AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರಿಗೆ ಘಂಟೆ ಹರಕೆ! ಆ ದೇವಸ್ಥಾನದ ಸುತ್ತಲೂ ಹತ್ತಲ್ಲ- ನೂರಲ್ಲ ಸಹಸ್ರಾರು ಘಂಟೆಗಳು ಇವೆ

Ghante Ganapati Temple: 1355ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ದೊರೆ ಅರಸಪ್ಪ ನಾಯಕನ ಮಗನಿಗೆ ಸರಿಯಾಗಿ ಮಾತುಗಳನ್ನ ಆಡಲಿಕ್ಕೆ ಬರುತ್ತಿರಲಿಲ್ಲವಂತೆ, ಉಗ್ಗುಗ್ಗಾಗಿ ಮಾತುಗಳನ್ನು ಆಡುತ್ತಿದ್ದನಂತೆ. ಆಗ ಅರಸ ಗುರುಗಳ ಹತ್ತಿರ ಹೋಗಿ ತನ್ನ ಮಗನ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಆಗ ಗುರುಗಳು ಚಂದುಗುಳಿ ಗ್ರಾಮಕ್ಕೆ ಹೋಗಿ ಅಲ್ಲಿ ವಿಘ್ನೇಶ್ವರನಿಗೆ ಘಂಟೆ ಹರಿಕೆ ಕೊಟ್ಟು ಬಾ ಎಂದರಂತೆ.

ದೇವರಿಗೆ ಘಂಟೆ ಹರಕೆ! ಆ ದೇವಸ್ಥಾನದ ಸುತ್ತಲೂ ಹತ್ತಲ್ಲ- ನೂರಲ್ಲ ಸಹಸ್ರಾರು ಘಂಟೆಗಳು ಇವೆ
ದೇವರಿಗೆ ಘಂಟೆ ಹರಕೆ! ಆ ದೇವಸ್ಥಾನದ ಸುತ್ತಲೂ ಹತ್ತಲ್ಲ- ನೂರಲ್ಲ ಸಹಸ್ರಾರು ಘಂಟೆಗಳು ಇವೆ
TV9 Web
| Edited By: |

Updated on: Feb 25, 2022 | 7:11 AM

Share

ಆ ದೇವಸ್ಥಾನದಲ್ಲಿ ಎಲ್ಲಿ ಕಣ್ಣು ಹಾಯಿಸಿದಷ್ಟು ಬರೀ ಘಂಟೆಗಳೆ ಕಾಣಸಿಗುತ್ತೆ. ಕಿರು ಬೆರಳು ಗಾತ್ರದಿಂದ ಹಿಡಿದು ದೊಡ್ಡ ದೊಡ್ಡ ಆಕಾರದ ಘಂಟೆಗಳನ್ನ ಇಲ್ಲಿ ಕಾಣಬಹುದು.. ಆ ದೇವರಿಗೆ ಘಂಟೆ ಹರಕೆ ಕೊಟ್ಟರೆ ಸಾಕು, ನಿಮ್ಮ ಇಷ್ಟಾರ್ಥಗಳು ಶೀರ್ಘದಲ್ಲಿ ನೆರವೇರುತ್ತವೆ. ಇಲ್ಲಿಗೆ ನೆರೆಯ ಮಹಾರಾಷ್ಟ್ರ, ಗೋವಾ ಹೀಗೆ ಬೇರೆ ಬೇರೆ ರಾಜ್ಯದಿಂದ ಭಕ್ತ ಸಾಗರವೆ ಹರಿದು ಬರುತ್ತೆ… ಅರೇ ಅದು ಯಾವ ದೇವಸ್ಥಾನ ?.. ಎಲ್ಲಿದೆ? ಅಂತಿರಾ ಈ ಸ್ಟೋರಿ ಓದಿ… (Ghante Ganapati Temple)

ಘಂಟೆ ಹರಿಕೆ ಕೊಟ್ಟರೆ ಶೀಘ್ರದಲ್ಲೇ ಇಷ್ಟಾರ್ಥ ಸಿದ್ಧಿ, ದೇವಸ್ಥಾನದ ಸುತ್ತಲೂ ಇವೆ ಸಹಸ್ರಾರು ಘಂಟೆಗಳು: ಹೌದು ಹೀಗೆ ಹಚ್ಚ ಹಸಿರು ಕಾನನ ಮಧ್ಯೆ ನೆಲೆ ನಿಂತಿರುವ ಗಣಪ, ದೇವಸ್ಥಾನದ ಸುತ್ತ ಎಲ್ಲಿ ನೋಡಿದರಲ್ಲಿ ಘಂಟೆಗಳ ಸಾಲು. ಭಕ್ತಿಯಿಂದ ತಮ್ಮ ಬೇಡಿಕೆಗಳನ್ನ ಗಣಪನ ಮುಂದೆ ಬೇಡಿಕೊಳ್ಳುತ್ತಿರುವ ಭಕ್ತಸಾಗರ. ಈ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದುಗುಳಿ ಗ್ರಾಮದಲ್ಲಿ.. ಕಳೆದ ಶತಮಾನಗಳಿಂದ ಈ ಕ್ಷೇತ್ರದಲ್ಲಿ ನೆಲೆಸಿರುವ ವಿಘ್ನೇಶ್ವರ, ಬೇಡಿ ಬಂದ ಭಕ್ತರಿಗೆ ತಮ್ಮ ಇಷ್ಟಾರ್ಥಗಳನ್ನ ಕರುಣಿಸುವ ಕರುಣಾಮಯಿ ಆಗಿದ್ದಾನೆ.

ಯಾವುದೇ ಸಮಸ್ಯೆಗಳ ನಿವಾರಣೆಗಾಗಿ ಈ ಕ್ಷೇತ್ರಕ್ಕೆ ಬಂದು, ಗಣಪನಿಗೆ ಘಂಟೆ ಹರಿಕೆ ಕೊಡುತ್ತೇನೆ ಎಂದು ಬೇಡಿದರೆ ಸಾಕು. ಎಲ್ಲ ಕಷ್ಟಗಳು ನಿವಾರಣೆ ಆಗುತ್ತೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದಾಗಿದೆ. ಹೀಗಾಗಿಯೇ ಈ ಗಣಪನಿಗೆ ಘಂಟೆ ಗಣಪ ಎಂದು ಕರೆಯತ್ತಾರೆ.. ವಿಶೇಷವಾಗಿ ಸಂಕಷ್ಟಹರ ಚತುರ್ಥಿ, ಅಂಗಾರಕ ಚತುರ್ಥಿ, ಸೋಮವಾರ ಹೀಗೆ ಶುಭ ದಿನಗಳಲ್ಲಿ ಭಕ್ತ ಸಾಗರವೇ ಹರಿದು ಬರುತ್ತೆ.

ಈ ದೇವಸ್ಥಾನಕ್ಕೆ ಸುಮಾರು 200 – 300 ವರ್ಷದ ಇತಿಹಾಸವಿದೆ.. ಆಗಿನಿಂದಲೂ ಇಲ್ಲಿ ಗಣಪ, ಪ್ರಕೃತಿ ಸೌಂದರ್ಯದ ಮಡಿಲಲ್ಲಿ ವಾಸವಿದ್ದಾನೆ ಎಂಬ ಪ್ರತೀತಿ ಇದೆ. ಈ ಗಣೇಶನಿಗೆ ಘಂಟೆ ಗಣಪ ಅಂತಾ ಯಾಕೆ ಕರಿತಾರೆ ಅಂದ್ರೆ, 1355 ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ದೊರೆ, ಅರಸಪ್ಪ ನಾಯಕನ ಮಗನಿಗೆ ಸರಿಯಾಗಿ ಮಾತುಗಳನ್ನ ಆಡಲಿಕ್ಕೆ ಬರುತ್ತಿರಲಿಲ್ಲವಂತೆ, ಉಗ್ಗುಗ್ಗಾಗಿ ಮಾತುಗಳನ್ನು ಆಡುತ್ತಿದ್ದನಂತೆ.

ಆಗ ಅರಸ ತಮ್ಮ ಗುರುಗಳ ಹತ್ತಿರ ಹೋಗಿ ತನ್ನ ಮಗನ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಆಗ ಗುರುಗಳು ಚಂದುಗುಳಿ ಗ್ರಾಮಕ್ಕೆ ಹೋಗಿ ಅಲ್ಲಿ ವಿಘ್ನೇಶ್ವರನಿಗೆ ಘಂಟೆ ಹರಿಕೆ ಕೊಟ್ಟು ಬಾ, ನಿನ್ನ ಮಗನಿಗೆ ಮಾತು ಸ್ಪಷ್ಟವಾಗಿ ಬರುತ್ತದೆ ಅಂತಾ ಹೇಳಿದ್ರಂತೆ‌. ಆಗ ಅರಸ ಮಗನೊಂದಿಗೆ ಬಂದು ಗಣಪನಿಗೆ ಘಂಟೆ ಹರಿಕೆ ಕೊಡುತ್ತಾರೆ.. ಕೆಲವೆ ಗಂಟೆಗಳಲ್ಲಿ ರಾಜನ ಮಗ ಸ್ಪಷ್ಟವಾಗಿ ಮಾತನಾಡಲಿಕ್ಕೆ ಪ್ರಾರಂಭ ಮಾಡುತ್ತಾನಂತೆ. ಅಲ್ಲಿಂದ ಈ ಗಣಪನಿಗೆ ಘಂಟೆ ಹರಿಕೆ ನೀಡುವುದು ರೂಢಿ ಇದೆ. ಇನ್ನು ಘತಕಾಲದ ಇತಿಹಾಸ ಇರುವ ಈ ದೇವಸ್ಥಾನವನ್ನು 1992 ರಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರ ಸರಸ್ವತಿ ಸ್ವಾಮೀಜಿ ಅವರಿಂದ, ಜೀರ್ಣೋದ್ಧಾರ ಆಗಿದ್ದು ಅಂತಾರೆ ಇಲ್ಲಿಯ ಅರ್ಚಕರಾದ ಗಣಪತಿ ಭಟ್.

ಒಟ್ಟಾರೆಯಾಗಿ ಗಣಪತಿ, ವಿಘ್ನೇಶ್ವರ, ವಿನಾಯಕ, ಏಕದಂತ ಹೀಗೆ ಹಲವು ನಾಮಾಂಕಿತಗಳಿಂದ ಕರೆಸಿಕೊಳ್ಳುವ ಗಣಪ, ಚಂದಗುಳಿ ಗ್ರಾಮದಲ್ಲಿ ಘಂಟೆ ಗಣಪ ಎಂದು ಹೆಸರಾಗಿದ್ದಾನೆ.. ಬೇಡಿ ಬಂದ ಭಕ್ತರಿಗೆ ವರ ನೀಡಿ ಅವರ ಸಂಕಷ್ಟ ಪರಿಹಾರ ಮಾಡುತ್ತಿದ್ದಾನೆ.. -ವಿನಾಯಕ ಬಡಿಗೇರ, ಟಿವಿ 9, ಕಾರವಾರ

Also Read: ಡಿಜಿಟಲ್ ವ್ಯವಹಾರ ಇರಲಿ ಎಚ್ಚರ: ಪಕ್ಕಾ ಲೆಕ್ಕ ಇಟ್ರೂ ಪೆಟ್ರೋಲ್ ಬಂಕ್​ ಮಾಲೀಕ ಲಾಸ್​ನಲ್ಲೇ ಇದ್ದ! ಆ ಮೇಲೆ ಏನಾಯ್ತು?

Also Read: ಶ್ಲೋಕ, ಮಂತ್ರ ಹೇಳುವವರ ಮೇಲೆ ಅದರ ಪರಿಣಾಮ ಅಪಾರ, ಅನುಚಿತವಾಗಿ ಪಠಿಸುವವರಿಗೆ ಅಪಾಯಕಾರಿಯೂ ಹೌದು!

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್