು ತಮ್ಮ ಸುಪರ್ದಿಗೆ ಪಡೆದರು.
ಮಗು ಬಳಿ ವಾಣಿವಿಲಾಸ ಅಸ್ಪತ್ರೆ ಡಿಸ್ಚಾರ್ಜ್ ಸಮ್ಮರಿ ಪತ್ತೆಯಾಗಿದೆ. ತಾಯಿ ಸುಪ್ರಿತಾ, ಆನೇಕಲ್ ಜಿಗಣಿಯ ಬೆಸ್ತರ ಬೀದಿಯವರು ಎಂಬುವುದು ತಿಳಿದುಬಂದಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪೋಷಕರನ್ನು ಪತ್ತೆ ಹಚ್ಚುತ್ತಿದ್ದಾರೆ.

ಇದನ್ನೂ ಓದಿ: ಕೊಪ್ಪಳ: ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದ ನಾಲ್ಕು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ ಸಂಪೂರ್ಣ ಬೆಂಕಿಗಾಹುತಿ

ಮಗು ಆಳುವ ಶಬ್ದ ಕೇಳಿ ಮೀಡಿದ ತಾಯಿ ಹೃದಯ

ಇನ್ನು ಹಸುಗೂಸಿಗೆ ಅಸ್ಸಾಂ ಮೂಲದ ಬಾಣಾಂತಿ ಅನುರಾ ಬೇಗಂ ಎದೆಹಾಲು ಉಣಿಸಿದ್ದಾರೆ. ಹೌದು ಮೂರನೇ ಮಗುವಿನ ಬಾಣಾಂತಿಯಾಗಿರುವ ಅನುರಾ ಬೇಗಂ ಅವರು ಮಗು ಅಳುವ ಶಬ್ದ ಕೇಳಿ ಸ್ಥಳಕ್ಕೆ ದೌಡಾಯಿಸಿ ಎದೆ ಹಾಲು ಉಣಿಸಿದ್ದಾರೆ. ಅನುರಾ ಬೇಗಂ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:57 am, Sat, 2 December 23