AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahashivratri 2022: ಶಿವರಾತ್ರಿಯಂದು ಯಾವ ರಾಶಿಯವರು ಯಾವ ಮಂತ್ರ ಪಠಿಸಬೇಕು?: ಇಲ್ಲಿದೆ ನೋಡಿ

ಶಿವರಾತ್ರಿಯಂದು ಯಾವ ಮಂತ್ರಗಳಿಂದ ಶಿವನನ್ನು ಜಪಿಸಿದರೆ ಹೆಚ್ಚು ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳಿ. ಇಲ್ಲಿದೆ ನೋಡಿ ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಿದರೆ ಶಿವನ ಅನುಗ್ರಹವನ್ನು ಪಡೆಯಬಹುದು ಎನ್ನುವ ಮಾಹಿತಿ.

Mahashivratri 2022: ಶಿವರಾತ್ರಿಯಂದು ಯಾವ ರಾಶಿಯವರು ಯಾವ ಮಂತ್ರ ಪಠಿಸಬೇಕು?: ಇಲ್ಲಿದೆ ನೋಡಿ
ಶಿವ (ಸಾಂಕೇತಿಕ ಚಿತ್ರ)
TV9 Web
| Edited By: |

Updated on: Feb 25, 2022 | 2:39 PM

Share

ಮಹಾಶಿವರಾತ್ರಿ ಹತ್ತಿರ ಬರುತ್ತಿದೆ. ಕಷ್ಟಗಳನ್ನು ಕಳೆಯುವ ಮಹಾದೇವನನ್ನು ಭಕ್ತಿಯಿಂದ ಆರಾಧಿಸುವ ದಿನವದು. ಈ ಬಾರಿ ಮಾರ್ಚ್​ 1ರಂದು ಮಹಾಶಿವರಾತ್ರಿಯನ್ನು ಅಚರಿಸಲಾಗುತ್ತಿದೆ. ಈ ದಿನ ಶಿವನು ಭಕ್ತರನ್ನು ಅನುಗ್ರಹಿಸುತ್ತಾನೆ ಎನ್ನುವ ನಂಬಿಕೆಯಿದೆ. ಕ್ಷೀರ ಸಾಗರದ ಮಂಥನದಲ್ಲಿ ಬಂದ ವಿಷವನ್ನು ಸೇವಿಸಿ ನೀಲಕಂಠನೆನಿಸಿಕೊಂಡನ  ಮಹಾದೇವನನ್ನು ಆರಾಧಿಸುವ ದಿನವದು, ಮಾಘ ಕೃಷ್ಣ ಚತುರ್ದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದು ಇಡೀ ದಿನ ಉಪವಾಸ ವೃತ ಕೈಗೊಂಡು,  ರಾತ್ರಿ ಜಾಗರಣೆ ಮಾಡಿ ರುದ್ರಶಂಕರನನ್ನು ಆರಾಧಿಸಲಾಗುತ್ತದೆ. ಶಿವನನನ್ನು ಭಕ್ತಿಯಿಂದ ಪೂಜಿಸಲು ಕೆಲವು  ಮಂತ್ರಗಳನ್ನು ಹೇಳಿಕೊಳ್ಳಬಹುದು. ರಾಶಿ ಚಕ್ರಕ್ಕೆ ಅನುಸಾರವಾಗಿ ಮಂತ್ರಗಳನ್ನು ಹೇಳಿಕೊಂಡರೆ ಸಿದ್ಧಿ ಹೆಚ್ಚು ಎನ್ನಲಾಗುತ್ತದೆ. ಹಾಗಾದರೆ ಯಾವ ರಾಶಿಯವರು ಯಾವ ಮಂತ್ರಗಳಿಂದ ಶಿವನನ್ನು ಜಪಿಸಿದರೆ ಹೆಚ್ಚು ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳಿ. ಇಲ್ಲಿದೆ ನೋಡಿ ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಿದರೆ ಶಿವನ ಅನುಗ್ರಹವನ್ನು ಪಡೆಯಬಹುದು ಎನ್ನುವ ಮಾಹಿತಿ.

ಮೇಷ ರಾಶಿ: ರಾಶಿ ಚಕ್ರದ ಮೊದಲ ರಾಶಿ. ಮೇಷ ರಾಶಿ. ಈ ರಾಶಿಯವರು ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿದರೆ ಹೆಚ್ಚು ಉತ್ತಮ. ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವನ್ನು ಪಠಿಸಿದರೆ ಇಷ್ಟಾರ್ಥಗಳು ಸಿದ್ಧಿಯಾಗಲಿವೆ.

ವೃಷಭ ರಾಶಿ: ಶಿವನ ಆಶೀರ್ವಾದವನ್ನು ಪಡೆಯಲು ವೃಷಭ ರಾಶಿಯ ಜನರು ಓಂ ನಾಗೇಶ್ವರಾಯ ನಮಃ ಮಂತ್ರವನ್ನು ಪಠಿಸಬೇಕು. ಇದು ಮಾನಸಿಕ ನೆಮ್ಮದಿಯನ್ನು ನೀಡಲಿದೆ.

ಮಿಥುನ ರಾಶಿ: ರಾಶಿ ಚಕ್ರದಲ್ಲಿ ಮಿಥುನ ರಾಶಿಯ ಜನ ಶಿವರಾತ್ರಿಯಂದು ಓಂ ನಮಃ ಶಿವಾಯ ಕಾಲಂ ಮಹಾಕಾಲ ಕಲಾಂ ಕೃಪಾಲಂ ಓಂ ನಮಃ ಮಂತ್ರವನ್ನು ಪಠಿಸಬೇಕು. ಮಹಾದೇವನ ಅನುಗ್ರಹವನ್ನು ಪಡೆಯಬಹದು.

ಕರ್ಕಾಟಕ ರಾಶಿ: ಶಿವರಾತ್ರಿಯ ದಿನ ಕರ್ಕಾಟಕ ರಾಶಿಯವರು ಓಂ ಚಂದ್ರಮೌಳೇಶ್ವರ ನಮಃ ಮಂತ್ರವನ್ನು ಪಠಿಸಬೇಕು. ಶಿವನನ್ನು ಭಕ್ತಿಯಿಂದ ಪೂಜಿಸುವಾಗ ಈ ಮಂತ್ರವನ್ನು ಜಪಿಸಿಕೊಳ್ಳಿ.

ಸಿಂಹ ರಾಶಿ: ಕಷ್ಟಗಳನ್ನು ಪರಿಹರಿಸಿಕೊಳ್ಳಲು ಶಿವರಾತ್ರಿಯಂದು ಶಿವನ ಆರಾಧನೆ ಮಾಡಿ. ಶಿವನ ಪೂಜೆಯ  ವೇಳೆಯಲ್ಲಿಓಂ ನಮಃ ಶಿವಾಯ ಕಾಲಂ ಮಹಾಕಾಲ ಕಲಾಂ ಕೃಪಾಲಂ ಓಂ ನಮಃ ಮಂತ್ರವನ್ನು ಜಪಸಿ.

ಕನ್ಯಾ ರಾಶಿ: ರಾಶಿ ಚಕ್ರದಲ್ಲಿ ಕನ್ಯಾ ರಾಶಿಯ ಜನ ಶಿವರಾತ್ರಿಯಂದು ಓಂ ನಮಃ ಶಿವಾಯ ಕಾಲಂ ಮಹಾಕಾಲ ಕಲಾಂ ಕೃಪಾಲಂ ಓಂ ನಮಃ  ಮಂತ್ರವನ್ನು ಪಠಿಸಿ. ಮನಸ್ಸಿನ ಗೊಂದಲಗಳಿಗೆ ಪರಿಹಾರ ನೀಡುತ್ತದೆ.

ತುಲಾ ರಾಶಿ: ರಾಶಿ ಚಕ್ರದಲ್ಲಿ ತುಲಾ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿಯಾಗಿ,ಯಶಸ್ಉ ಸಿಗಬೇಕೆಂದರೆ ಶಿವರಾತ್ರಿಯಂದು ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯವನ್ನು 108 ಬಾರಿ ಜಪಿಸಿ.

ವೃಶ್ಚಿಕ ರಾಶಿ: ಈ ರಾಶಿಯ ಜನರು ಓಂ ಹೌಂ ಜೂಂ ಸಃ  ಮಂತ್ರವನ್ನು ಜಪಸಿ, ಶಿವನ ಅನುಗ್ರಹ ಪಡೆದುಕೊಳ್ಳಿ.

ಧನು ರಾಶಿ: ಓಂ ನಮೋ ಶಿವಾಯ ಗುರು ದೇವಾಯ ನಮಃ ಮಂತ್ರವನ್ನು ಧನು ರಾಶಿಯ ಜನರು ಪಠಿಸಿ. ಹಾಲುನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಿ. ಕಷ್ಟಗಳು ದೂರವಾಗುತ್ತವೆ.

ಮಕರ ರಾಶಿ: ರಾಶಿ ಚಕ್ರದಲ್ಲಿ ಮಕರ ರಾಶಿಯ ಜನರು ಓಂ ನಮೋ ಶಿವಾಯ ಗುರು ದೇವಾಯ ನಮಃ ಮಂತ್ರವನ್ನು ಜಪಿಸಿ ಭಕ್ತಿಯಿಂದ ಪೂಜಿಸಿದರೆ ಕೆಲಸದಲ್ಲಿ ಯಶಸ್ಸು ಸಿಗಲಿದೆ.

ಕುಂಭ ರಾಶಿ: ಮಹಾಶಿವರಾತ್ರಿಯಂದು ಕುಂಭ ರಾಶಿಯ ಜನರು ಓಂ ಹೌಂ ಜೂಂ ಸಃ  ಮಂತ್ರವನ್ನು ಪಠಿಸಿ. ಇದರಿಂದ ಅಂದುಕೊಂಡ ಕೆಲಸಗಳು ನೆರವೇರಿ, ಕಷ್ಟಗಳು ದೂರಾಗುತ್ತದೆ.

ಮೀನ ರಾಶಿ: ಓಂ ನಮೋ ಶಿವಾಯ ಗುರು ದೇವಾಯ ನಮಃ  ಮಂತ್ರವನ್ನು 108 ಬಾರಿ ಮೀನ ರಾಶಿಯವರು ಪಠಿಸಿದರೆ ಶಿವನ ಅನುಗ್ರಹ ದೊರೆಯಲಿದೆ. ಶಿವರಾತ್ರಿಯಂದು ಜಪಿಸಲು ಈ ಮಂತ್ರ ಸೂಕ್ತವಾಗಿದೆ.

ಇದನ್ನೂ ಓದಿ:

Mahashivratri 2022: ಈ ರಾಶಿಯವರಿಗೆ ಶಿವನ ಅನುಗ್ರಹ ದೊರೆಯಲಿದೆ