Ukraine Crisis: ಕೈವ್​ನಲ್ಲಿ ಇಂದು ಮುಂಜಾನೆ ಭೀಕರ ಸ್ಫೋಟದ ಸದ್ದು; ಈ ಯುದ್ಧದಲ್ಲಿ ನಾವು ಏಕಾಂಗಿ ಎಂದ ಉಕ್ರೇನ್ ಅಧ್ಯಕ್ಷ

Volodymyr Zelensky | Kyiv: ಕೈವ್​ನಲ್ಲಿ ಇಂದು ಎರಡು ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದೆ. ಶುಕ್ರವಾರ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ ಮೇಲಿನ ಈ ಯುದ್ಧದಲ್ಲಿ ನಾವು ಏಕಾಂಗಿ ಎಂದು ಹೇಳಿದ್ಧಾರೆ.

Ukraine Crisis: ಕೈವ್​ನಲ್ಲಿ ಇಂದು ಮುಂಜಾನೆ ಭೀಕರ ಸ್ಫೋಟದ ಸದ್ದು; ಈ ಯುದ್ಧದಲ್ಲಿ ನಾವು ಏಕಾಂಗಿ ಎಂದ ಉಕ್ರೇನ್ ಅಧ್ಯಕ್ಷ
ಆಯುಧಗಳನ್ನು ಪರಿಶೀಲಿಸುತ್ತಿರುವ ಉಕ್ರೇನ್ ಅಧ್ಯಕ್ಷ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: shivaprasad.hs

Updated on:Feb 25, 2022 | 9:59 AM

ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು (Russia- Ukraine Crisis) ಉಲ್ಬಣವಾಗಿದ್ದು, ಗುರುವಾರ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದೆ. ಮೊದಲ ದಿನ ಸುಮಾರು 137 ಜನ ಉಕ್ರೇನಿಯನ್ನರು ಮರಣವನ್ನಪ್ಪಿದ್ದಾರೆ. ಇದರಲ್ಲಿ ಮಿಲಿಟರಿ ಸಿಬ್ಬಂದಿ, ನಾಗರಿಕರು ಸೇರಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ವಿಡಿಯೋ ಸಂದೇಶದಲ್ಲಿ ಮಾತನಾಡಿ, ಈ ಯುದ್ಧದಲ್ಲಿ ಉಕ್ರೇನ್ ಏಕಾಂಗಿಯಾಗಿದೆ ಎಂದು ಹೇಳಿದ್ದಾರೆ. ಶುಕ್ರವಾರ ವಿಡಿಯೋ ಸಂದೇಶದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ದೇಶವನ್ನು ರಕ್ಷಿಸಲು, ರಷ್ಯಾ ವಿರುದ್ಧ ಹೋರಾಡಲು ನಾವು ಏಕಾಂಗಿಯಾಗಿದ್ದೇವೆ‌’ ಎಂದು ಹೇಳಿದ್ದಾರೆ. ‘ನಮ್ಮೊಂದಿಗೆ ಯಾರು ಹೋರಾಡಲು ಸಿದ್ಧರಾಗಿದ್ದಾರೆ?’ ಎಂದು ಪ್ರಶ್ನಿಸಿರುವ ಅವರು, ‘ನಮಗೆ ಯಾರೂ ಕಾಣುತ್ತಿಲ್ಲ. ಉಕ್ರೇನ್​ಗೆ ನ್ಯಾಟೋ ಸದಸ್ಯತ್ವದ ಖಚಿತತೆ ನೀಡಲು ಯಾರು ಸಿದ್ಧರಿದ್ದಾರೆ? ಎಲ್ಲರೂ ಭಯಪಡುತ್ತಾರೆ’ ಎಂದು ಹೇಳಿದ್ದಾರೆ.

ಗುರುವಾರ ಮುಂಜಾನೆ ರಷ್ಯಾ ಆರಂಭಿಸಿದ ದಾಳಿಯಿಂದ ಈವರೆಗೆ 137 ಜನರು ಕೊಲ್ಲಲ್ಪಟ್ಟಿದ್ದು, 316 ಜನರು ಗಾಯಗೊಂಡಿದ್ದಾರೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ‘ರಷ್ಯಾದ ವಿಧ್ವಂಸಕ ಗುಂಪುಗಳು ಉಕ್ರೇನ್ ರಾಜಧಾನಿ ಕೈವ್​​ನ್ನು ಪ್ರವೇಶಿಸಿವೆ’ ಎಂದಿರುವ ಅವರು ಪ್ರಜೆಗಳಿಗೆ ಜಾಗರೂಕರಾಗಿರುವಂತೆ ಸೂಚಿಸಿದರು. ಜತೆಗೆ ಕರ್ಫ್ಯೂ ಪಾಲಿಸಬೇಕು ಎಂದೂ ಹೇಳಿದ್ಧಾರೆ.

ರಷ್ಯಾವು ತಮ್ಮನ್ನು ಟಾರ್ಗೆಟ್ ನಂಬರ್ 1 ಎಂದು ಗುರುತಿಸಿದೆ. ತಮ್ಮ ಕುಟುಂಬವನ್ನು ಎರಡನೇ ಟಾರ್ಗೆಟ್ ಮಾಡಿದೆ ಎಂದಿರುವ ಝೆಲೆನ್ಸ್ಕಿ ಅದಾಗ್ಯೂ ತಾವು ಉಕ್ರೇನ್​ನಲ್ಲೇ ಉಳಿದಿದ್ದೇನೆ ಎಂದಿದ್ದಾರೆ. ಉಕ್ರೇನ್ ಮುಖ್ಯಸ್ಥರನ್ನು ಕೆಳಗಿಳಿಸುವ ಮೂಲಕ ದೇಶವನ್ನು ರಾಜಕೀಯವಾಗಿ ನಾಶಮಾಡಲು ರಷ್ಯಾ ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.

ಇಂದು ಮುಂಜಾನೆ ಉಕ್ರೇನ್​ನಲ್ಲಿ ಎರಡು ಸ್ಫೋಟದ ಸದ್ದು:

ಉಕ್ರೇನ್ ರಾಜಧಾನಿ ಕೈವ್​ನ ಸಮೀಪ ಇಂದು (ಶುಕ್ರವಾರ) ಮುಂಜಾನೆ ಎರಡು ಸ್ಫೋಟದ ಶಬ್ಧಗಳು ಕೇಳಿಬಂದಿವೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನಿನ್ನೆ ಪೂರ್ವ ಉಕ್ರೇನ್‌ನ ಕೈವ್‌ನಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಅಧಿಕೃತಗೊಳಿಸಿದ್ದಾರೆ. ಉಕ್ರೇನ್ ನ ಕೈವ್ ಭಾಗದಲ್ಲಿ ರಷ್ಯಾ ದಾಳಿ ಮುಂದುವರೆದಿದ್ದು, 40 ನಿಮಿಷದ ಅಂತರದಲ್ಲಿ ಕನಿಷ್ಠ ಮೂರು ಡಜನ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಯುಎಸ್ ಸೆನೆಟರ್ ರೂಬಿಯೊರಿಂದ ಮಾಹಿತಿ ನೀಡಿದ್ದಾರೆ. ಈ ಮೂಲಕ ಕೈವ್ ಸದ್ಯ ಆತಂಕದಲ್ಲಿದೆ ಎಂದು ಹೇಳಲಾಗಿದೆ.

ಈ ಕುರಿತು ಎಎನ್​ಐ ಟ್ವೀಟ್:

ಇದನ್ನೂ ಓದಿ:

ರಷ್ಯಾ-ಉಕ್ರೇನ್ ನಡುವೆ ಮಹಾಯುದ್ಧ! ಉಕ್ರೇನ್​ನಲ್ಲಿ ಸಿಲುಕಿರುವ ಕರ್ನಾಟಕದ 91 ವಿದ್ಯಾರ್ಥಿಗಳು; ಪೋಷಕರು ಕಣ್ಣೀರು

Ukraine Crisis: ರಷ್ಯಾ ನಡೆಸಿದ ದಾಳಿಯಲ್ಲಿ ಉಕ್ರೇನ್​ನ 137 ಜನರ ಮರಣ; ರಷ್ಯಾ- ಉಕ್ರೇನ್ ಬೆಳವಣಿಗೆಯ ಮುಖ್ಯಾಂಶಗಳು ಇಲ್ಲಿವೆ

Published On - 9:49 am, Fri, 25 February 22