AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lighting Lamps: ದೀಪ ದೇವರ ರೂಪ, ದೀಪ ಬೆಳಕುವುದರಿಂದಲೂ ಇದೆ ಅನೇಕ ಲಾಭ

ದೀಪ ಎಂದರೆ ಜ್ಞಾನ, ಆ ಜ್ಞಾನ ನಮ್ಮಲ್ಲಿ ನಮ್ಮ ಕುಟುಂಬದಲ್ಲಿ ನಮ್ಮ ಜೀವನದಲ್ಲಿ ಇರುವ ಅಜ್ಞಾನ ಮತ್ತು ಅಂಧಕಾರ ಕತ್ತಲೆಯನ್ನು ದೂರ ಮಾಡಿ ಜ್ಞಾನ ಅನ್ನುವಂತಹ ಜ್ಯೋತಿ ನಮ್ಮಲ್ಲಿ ನಮ್ಮ ಕುಟುಂಬದಲ್ಲಿ ಬೆಳಗಲಿ ಎನ್ನುವ ಭಾವನೆಯಿಂದ ದೀಪವನ್ನು ಹಚ್ಚಬೇಕು.

Lighting Lamps: ದೀಪ ದೇವರ ರೂಪ, ದೀಪ ಬೆಳಕುವುದರಿಂದಲೂ ಇದೆ ಅನೇಕ ಲಾಭ
ದೀಪ
TV9 Web
| Updated By: ಆಯೇಷಾ ಬಾನು|

Updated on: Feb 25, 2022 | 6:30 AM

Share

ದೇವರಿಗೆ ದೀಪ(Diya) ಬೆಳಗುವುದು ಅಥವಾ ಸಂಜೆ ಮನೆಯಲ್ಲಿ ದೀಪ ಬೆಳಗುವುದು ನಮ್ಮ ಸಂಪ್ರದಾಯ. ಧಾರ್ಮಿಕ ಗ್ರಂಥಗಳ ಪ್ರಕಾರ ದೀಪವನ್ನು ಬೆಳಗಿಸುವುದಕ್ಕೆ ಅದರದೇ ಆದ ಮಹತ್ವವಿದೆ. ಋಗ್ವೇದದಲ್ಲಿ ಹೇಳುವಂತೆ ದೇವತೆಗಳು ದೀಪದ ಬೆಳಕಿನಲ್ಲಿ ನೆಲೆಸಿವೆ. ದೀಪವನ್ನು ದೇವರ ರೂಪ ಎಂದೇ ಪೂಜಿಸಲಾಗುತ್ತದೆ. ದೀಪಗಳನ್ನು ಹೇಗೆ ಹಚ್ಚಬೇಕು, ಬತ್ತಿ ಹೇಗಿರಬೇಕು, ಎಣ್ಣೆ ಯಾವುದು ಎಂಬುದು ಕೂಡ ಬಹಳ ಮುಖ್ಯ. ಬನ್ನಿ ಈ ಬಗ್ಗೆ ಇಲ್ಲಿ ಮಾಹಿತಿ ಪಡೆಯಿರಿ.

ದೀಪ ಎಂದರೆ ಜ್ಞಾನ, ಆ ಜ್ಞಾನ ನಮ್ಮಲ್ಲಿ ನಮ್ಮ ಕುಟುಂಬದಲ್ಲಿ ನಮ್ಮ ಜೀವನದಲ್ಲಿ ಇರುವ ಅಜ್ಞಾನ ಮತ್ತು ಅಂಧಕಾರ ಕತ್ತಲೆಯನ್ನು ದೂರ ಮಾಡಿ ಜ್ಞಾನ ಅನ್ನುವಂತಹ ಜ್ಯೋತಿ ನಮ್ಮಲ್ಲಿ ನಮ್ಮ ಕುಟುಂಬದಲ್ಲಿ ಬೆಳಗಲಿ ಎನ್ನುವ ಭಾವನೆಯಿಂದ ದೀಪವನ್ನು ಹಚ್ಚಬೇಕು. ನಾವು ಜ್ಯೋತಿಯನ್ನು ಬೆಳಗಿಸಲು ಉಪಯೋಗಿಸುವ ಎಣ್ಣೆ-ತುಪ್ಪ ಕರ್ಪೂರ ಇವು ನಮ್ಮಲ್ಲಿರುವ ಅಜ್ಞಾನವನ್ನು ಸೂಚಿಸುತ್ತದೆ. ದೀಪ ಹೇಗೆ ಇವುಗಳನ್ನು ಹೀರಿ ಜ್ಯೋತಿಯಾಗಿ ಬೆಳಗುವುದೊ ಹಾಗೆ ನಾವು ಕೂಡ ನಮ್ಮ ಜೀವನದಲ್ಲಿರುವ ಅಜ್ಞಾನವನ್ನು ದೂರ ಮಾಡಿ ಜ್ಞಾನದ ಜ್ಯೋತಿ ಆಗಬೇಕು.

ಮೊದಲ ದೀಪವನ್ನು ದೇವರಿಗೆ ಹಚ್ಚಿಡಬೇಕು. ಮಣ್ಣಿನ ಹಣತೆಯಿಂದ ಹಿಡಿದು ಬೆಳ್ಳಿಯ ದೀಪದವರೆಗೆ ಒಂದೊಂದು ಲೋಹದ ದೀಪಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಮೇಣದ ಬತ್ತಿ, ವಿದ್ಯುತ್ ದೀಪಗಳಿಗೆ ಸಾಂಪ್ರದಾಯಿಕ ದೀಪಗಳಿಗಿರುವ ಮಹತ್ವವಿಲ್ಲ. ದೀಪದಲ್ಲಿ ಎರಡು ಬತ್ತಿಗಳಿರಲೇ ಬೇಕು. ಹೂಬತ್ತಿಯನ್ನು ಎರಡು ಇಟ್ಟಿರಬೇಕು. ದೇವರ ಮನೆಯಲ್ಲಿ ಮಾತ್ರವಲ್ಲದೆ ಮನೆಯ ದ್ವಾರಗಳಲ್ಲಿ, ದೇವಾಲಯ, ಕಂಭಗಳು, ದೇಗುಲದ ಶಿಖರ, ಮನೆಯ ಅಂಗಳ, ತುಳಸೀ ವೃಂದಾವನ, ಪುರಾಣ ಪ್ರವಚನ ನಡೆಯುವ ಸ್ಥಳಗಳು, ಹಸುವಿನ ಕೊಟ್ಟಿಗೆ, ಅಶ್ವತ್ಥವನ, ನೆಲ್ಲಿವನ, ಮಠಗಳು ಹೀಗೆ ಹಲವೆಡೆ ದೀಪಗಳನ್ನು ಹಚ್ಚಿಡಬಹುದು.

ಶಿವ ಪುರಾಣದ ಪ್ರಕಾರ ದೇವರ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ಹಾಗೂ ಆರೋಗ್ಯ ವೃದ್ಧಿಸುತ್ತದೆ. ತುಪ್ಪದ ದೀಪ ಹಚ್ಚುವುದರಿಂದಲು ಹಲವು ಆರೋಗ್ಯಕರ ಪ್ರಯೋಜನಗಳಿವೆ. ದೀಪ ಎಂದರೆ ಬೆಳಕು, ಜ್ಞಾನ. ಬೆಳಕಿಲ್ಲದೆ ನಾವು ಜಗತ್ತಿನಲ್ಲಿ ಏನೂ ಕಾಣಲಾರೆವು. ‘ತಮಸೋಮ ಜ್ಯೋತಿರ್ಗಮಯ’ ಎಂಬಂತೆ ನಾವೆಲ್ಲರೂ ಬೆಳಕಿನ ಪಯಣಿಗರು. ಕತ್ತಲೆ ಅಜ್ಞಾನದ ಸಂಕೇತವಾದರೆ ಬೆಳಕು ಜ್ಞಾನ ವಿಶೇಷದ ಸಂಕೇತ. ಪರಮಾತ್ಮನು ಈ ಜಗತ್ತಿನ ಸೂರ್ಯ, ಚಂದ್ರ, ನಕ್ಷತ್ರ, ಅಗ್ನಿ ಮುಂತಾದ ಸಮಸ್ತ ತೇಜಸ್ಸಿಗೂ ಮೂಲಭೂತನಾಗಿ, ಆಶ್ರಯನಾಗಿ, ಪ್ರೇರಕನಾಗಿ, ಸ್ವಯಂ ಅನಂತ ತೇಜೋಮಯನಾದ ದೀಪನಾಗಿದ್ದಾನೆ. ಹಾಗಾಗಿ ನಮಗೆಲ್ಲವನ್ನೂ ಕೊಟ್ಟ ಪರಮಾತ್ಮನನ್ನು ದೀಪಗಳಿಂದ ಪೂಜಿಸಿ ಕೃತಾರ್ಥರಾಗೋಣ.

ಇದನ್ನೂ ಓದಿ: Deepavali 2021: ಬೆಳಕಿನ ಹಬ್ಬ ದೀಪಾವಳಿಯ ಮಹತ್ವ, ವಿಶೇಷತೆ ಏನು? ಲಕ್ಷ್ಮೀಪೂಜೆ ಹಿಂದೆ ಅಡಗಿದೆ ಸಂಪತ್ತಿನ ರಹಸ್ಯ