ದೇವನಹಳ್ಳಿ: ಕಸ್ಟಡಿಯಲ್ಲಿದ್ದ ಬಾಲ ಅಪರಾಧಿಗಳು (Child Offenders) ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿ ಪರಾರಿ ಆಗಿದ್ದವರಲ್ಲಿ ಇಂದು ನಾಲ್ವರನ್ನು ಬಂಧಿಸಲಾಗಿದೆ. ದೇವನಹಳ್ಳಿ ಪೊಲೀಸರಿಂದ ನಾಲ್ವರು ಬಾಲ ಅಪರಾಧಿಗಳನ್ನ ಬಂಧಿಸಿದ್ದಾರೆ. ಒಟ್ಟು ಏಳು ಜನ ಎಸ್ಕೇಪ್ (Escape) ಆಗಿದ್ದರು. ಜನವರಿ 25 ರಂದು ಹಲ್ಲೆ ನಡೆಸಿ ದೇವನಹಳ್ಳಿ ಪಟ್ಟಣದ ಬಾಲ ಮಂದಿರದಿಂದ ಎಸ್ಕೇಪ್ ಆಗಿದ್ದರು. ಬಾಲಾಪರಾಧಿಗಳು ಗಾಂಜಾ, ಕಳ್ಳತನ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಮಡಿವಾಳದಲ್ಲಿ ಬಾಲ ಮಂದಿರ ಕಾಮಗಾರಿ ನಡೆಯುತ್ತಿದ್ದ ಕಾರಣ ದೇವನಹಳ್ಳಿಯ ಹಾಸ್ಟೆಲ್ ನಲ್ಲಿ ಇರಿಸಲಾಗಿತ್ತು. ಈ ವೇಳೆ ಪ್ಲಾನ್ ಮಾಡಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದರು.
ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ ಏಳು ಜನರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರಿಗಾಗಿ ತೀವ್ರ ಶೋಧಕಾರ್ಯ ಮುಂದುವರಿದಿದೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದ್ವಿಚಕ್ರ ವಾಹನಗಳನ್ನ ಕಳವು ಮಾಡಿದ್ದ ಆರೋಪಿ ಬಂಧನ:
ದ್ವಿಚಕ್ರ ವಾಹನಗಳನ್ನ ಕಳವು ಮಾಡಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ವೆಂಕಟೇಶ್ ಬಂಧಿತ ಆರೋಪಿ. ಬಂಧಿತನ ವಿರುದ್ಧ ಸುಮಾರು 70 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಈತ ಜೈಲಿನಿಂದ ಬೇಲ್ ಮೇಲೆ ಬಂದಿದ್ದ. ಆ ಬಳಿಕ ಹಳೆ ಚಾಳಿಯನ್ನು ಮುಂದುವರಿಸಿದ್ದಾನೆ. ಬೈಕ್ಗಳನ್ನು ಕದ್ದು ರೈತರಿಗೆ ಮಾರಾಟ ಮಾಡುತ್ತಿದ್ದ.
ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳು ಸೆರೆ:
ತುಮಕೂರು: ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತಿರುಮಣಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಜಯಪ್ರಕಾಶ್ ನಾಯ್ಕ್ (21), ಲೊಕೇಶ್ (27), ದೇವರಾಜ್ (31) ಬಂಧಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ 11 ಲಕ್ಷ 60 ಸಾವಿರ ಬೆಲೆಬಾಳುವ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಆರೋಪಿಗಳ ಬಂಧನದಿಂದ ಒಟ್ಟು 8 ಮನೆಗಳವು ಪ್ರಕರಣ ಪತ್ತೆಯಾಗಿದೆ. ತಿರುಮಣಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ
ಇದೊಂದು ಥರಾ ಡಿಫರೆಂಟ್ ಥಂಬ್ ರೂಲ್! ಹೆಬ್ಬೆಟ್ಟು ತೋರಿಸುತ್ತದೆ ಜೀವನ ಮಾರ್ಗ! ಅದೇನು ನೋಡೋಣಾ ಬನ್ನಿ
Published On - 2:20 pm, Mon, 21 February 22