ಇದೊಂದು ಥರಾ ಡಿಫರೆಂಟ್ ಥಂಬ್ ರೂಲ್! ಹೆಬ್ಬೆಟ್ಟು ತೋರಿಸುತ್ತದೆ ಜೀವನ ಮಾರ್ಗ! ಅದೇನು ನೋಡೋಣಾ ಬನ್ನಿ
Thumb Rule: ಇದೊಂದು ಡಿಫರೆಂಟ್ ರೀತಿಯ ಥಂಬ್ ರೂಲ್! ‘ದಾರ್ಶನಿಕ’ ಹೆಬ್ಬೆಟ್ಟು ಜೀವನ ಮಾರ್ಗ ತೋರಿಸುತ್ತದೆ! ಹೀಗೆ ಪರಮಾತ್ಮನ ಸೃಷ್ಟಿಯಲ್ಲಿ ಮಾನವನಿಗೆ ಜೀವಿಸಲು ಪೂರಕವಾಗಿ ನೀಡಿರುವ ಅಂಗಾಂಗಗಳಲ್ಲೂ ಜೀವನದ ಪಾಠವನ್ನು ಹುದುಗಿಸಿದ್ದಾನೆ ಎಂದರೆ ಆಶ್ಚರ್ಯವಲ್ಲವೇ! ತಿನ್ನಲು, ನಮಿಸಲು, ಹಿಡಿಯಲು ಹೀಗೆ ಹಲವಾರು ದೈನಂದಿನ ಕಾರ್ಯಗಳಿಗೆ ಬಳಸುವ ನಮ್ಮ ಕೈಬೆರಳುಗಳೂ ನಮಗೆ ಬದುಕಿನ ಪಾಠವನ್ನು ಕಲಿಸುತ್ತದೆ.
ಇದೊಂದು ಡಿಫರೆಂಟ್ ರೀತಿಯ ಥಂಬ್ ರೂಲ್! ‘ದಾರ್ಶನಿಕ’ ಹೆಬ್ಬೆಟ್ಟು ತೋರಿಸುತ್ತದೆ ಜೀವನ ಮಾರ್ಗ! ಪರಮಾತ್ಮನ ಸೃಷ್ಟಿಯಲ್ಲಿ ಮಾನವನಿಗೆ ಜೀವಿಸಲು ಪೂರಕವಾಗಿ ನೀಡಿರುವ ಅಂಗಾಂಗಗಳಲ್ಲೂ ಜೀವನದ ಪಾಠವನ್ನು ಹುದುಗಿಸಿದ್ದಾನೆ ಎಂದರೆ ಆಶ್ಚರ್ಯವಲ್ಲವೇ! ತಿನ್ನಲು, ನಮಿಸಲು, ಹಿಡಿಯಲು ಹೀಗೆ ಹಲವಾರು ದೈನಂದಿನ ಕಾರ್ಯಗಳಿಗೆ ಬಳಸುವ ನಮ್ಮ ಕೈಬೆರಳುಗಳೂ ನಮಗೆ ಬದುಕಿನ ಪಾಠವನ್ನು ಕಲಿಸುತ್ತದೆ. ಹೆಬ್ಬೆಟ್ಟು (Thumb) ನಮ್ಮಲ್ಲಿರುವ ದೈವತ್ವಕ್ಕೆ ಪ್ರತೀಕ. ಹೆಬ್ಬೆಟ್ಟಿಲ್ಲದೆ ನಾವು ಬರೆಯುವುದು, ಮುಷ್ಠಿ ಮಾಡುವುದು, ಈ ರೀತಿಯ ಯಾವು ಕೆಲಸಗಳನ್ನೂ ಮಾಡಲಾಗುವುದಿಲ್ಲ. ಆದ್ದರಿಂದ, ಹೆಬ್ಬೆಟ್ಟಿನ ಮೂಲಕ (Thumb finger) ನಮ್ಮಲ್ಲಿರುವ ದೈವತ್ವವನ್ನು ಕಂಡುಕೊಳ್ಳಬೇಕು ಮತ್ತು ಯಶಸ್ವಿಯಾದ ಸುಖಕರ ಜೀವನವನ್ನು ರೂಪಿಸಿಕೊಳ್ಳಬೇಕು.
ನಮ್ಮ ಹೆಬ್ಬೆಟ್ಟು ನಮಗೆ ಜೀವನದ ಅನೇಕ ಪಾಠಗಳನ್ನು ಕಲಿಸಬಲ್ಲುದು. ಅದರ ಕೆಲವು ವಿವರ ಇಲ್ಲಿದೆ.
- ಎಲ್ಲ ಇತರ ಬೆರಳುಗಳಿಗೂ ಬಹಳ ಸುಲಭವಾಗಿ ದೊರಕುವಂತಹ ಬೆರಳು ಹೆಬ್ಬೆಟ್ಟು: ಉತ್ತಮ ಜೀವನವನ್ನು ನಡೆಸಬೇಕಾದರೆ ನಮ್ಮ ಬಳಿ ಎಲ್ಲರೂ ಬಹಳ ಸುಲಭವಾಗಿ ಬರುವ ಹಾಗಿರಬೇಕು. ನಾವು ಎಲ್ಲರಿಗೂ ಸಹ ದೊರಕುವಂತಹವರಾಗಿರಬೇಕು. ಎಲ್ಲರಿಂದ ದೂರವಾಗಿ, ಒಂಟಿಯಾಗಿ ಬದುಕು ಸಾಗಿಸಿದರೆ ನಾವು ಯಶಸ್ವಿಯಾಗಲಾರೆವು
- ಬೇರೆ ಯಾವ ಬೆರಳು ಗಾಯಗೊಂಡರೂ ಸಹ ಹೆಬ್ಬೆಟ್ಟಿನ ಸಹಾಯದಿಂದ ಕೆಲವು ಕೆಲಸಗಳನ್ನು ಮಾಡಬಹುದು. ಆದರೆ ಹೆಬ್ಬೆಟ್ಟು ಗಾಯಗೊಂಡರೆ ಅಥವಾ ಕತ್ತರಿಸಿ ಹೋದರೆ, ಕೆಲಸಗಳನ್ನು ಮಾಡಲಾಗುವುದಿಲ್ಲ. ಅಂದರೆ, ಎಲ್ಲ ಕೆಲಸಕಾರ್ಯಗಳಿಗೂ ಬೇಕಾಗಿರುವ ಬೆರಳು ಹೆಬ್ಬೆಟ್ಟು: ಎಲ್ಲ ಸಂದರ್ಭಗಳಲ್ಲೂ ಎಲ್ಲರಿಗೂ ನಾವು ಬೇಕಾದ ವ್ಯಕ್ತಿಯಾಗಬೇಕು. ನಾವಿಲ್ಲದೆ ಕೆಲಸವು ಮುಂದಕ್ಕೆ ಹೋಗುವುದೇ ಇಲ್ಲವೇನೋ ಎಂಬಂಥಹ ವ್ಯಕ್ತಿತ್ವ ನಮ್ಮದಾಗಬೇಕು. ಜ್ಞಾನ ಮತ್ತು ಕೌಶಲ್ಯದ ತುತ್ತತುದಿಯನ್ನು ಮುಟ್ಟಬೇಕು.
- ಕುಂಕುಮವು ಪ್ರೀತಿ ಮತ್ತು ರಕ್ಷಣೆಯ ಪ್ರತೀಕ. ಕುಂಕುಮವನ್ನು ಇತರರಿಗೆ ಇಡಲು ಹೆಬ್ಬೆಟ್ಟನ್ನು ಬಳಸುತ್ತೇವೆ: ಜನರು ನಮ್ಮ ಬಳಿಗೆ ಪ್ರೀತಿಯನ್ನು ಮತ್ತು ರಕ್ಷಣೆಯನ್ನು ಬಯಸಿ ಬರಬೇಕು. ಅಂಥಹ ಉತ್ತಮ ಗುಣ ಮತ್ತು ಹೆಚ್ಚಿನ ಧೈರ್ಯವನ್ನು ನಾವು ಬೆಳೆಸಿಕೊಳ್ಳಬೇಕು.
- ಯಶಸ್ಸು, ಗೆಲುವುಗಳನ್ನು ತೋರಿಸಲು ಹೆಬ್ಬೆಟ್ಟನ್ನು ಚಿಹ್ನೆಯಾಗಿ ಬಳಸಲಾಗುವುದು. ಹೆಚ್ಚಿನ ಪರಿಶ್ರಮದಿಂದ ಮತ್ತು ಬುದ್ಧಿವಂತಿಕೆಯಿಂದ ಯಶಸ್ಸು ಹಾಗೂ ಗೆಲುವುಗಳನ್ನು ಗಳಿಸಬೇಕು.
- ಮುಷ್ಠಿಗೆ ಹೆಬ್ಬೆಟ್ಟೇ ಅತಿ ಹೆಚ್ಚು ಶಕ್ತಿಯನ್ನು ಕೊಡುತ್ತದೆ. ಆದರೆ ಹೆಬ್ಬೆಟ್ಟು ಮುಷ್ಠಿಯ ಹೊರಗಿರುವುದಿಲ್ಲ. ತೆರೆಯ ಮರೆಯಲ್ಲಿದ್ದು, ಮುಷ್ಠಿಗೆ ಶಕ್ತಿಯನ್ನು ನೀಡುತ್ತದೆ. ಎಲ್ಲವೂ ನನ್ನಿಂದಲೇ ಎಂದು ತೋರಿಸಿ ಕೊಳ್ಳಬಾರದು. ತೆರೆಮರೆಯಲ್ಲಿದ್ದು ಕೆಲಸ ಮಾಡಿ ತೃಪ್ತಿಯನ್ನು ಪಡೆಯಬೇಕು.
- ಹಸ್ತಲಾಘವ ನೀಡುವಾಗ ಅಥವಾ ಯಾವುದಾದರೂ ವಸ್ತುವನ್ನು ಎತ್ತುವಾಗ, ಹೆಚ್ಚು ಶ್ರಮವನ್ನು ಇತರ ಬೆರಳುಗಳು ಮಾಡುತ್ತದೆ. ಹೆಬ್ಬೆಟ್ಟು ಕೇವಲ ಆಧಾರಪ್ರಾಯವಾಗಿರುತ್ತದೆ: ಎಲ್ಲ ಕೆಲಸಗಳನ್ನು ನಾನೇ ಮಾಡುತ್ತೇನೆಂದು ಮುಂದೆ ಹೋಗಬಾರದು. ಇದರಿಂದ ಇತರರು ತರಬೇತಿ ಪಡೆಯಲು ಮತ್ತು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ಆದಷ್ಟು ಕೆಲಸಕಾರ್ಯಗಳನ್ನು ಸಂಬಂಧಪಟ್ಟವರು ಮಾಡಬೇಕು. ನಾವು ಕೇವಲ ಬೇಕಿರುವ ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕು.
- ನಮ್ಮನ್ನು ನಾವು ತೋರಿಸಿಕೊಳ್ಳಲು ಮತ್ತು ಧೈರ್ಯವನ್ನು ಪ್ರಕಟಿಸಲು ನಾವು ಹೆಬ್ಬೆಟ್ಟನ್ನೇ ಬಳಸುತ್ತೇವೆ: ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಧೈರ್ಯದಿಂದ ಜೀವನವನ್ನು ನಡೆಸಬೇಕು.