ರಷ್ಯಾ ಎದುರಿಸುವಷ್ಟು ಸೇನಾ ತಾಕತ್ತು ಉಕ್ರೇನ್​ಗಿಲ್ವಾ? ರಷ್ಯಾ-ಉಕ್ರೇನ್​ ಸೇನಾ ಬಲಾಬಲ ಎಷ್ಟು? ಮಧ್ಯೆ ನ್ಯಾಟೋ ತಾಕತ್ತು ಏನು?

Russia Ukraine Crisis: ಕೊತಕೊತಾ ಕುದಿಯುತಿದೆ ಉಕ್ರೇನ್ ನೆಲ; ರಷ್ಯಾದ ಪುಟೀನ್ ಕೆಂಡಾಮಂಡಲ! ಇಬ್ಬರ ಸೇನಾ ಬಲ ಹೇಗಿದೆ? ನ್ಯಾಟೋ ತಾಕತ್ತು ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

ರಷ್ಯಾ ಎದುರಿಸುವಷ್ಟು ಸೇನಾ ತಾಕತ್ತು ಉಕ್ರೇನ್​ಗಿಲ್ವಾ? ರಷ್ಯಾ-ಉಕ್ರೇನ್​ ಸೇನಾ ಬಲಾಬಲ ಎಷ್ಟು? ಮಧ್ಯೆ ನ್ಯಾಟೋ ತಾಕತ್ತು ಏನು?
ರಷ್ಯಾ ಎದುರಿಸುವಷ್ಟು ಸೇನಾ ತಾಕತ್​ ಉಕ್ರೇನ್​ಗಿಲ್ವಾ? ರಷ್ಯಾ-ಉಕ್ರೇನ್​ ಸೇನಾ ಬಲಾಬಲ ಎಷ್ಟು? ಮಧ್ಯೆ ನ್ಯಾಟೋ ತಾಕತ್ತು ಏನು?
Follow us
| Updated By: ಸಾಧು ಶ್ರೀನಾಥ್​

Updated on:Feb 25, 2022 | 8:56 AM

ನವದೆಹಲಿ: ಉಕ್ರೇನ್ ನೆಲ ಕಾದ ಕೆಂಡದಂತಾಗಿದೆ… ಎತ್ತ ನೋಡಿದ್ರೂ ಕುಲುಮೆಯಂತೆ ಹೊಗೆಯಾಡ್ತಿದೆ… ಬಾಂಬ್​ನ ಮಳೆ… ಗುಂಡಿನ ಮೊರೆತ.. ಸ್ಫೋಟದ ತೀವ್ರತೆಗೆ ಉಕ್ರೇನ್ ಜನ ಕಂಗೆಟ್ಟು ಹೋಗಿದ್ದಾರೆ.. ಅಷ್ಟಕ್ಕೂ ಪುಟ್ಟ ದೇಶದ ಉಕ್ರೇನ್ ಮೇಲೆ ಪುಟಿನ್​ ಬಲಿಷ್ಠ ಸೇನೆಯನ್ನಿಟ್ಟುಕೊಂಡೇ ಅಟ್ಯಾಕ್ ಮಾಡಿದ್ದಾರೆ… ರಷ್ಯಾ ಎದುರಿಸುವಷ್ಟು ಸೇನಾ ತಾಕತ್​ ಉಕ್ರೇನ್​ಗಿಲ್ವಾ..? ರಷ್ಯಾ- ಉಕ್ರೇನ್​ ಸೇನಾ ಬಲಾಬಲ ಎಷ್ಟು..? ರಷ್ಯಾ ಏನೋ ಕಾಲು ಕೆರೆದು ಉಕ್ರೇನ್ ವಿರುದ್ಧ ಸಮರ ಸಾರಿ ದಾಳಿ ಮಾಡ್ತಿದೆ. ಯಾರ ಮಾತನ್ನೂ ಕೇಳದೆ ರಷ್ಯಾ ಯುದ್ಧ ನಡೆಸ್ತಿದೆ.. ಉಕ್ರೇನ್ ಕೂಡ ಪ್ರತಿರೋಧ ಮಾಡ್ತಿದೆ.. ಅಸಲಿಗೆ ರಷ್ಯಾ ಸೇನಾ ಎದುರಿಸುವಷ್ಟು ಶಕ್ತಿ ಉಕ್ರೇನ್ ​ಗೆ ಇಲ್ವಾ? ಎರಡು ರಾಷ್ಟ್ರಗಳ ಬಳಿಯಿರೋ ಸೇನೆ ಎಷ್ಟಿದೆ ಅಂತಾ ನೋಡೋದಾದ್ರೆ .(Russia Ukraine War)

ಸೇನಾ ಬಲಾ ಬಲ: ಉಕ್ರೇನ್ – ರಷ್ಯಾ ಸೈನಿಕರು: 11 ಲಕ್ಷ – 29 ಲಕ್ಷ ಶಸ್ತ್ರಾಸ್ತ್ರ ವಾಹನ: 12,303  – 30,122 ಯುದ್ಧ ಟ್ಯಾಂಕರ್: 2596  – 12,240 ಟವರ್ ಆರ್ಟಿಲರೀಸ್: 2040 – 7571 ಯುದ್ಧ ವಿಮಾನ: 98 – 1511 ಯುದ್ಧ ಹೆಲಿಕಾಪ್ಟರ್: 34 – 544

ಉಕ್ರೇನ್ ಒಳಗೆ 2 ಲಕ್ಷಕ್ಕೂ ಹೆಚ್ಚು ಸೈನಿಕರನ್ನ ನುಗ್ಗಿಸಿರೋ ರಷ್ಯಾ ಬರೋಬ್ಬರಿ 29 ಲಕ್ಷ ಸೇನಾ ಪಡೆಯನ್ನ ಹೊಂದಿದೆ. ಆದ್ರೆ, ಉಕ್ರೇನ್‌ನಲ್ಲಿ ಇರೋದು ಕೇವಲ 11 ಲಕ್ಷ ಸೈನಿಕಷ್ಟೇ. ಇನ್ನೂ ಉಕ್ರೇನ್‌ನಲ್ಲಿ 12 ಸಾವಿರದ 303 ಶಸ್ತ್ರಾಸ್ತ್ರ ವಾಹನಗಳಿದ್ರೆ, ರಷ್ಯಾ ಬಳಿ 30 ಸಾವಿರದ 122 ಶಸ್ತ್ರಾಸ್ತ್ರ ವಾಹನಗಳಿವೆ. 2 ಸಾವಿರದ 596 ಯುದ್ಧ ಟ್ಯಾಂಕರ್‌ ಉಕ್ರೇನ್ ಹೊಂದಿದ್ರೆ, ರಷ್ಯಾ ಬರೋಬ್ಬರಿ 12 ಸಾವಿರದ240 ಯುದ್ಧ ಟ್ಯಾಂಕರ್ ಹೊಂದಿದೆ. ಇನ್ನೂ ಟವರ್ ಆರ್ಟಿಲರೀಸ್ ಉಕ್ರೇನ್ ಬಳಿ 2 ಸಾವಿರದ 40 ಇದೆ. ರಷ್ಯಾ ಬಳಿ 7 ಸಾವಿರದ 571 ಟವರ್ ಆರ್ಟಿಲರೀಸ್ ಇದೆ. ಹಾಗೆಯೇ ಉಕ್ರೇನ್‌ನಲ್ಲಿ 98 ಯುದ್ಧ ವಿಮಾನಗಳಿದ್ರೆ, ರಷ್ಯಾ 1 ಸಾವಿರದ 511 ಯುದ್ಧ ವಿಮಾನ ಹೊಂದಿದೆ. ಇನ್ನೂ ಉಕ್ರೇನ್‌ ಬಳಿ ಕೇವಲ 34ಯುದ್ಧ ಹೆಲಿಕಾಪ್ಟರ್‌ಗಳಿವೆ. ರಷ್ಯಾ ಸೇನೆಯಲ್ಲಿ 544 ಯುದ್ಧ ಹೆಲಿಕಾಪ್ಟರ್‌ಗಳು ಇದ್ದು, ಉಕ್ರೇನ್‌ಗಿಂದ ಮೂರು ಪಟ್ಟು ಸೇನಾ ಪವರ್ ರಷ್ಯಾ ಹೊಂದಿದೆ.

ನ್ಯಾಟೋ ರಾಷ್ಟ್ರಗಳಲ್ಲಿರೋ ಪ್ರಬಲ ರಾಷ್ಟ್ರಗಳು ಯಾವ್ಯಾವು? ನ್ಯಾಟೋ ಅಂದ್ರೆ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್​… ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ 30 ರಾಷ್ಟ್ರಗಳು ಸದಸ್ಯತ್ವ ಹೊಂದಿರೋ ನ್ಯಾಟೋ, 1948ರಲ್ಲಿ ಸ್ಥಾಪನೆಯಾಗಿತ್ತು.. ಮುಖ್ಯವಾಗಿ 30 ರಾಷ್ಟ್ರಗಳ ಪೈಕಿ ಅಮೆರಿಕ, ಫ್ರಾನ್ಸ್, ಯುಕೆ, ಇಟಲಿ ಮತ್ತು ಜರ್ಮನಿ ನ್ಯಾಟೋದಲ್ಲಿ ಪ್ರಬಲ ರಾಷ್ಟ್ರಗಳಾಗಿವೆ.

ನ್ಯಾಟೋ ಸದಸ್ಯ ರಾಷ್ಟ್ರಗಳಲ್ಲಿ ಒಟ್ಟು 35 ಲಕ್ಷ ಸೈನಿಕರಿದ್ದಾರೆ.‌. ಅತ್ಯಾಧುನಿಕ‌ ಯುದ್ಧ ವಿಮಾನಗಳು, ಟ್ಯಾಂಕರ್ ಗಳು, ಕ್ಷಿಪಣಿಗಳು ಇವೆ.‌. ಹೀಗಾಗಿ ನ್ಯಾಟೋ ಏನಾದ್ರೂ ರಷ್ಯಾ ವಿರುದ್ಧ ಹೋರಾಟಕ್ಕೆ‌ ಇಳಿದರೆ ಅಲ್ಲಿಗೆ ಮೂರನೇ ಮಹಾಯುದ್ಧ ಆರಂಭ ಆದಂತೆಯೇ ಲೆಕ್ಕ.. ಹಾಗಾದ್ರೆ, ನ್ಯಾಟೋ ಶಕ್ತಿ ಏನು? ನ್ಯಾಟೋ ಒಕ್ಕೂಟ ತನ್ನದೇ ಆದ ಮಿಲಿಟರಿ ಪಡೆ ಹೊಂದಿದೆಯೇ ಅಂತಾ ನೋಡೋದಾದ್ರೆ,

ನ್ಯಾಟೋ ಬಲವೇನು? – 30 ಮಿತ್ರರಾಷ್ಟ್ರಗಳ ಮಿಲಿಟರಿ ಶಕ್ತಿಯೇ ನ್ಯಾಟೋ ಶಕ್ತಿ – ನ್ಯಾಟೋ ತನ್ನದೇ ಆದ ಸಶಸ್ತ್ರ ಪಡೆಗಳನ್ನು ಹೊಂದಿಲ್ಲ – ಆದರೆ ಇದು ಎಲ್ಲಾ ಸದಸ್ಯ ರಾಷ್ಟ್ರಗಳಿಂದ ಮಿಲಿಟರಿ – ನಾಗರಿಕ ಸಿಬ್ಬಂದಿಯನ್ನು ಒಳಗೊಂಡಿರುವ ಶಾಶ್ವತ – ಸಮಗ್ರ ಮಿಲಿಟರಿ ಕಮಾಂಡ್ ರಚನೆಯನ್ನು ಹೊಂದಿದೆ – ಒಂದೇ ಉದ್ದೇಶಗಳನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡ್ತಾರೆ

ಇನ್ನು, 30 ಮಿತ್ರರಾಷ್ಟ್ರಗಳ ಮಿಲಿಟರಿ ಶಕ್ತಿಯೇ ನ್ಯಾಟೋ ಶಕ್ತಿಯಾಗಿದೆ.. ಅಂದ್ರೆ, ನ್ಯಾಟೋ ತನ್ನದೇ ಆದ ಸಶಸ್ತ್ರ ಪಡೆಗಳನ್ನು ಹೊಂದಿಲ್ಲ. ಆದ್ರೆ ಇದು ಎಲ್ಲಾ ಸದಸ್ಯ ರಾಷ್ಟ್ರಗಳಿಂದ ಮಿಲಿಟರಿ ಮತ್ತು ನಾಗರಿಕ ಸಿಬ್ಬಂದಿಯನ್ನು ಒಳಗೊಂಡಿದೆ. ಅದು ಕೂಡ ಶಾಶ್ವತ, ಸಮಗ್ರ ಮಿಲಿಟರಿ ಕಮಾಂಡ್ ರಚನೆಯನ್ನು ಹೊಂದಿದೆ. ಈ ಎಲ್ಲಾ ಸಿಬ್ಬಂದಿ ಒಂದೇ ಉದ್ದೇಶಗಳನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡುತ್ತಾರೆ.

ಸದ್ಯ, ಉಕ್ರೇನ್‌ ನಲ್ಲಿ ಪರಿಸ್ಥಿತಿ ಘನಘೋರವಾಗಿದೆ.. ಜನತೆ ಮನೆಯಿಂದ ಹೊರ ಬರಲಾಗದೆ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಉಕ್ರೇನ್ ಪರವಾಗಿ ನ್ಯಾಟೋ ನಿಂತು, ರಷ್ಯಾ ವಿರುದ್ಧ ತಿರುಗಿಬಿದ್ರೆ ಮೂರನೇ ಮಹಾಯುದ್ಧ ಶುರುವಾದಂತೆ.. ಇದೇ ಕಾರಣಕ್ಕೆ ಇಡೀ ವಿಶ್ವ ತಲೆಕೆಡಿಸಿಕೊಂಡಿದೆ.

Published On - 7:50 am, Fri, 25 February 22