ಬೆಂಗಳೂರಿಗೆ ಬರುವ ವಾಹನ ಸವಾರರಿಗೆ ಮತ್ತೊಂದು ಟೋಲ್ ಪ್ಲಾಜಾ: ಇಂದು ಮಧ್ಯರಾತ್ರಿಯಿಂದ ಆರಂಭ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಹೊಸದಾಗಿ ಮತ್ತೊಂದು ಟೋಲ್​ ಪ್ಲಾಜಾ ಆರಂಭವಾಗುತ್ತಿದೆ. ಇಂದು ಮಧ್ಯರಾತ್ರಿಯಿಂದ ಹೊಸ ಟೋಲ್ ಆರಂಭಗೊಳ್ಳಲಿದ್ದು, ಬೆಂಗಳೂರಿಗೆ ಬರುವ ವಾಹನ ಸವಾರರಿಗೆ ಮತ್ತೊಂದು ಟೋಲ್​ ಬರೆ ಎಳೆಯಲಿದೆ.

ಬೆಂಗಳೂರಿಗೆ ಬರುವ ವಾಹನ ಸವಾರರಿಗೆ ಮತ್ತೊಂದು ಟೋಲ್ ಪ್ಲಾಜಾ: ಇಂದು ಮಧ್ಯರಾತ್ರಿಯಿಂದ ಆರಂಭ
ಪ್ರಾತಿನಿಧಿಕ ಚಿತ್ರ
Edited By:

Updated on: Nov 16, 2023 | 3:41 PM

ದೇವನಹಳ್ಳಿ, ನವೆಂಬರ್​​​​​ 16: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಹೊಸದಾಗಿ ಮತ್ತೊಂದು ಟೋಲ್​ ಪ್ಲಾಜಾ (toll plaza) ಆರಂಭವಾಗುತ್ತಿದೆ. ಇಂದು ಮಧ್ಯರಾತ್ರಿಯಿಂದ ಹೊಸ ಟೋಲ್ ಆರಂಭಗೊಳ್ಳಲಿದ್ದು, ಬೆಂಗಳೂರಿಗೆ ಬರುವ ವಾಹನ ಸವಾರರಿಗೆ ಮತ್ತೊಂದು ಟೋಲ್​ ಬರೆ ಎಳೆಯಲಿದೆ. ಹೊಸಕೋಟೆ, ದೇವನಹಳ್ಳಿ,  ದೊಡ್ಡಬಳ್ಳಾಪುರ ಮೂಲಕ‌ ದಾಬಸ್ ಪೇಟೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಟೋಲ್​ ನಿರ್ಮಿಸಲಾಗಿದೆ.

ದೊಡ್ಡಬಳ್ಳಾಪುರ ಬೈಪಾಸ್​ನಿಂದ ಹೊಸಕೋಟೆವರೆಗೂ ಈಗಾಗಲೇ ಹೆದ್ದಾರಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ದಾಬಸ್ ಪೇಟೆಯಿಂದ ಹೊಸಕೋಟೆವರೆಗಿನ ಚತುಶ್ಪಥ ಹೆದ್ದಾರಿ ಇದೆ. ಸುಮಾರು 43 ಕಿ.ಮೀ ಹೆದ್ದಾರಿ ರಸ್ತೆ ವಾಹನ ಸವಾರರಿಗೆ ಬಳಕೆಗೆ ಮುಕ್ತವಾಗಿದೆ. ಈ ಹಿನ್ನಲೆ ನಾಳೆಯಿಂದ ನಲ್ಲೂರು ಬಳಿಯ ಟೋಲ್ ಆರಂಭಗೊಳಲಿದೆ.

ಇದನ್ನೂ ಓದಿ: ವಾಹನ ಪ್ರಯಾಣಿಕರಿಗೆ ಶಾಕಿಂಗ್​ ನ್ಯೂಸ್​​: ದೇವನಹಳ್ಳಿ ಏರ್ಪೋರ್ಟ್ ರಸ್ತೆಯ ಟೋಲ್ ದರ ಹೆಚ್ಚಳ

ನ. 17 ರಿಂದ ಟೋಲ್ ಆರಂಭಗೊಳ್ಳಲಿದ್ದು, 34.15 ಕಿ.ಮೀ ಪ್ರಯಾಣಕ್ಕೆ ವಾಹನ ಸವಾರರು ಟೋಲ್​​ ಸುಂಕ ಪಾವತಿ ಮಾಡಬೇಕಿದೆ.

ಟೋಲ್ ದರ ಹೀಗಿದೆ

  • ಕಾರು, ಲಘು ಮೋಟಾರು ವಾಹನಗಳಿಗೆ ಏಕಮುಖ ಸಂಚಾರಕ್ಕೆ 70, ಅದೇ ದಿನ ಮರಳಿ ಬಂದರೆ 105 ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 2,375 ರೂ.
  • ಲಘು ವಾಣಿಜ್ಯ ಮತ್ತು ಸರಕು ವಾಹನಗಳು, ಮಿನಿ ಬಸ್, ಏಕಮುಖ ಸಂಚಾರಕ್ಕೆ 115, ಅದೇ ದಿನ ಮರಳಿ ಬಂದರೆ 175 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್​ ಶುಲ್ಕ 3,835 ರೂ. ಇರಲಿದೆ.
  • ಬಸ್, ಟ್ರಕ್‌ಗಳ ಏಕಮುಖ ಸಂಚಾರಕ್ಕೆ 240 ರೂ. ಅದೇ ದಿನ ಮರಳಿ ಬಂದರೆ 360 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್​ ಶುಲ್ಕ 8,040 ರೂ.
  • ವಾಣಿಜ್ಯ ವಾಹನಗಳು ಏಕಮುಖ ಸಂಚಾರಕ್ಕೆ 265 ರೂ. ಅದೇ ದಿನ ಮರಳಿ ಬಂದರೆ 395 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 8,870 ರೂ. ಇರಲಿದೆ.
  • 4 ರಿಂದ 6 ಆಕ್ಸೆಲ್‌ಗಳ ವಾಹನಗಳ ಏಕಮುಖ ಸಂಚಾರಕ್ಕೆ 380 ರೂ. ಅದೇ ದಿನ ಮರಳಿ ಬಂದರೆ 565 ರೂ. ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 12,605 ರೂ.
  • 7 ಅಥವಾ ಅದಕ್ಕೂ ಹೆಚ್ಚಿನ ಆಕ್ಸೆಲ್ ವಾಹನಗಳು ಏಕಮುಖ ಸಂಚಾರಕ್ಕೆ 460 ರೂ. ಅದೇ ದಿನ ಮರಳಿ ಬಂದರೆ 690 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್​​ ಶುಲ್ಕ 15, 345 ರೂ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:23 pm, Thu, 16 November 23

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us