Doddaballapur: ದೊಡ್ಡಬಳ್ಳಾಪುರದಲ್ಲಿ ದೇವಾಲಯಕ್ಕೆ ಬೀಗ ಹಾಕಿ ಪೂಜಾರಿ ಪರಾರಿ! ಕಾರಣವೇನು?

| Updated By: ಸಾಧು ಶ್ರೀನಾಥ್​

Updated on: Feb 25, 2022 | 9:25 AM

ಭಕ್ತರ ಕಾಣಿಕೆ ಹಣವನ್ನ ತಾನೇ ಪಡೆದು ಟ್ರಸ್ಟ್ ಗೆ ಮೋಸ ಮಾಡಿರುವ ಆರೋಪವೂ ಎದುರಾಯಿತು. ಹೀಗಾಗಿ‌ ಅರ್ಚಕನನ್ನ ಟ್ರಸ್ಟ್ ನವರು ವಜಾ ಮಾಡಿದರು. ಆದರೆ ಎರಡು ದಿನದಿಂದ ದೇವಾಲಯದ ಬಾಗಿಲು ತೆಗೆಯದೆ, ಅರ್ಚಕ ಬೀಗ ಎತ್ತಿಕೊಂಡು‌ ನಾಪತ್ತೆಯಾಗಿದ್ದಾರೆ.

Doddaballapur: ದೊಡ್ಡಬಳ್ಳಾಪುರದಲ್ಲಿ ದೇವಾಲಯಕ್ಕೆ ಬೀಗ ಹಾಕಿ ಪೂಜಾರಿ ಪರಾರಿ! ಕಾರಣವೇನು?
ದೊಡ್ಡಬಳ್ಳಾಪುರದಲ್ಲಿ ದೇವಾಲಯಕ್ಕೆ ಬೀಗ ಹಾಕಿ ಪೂಜಾರಿ ಪರಾರಿ! ಕಾರಣವೇನು?
Follow us on

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ ಬಯಲು ಬಸವಣ್ಣ ದೇವಸ್ಥಾನಕ್ಕೆ ಅಲ್ಲಿನ ಪೂಜಾರಿ ಬೀಗ ಹಾಕಿ ಎಸ್ಕೆಪ್ ಆಗಿರುವ ಘಟನೆ ನಡೆದಿದೆ. ದೇವರ ಪೂಜಾ ಕಾರ್ಯದಲ್ಲಿ ಭಕ್ತರಿಗೆ ಪೂಜಾರಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹಾಗಾಗಿ ದೇವಸ್ಥಾನದ ಟ್ರಸ್ಟ್, ಅರ್ಚಕನನ್ನ ವಜಾ ಮಾಡಿತ್ತು. ವಜಾ‌ ಮಾಡಿದ ಹಿನ್ನೆಲೆ ದೇವಾಲಯಕ್ಕೇ ಬೀಗ ಹಾಕಿ ಇದೀಗ ಪೂಜಾರಿ ಪರಾರಿಯಾಗಿದ್ದಾರೆ (Doddaballapur).

ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ ಬಯಲು ಬಸವಣ್ಣ ದೇವಸ್ಥಾನದಲ್ಲಿ‌ ಈ ವಿಚಿತ್ರ ಬೆಳವಣಿಗೆ ನಡೆದಿದ್ದು, ಗೌರಿಬಿದನೂರು ಮೂಲದ ಕೃಷ್ಣಮೂರ್ತಿ ಎಂಬುವವರನ್ನ ಬಯಲು ಬಸವಣ್ಣ ದೇವಾಲಯ ಸೇವಾ ಟ್ರಸ್ಟ್ ಕಳೆದ 11 ವರ್ಷಗಳಿಂದ ದೇವರ ಪೂಜೆಗೆ ನೇಮಿಸಿತ್ತು. ದಿನ ಕಳೆದಂತೆ ಹಣ ಕೊಟ್ಟವರಿಗೆ ಪೂಜೆ, ಹಣ ನೀಡದೆ ಇರೋರಿಗೆ ಪೂಜೆ ಮಾಡಿಕೊಡದೆ ಸದರಿ ಪೂಜಾರಿ ಕೃಷ್ಣಮೂರ್ತಿ ತಾರತಮ್ಯ ಮಾಡುತ್ತಿದ್ದರು ಎಂಬ ಆರೋಪ ದಟ್ಟವಾಗತೊಡಗಿತು.

ಈ ಮಧ್ಯೆ, ಭಕ್ತರ ಕಾಣಿಕೆ ಹಣವನ್ನ ತಾನೇ ಪಡೆದು ಟ್ರಸ್ಟ್ ಗೆ ಮೋಸ ಮಾಡಿರುವ ಆರೋಪವೂ ಎದುರಾಯಿತು. ಹೀಗಾಗಿ‌ ಅರ್ಚಕನನ್ನ ಟ್ರಸ್ಟ್ ನವರು ವಜಾ ಮಾಡಿದರು. ಆದರೆ ಎರಡು ದಿನದಿಂದ ದೇವಾಲಯದ ಬಾಗಿಲು ತೆಗೆಯದೆ, ಅರ್ಚಕ ಬೀಗ ಎತ್ತಿಕೊಂಡು‌ ನಾಪತ್ತೆಯಾಗಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟ್ರಸ್ಟ್ ನವರು ಬೀಗ ರಿಪೇರಿದಾರನನ್ನು ಕರೆಯಿಸಿ, ‌ಬಾಗಿಲು ತೆಗೆದು ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಕಾಲಿನ ಮಂಡಿಯಲ್ಲಿ ಒಂದೂವರೆ ಕೆಜಿ ಚಿನ್ನ ಇಟ್ಟುಕೊಂಡು ಅಕ್ರಮ ಸಾಗಣೆ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಾಲಿನ ಮಂಡಿಯಲ್ಲಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶಪಡಿಸಿಕೊಂಡಿದ್ದಾರೆ.

ದುಬೈ ನಿಂದ ಬಂದ ಪ್ರಯಾಣಿಕ ಈ ದುಸ್ಸಾಹಸಕ್ಕೆ ಮಾಡಿದ್ದು, 75 ಲಕ್ಷದ 54 ಸಾವಿರದ 530 ರೂಪಾಯಿ ಮೌಲ್ಯದ 1 ಕೆಜಿ 485 ಗ್ರಾಂ‌ ಚಿನ್ನವನ್ನು ಕದ್ದುತಂದಿದ್ದಾನೆ. ಮೊಣಕಾಲಿಗೆ ನೀ ಕ್ಯಾಪ್ (Knee Cap) ಹಾಕ್ಕೊಂಡು ಅದರಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಬಂದಿದ್ದ. ಏರ್ಪೋಟ್ ನಲ್ಲಿ ಅನುಮಾನಗೊಂಡು ಪರೀಕ್ಷೆಗೊಳಪಡಿಸಿದಾಗ ಭಾರೀ ಪ್ರಮಾಣದಲ್ಲಿ ಚಿನ್ನ ಪತ್ತೆಯಾಗಿದೆ.

ಆರೋಪಿಯು ಪೇಸ್ಟ್ ರೂಪದಲ್ಲಿ ಚಿನ್ನವನ್ನ ಮೊಣಕಾಲಿನ ಬಳಿಯಿಟ್ಟುಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದ. ಆರೋಪಿಯನ್ನ ವಶಕ್ಕೆ ಪಡೆದ ಅಧಿಕಾರಿಗಳು ಮುಂದಿನ ತನಿಖೆ ನಡೆಸುತ್ತಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಪ್ರಕರಣ ಪತ್ತೆಯಾಗಿದೆ.

Also Read:
ರಷ್ಯಾ ಎದುರಿಸುವಷ್ಟು ಸೇನಾ ತಾಕತ್ತು ಉಕ್ರೇನ್​ಗಿಲ್ವಾ? ರಷ್ಯಾ-ಉಕ್ರೇನ್​ ಸೇನಾ ಬಲಾಬಲ ಎಷ್ಟು? ಮಧ್ಯೆ ನ್ಯಾಟೋ ತಾಕತ್ತು ಏನು?

Also Read:
ದೇವರಿಗೆ ಘಂಟೆ ಹರಕೆ! ಆ ದೇವಸ್ಥಾನದ ಸುತ್ತಲೂ ಹತ್ತಲ್ಲ- ನೂರಲ್ಲ ಸಹಸ್ರಾರು ಘಂಟೆಗಳು ಇವೆ