Zodiac Signs: ನಿಮ್ಮ ರಾಶಿಯ ಲಕ್ಕಿ ನಂಬರ್ ಯಾವುದು? ಯಾವ ಸಂಖ್ಯೆ ನಿಮಗೆ ಅದೃಷ್ಟ ತರಬಹುದು? ಇಲ್ಲಿದೆ ಮಾಹಿತಿ

Lucky Numbers: ನಿಮ್ಮ ರಾಶಿಗೆ ಸರಿಹೊಂದುವ ಸಂಖ್ಯೆಗಳು ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ನಿಮ್ಮ ರಾಶಿಯ ಲಕ್ಕಿ ನಂಬರ್ ಯಾವುದು ಎಂದು ಇಲ್ಲಿ ತಿಳಿದುಕೊಳ್ಳಿ.

Zodiac Signs: ನಿಮ್ಮ ರಾಶಿಯ ಲಕ್ಕಿ ನಂಬರ್ ಯಾವುದು? ಯಾವ ಸಂಖ್ಯೆ ನಿಮಗೆ ಅದೃಷ್ಟ ತರಬಹುದು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Feb 21, 2022 | 6:30 AM

ಪ್ರತಿ ರಾಶಿಗೂ ಅದರದೇ ಆದ ಲಕ್ಕಿ ನಂಬರ್ (Lucky Number) ಇರುತ್ತದೆ. ಈ ಬಗ್ಗೆ ನಿಮಗೆ ಗೊತ್ತಾ? ಯಾವ ಸಂಖ್ಯೆಯನ್ನು ಆಯ್ದುಕೊಂಡರೆ ಅಥವಾ ಯಾವ ಸಂಖ್ಯೆಯಿಂದಾಗಿ ನೀವು ಹೆಚ್ಚು ಇಷ್ಟಾರ್ಥವನ್ನು ಪಡೆಯಬಹುದು? ನಿಮ್ಮ ರಾಶಿಗೆ (Zodiac Signs) ಸೂಕ್ತ ನಂಬರ್ ಯಾವುದು? ಈ ಬಗ್ಗೆ ನಿಮಗೆ ಒಂದಷ್ಟು ಗೊಂದಲಗಳಿರಬಹುದು. ಈ ಬಗ್ಗೆ ನೀವು ರಾಶಿ ಭವಿಷ್ಯ ಅಥವಾ ಸಂಖ್ಯಾ ಶಾಸ್ತ್ರವನ್ನು (Numerology) ನಂಬುತ್ತೀರಾದರೆ ನಿಮಗೆ ಇಲ್ಲಿ ಉತ್ತರ ಸಿಗಬಹುದು.

ನಿಮ್ಮ ರಾಶಿಗೆ ಸರಿಹೊಂದುವ ಸಂಖ್ಯೆಗಳು ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ನಿಮ್ಮ ರಾಶಿಯ ಲಕ್ಕಿ ನಂಬರ್ ಯಾವುದು ಎಂದು ಇಲ್ಲಿ ತಿಳಿದುಕೊಳ್ಳಿ.

ಮೇಷ: ಈ ರಾಶಿಯವರಿಗೆ ಮಂಗಳ ಗ್ರಹ ಹೊಂದುತ್ತದೆ. ಹಾಗೂ ಇದು ಸಂಖ್ಯೆ 5 ಕ್ಕೆ ಹೊಂದಿಕೊಂಡಿದೆ. ಹಾಗೂ 4 ಕೂಡ ಶುಭಸಂಖ್ಯೆ ಆಗಿದೆ. ಹೀಗಾಗಿ 45 ಅಥವಾ 54 ಮೇಷ ರಾಶಿಗೆ ಲಕ್ಕಿ ನಂಬರ್ ಆಗಬಹುದು. 5 ಮತ್ತು 4 ನ್ನು ಕೂಡಿಸಿದರೆ 9 ಆಗುವುದರಿಂದ 9 ಕೂಡ ಲಕ್ಕಿ ನಂಬರ್ ಆಗಬಹುದು.

ವೃಷಭ: ಈ ರಾಶಿಯವರು ತಮ್ಮ ಸಮಯ ತೆಗೆದುಕೊಂಡು ಕೆಲಸ ಮಾಡುತ್ತಾರೆ, ಅಂತ್ಯಕ್ಕೆ ಓಡುವ ಅವಸರ ಬಹುತೇಕ ಬಾರಿ ಇರುವುದಿಲ್ಲ. ಈ ರಾಶಿಯವರಿಗೆ 7 ಹಾಗೂ 5 ಲಕ್ಕಿ ನಂಬರ್ ಆಗಿದೆ. ಇದೆರಡನ್ನೂ ಸೇರಿಸಿದರೆ 12, ಕಳೆದರೆ 2 ಹಾಗೂ ಗುಣಿಸಿದರೆ 35 ಆಗುತ್ತದೆ. ಈ ಕಾರಣದಿಂದ ಈ ರಾಶಿಗೆ 2, 12, 35 ಲಕ್ಕಿ ನಂಬರ್ ಆಗಿದೆ.

ಮಿಥುನ: ಈ ರಾಶಿಯವರಿಗೆ 6 ಹಾಗೂ 8 ಶುಭಸಂಖ್ಯೆ. ಅವುಗಳನ್ನು ಕೂಡಿಸಿದರೆ 14 ಹಾಗೂ ಜೋಡಿಸಿ ಹೇಳಿದರೆ 66, 88 ಆಗಿದೆ. ಹೀಗಾಗಿ ಈ ರಾಶಿಗೆ 14, 66, 88 ಶುಭ ಸಂಖ್ಯೆ ಆಗಿದೆ.

ಕಟಕ: ಈ ರಾಶಿಯವರು ತಮ್ಮ ಪಾಡಿಗೆ ತಾವು ಇರುವುದು ಹೆಚ್ಚು ಎನ್ನಬಹುದು. ಈ ರಾಶಿಯವರ ಗ್ರಹ ಚಂದ್ರ. ಹಾಗೂ ಲಕ್ಕಿ ನಂಬರ್ 9 ಮತ್ತು 7. ಇದನ್ನು ಗುಣಿಸಿದರೆ 63 ಆಗುತ್ತದೆ. ಒಟ್ಟು ಈ ರಾಶಿಯ ಲಕ್ಕಿ ನಂಬರ್ 7, 9 ಮತ್ತು 63 ಆಗಿದೆ.

ಸಿಂಹ: ಈ ರಾಶಿಯವರು ಸೋಲು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಈ ರಾಶಿಯ ಗ್ರಹ ಸೂರ್ಯ. ಇವರ ಲಕ್ಕಿ ನಂಬರ್ 8 ಮತ್ತು 6 ಆಗಿದೆ. ಹೀಗಾಗಿ ಈ ರಾಶಿಗೆ 68, 86 ಅಥವಾ 6-8 ರ ಗುಣಿಸಿದಾಗ ಬರುವ 48 ಲಕ್ಕಿ ನಂಬರ್ ಆಗಿದೆ.

ಕನ್ಯಾ: ಈ ರಾಶಿಯವರು ಶಿಸ್ತಿನ ಹಾಗೂ ಲಾಜಿಕಲ್ ಯೋಚನೆಯವರು ಆಗಿರುತ್ತಾರೆ. ಈ ರಾಶಿಯ ಲಕ್ಕಿ ನಂಬರ್ 9 ಮತ್ತು 8 ಆಗಿರುತ್ತದೆ. ಈ ರಾಶಿಯ ಲಕ್ಕಿ ನಂಬರ್ 89 ಹಾಗೂ 98 ಆಗಿರುತ್ತದೆ. ಅದನ್ನು ಗುಣಿಸಿದಾಗ ಸಿಗುವ 72 ಕೂಡ ಲಕ್ಕಿ ನಂಬರ್ ಆಗಿದೆ.

ತುಲಾ: ಈ ರಾಶಿಯವರ ಲಕ್ಕಿ ನಂಬರ್ 7 ಹಾಗೂ 11. ಈ ರಾಶಿಯವರು ನಿರ್ಧಾರಕ್ಕೆ ಬಹಳ ಮಹತ್ವ ಕೊಡುವುದು ಕಡಿಮೆ. ಬದಲಾಗಿ ಜೀವನದ ಹರಿವಿನ ಜೊತೆಗೆ ಸಾಗುತ್ತಾರೆ. ಇವರ ಲಕ್ಕಿ ನಂಬರ್ 77, 7, 11 ಆಗಿದೆ.

ವೃಶ್ಚಿಕ: ಈ ರಾಶಿಯವರ ಲಕ್ಕಿ ನಂಬರ್ 0 ಹಾಗೂ 13 ಆಗಿದೆ. ಇವರು 100 ಅಥವಾ 10ನ್ನು ಕೂಡ ಲಕ್ಕಿ ನಂಬರ್ ಎಂದು ಪರಿಗಣಿಸಬಹುದು. ಈ ರಾಶಿಯವರು ಬಹಳ ಕ್ಲಿಷ್ಟಕರ ಅಥವಾ ಸುಲಭಕ್ಕೆ ಅರ್ಥವಾಗದ ಮನಸ್ಥಿತಿ ಹೊಂದಿರುತ್ತಾರೆ.

ಧನು: ಈ ರಾಶಿಯವರು ತಮಾಷೆ, ಹಾಸ್ಯ ಪ್ರಿಯರು. ತಮ್ಮದೇ ನಿಯಮದಲ್ಲಿ ಬದುಕಲು ಇಷ್ಟಪಡುವವರು. ಈ ರಾಶಿಯವರಿಗೆ 4, 14 ಲಕ್ಕಿ ನಂಬರ್. ಇದನ್ನು ಗುಣಿಸಿದಾಗ ಸಿಗುವ ಸಂಖ್ಯೆ 56 ಕೂಡ ಈ ರಾಶಿಯ ಲಕ್ಕಿ ನಂಬರ್ ಆಗಬಹುದು.

ಮಕರ: ಈ ರಾಶಿಯವರು ಬಹುತೇಕ ಸಲ ಧನಮೋಹಿಗಳಾಗಿ ಇರುತ್ತಾರೆ. ಈ ರಾಶಿಗೆ ಲಕ್ಕಿ ನಂಬರ್ 15 ಹಾಗೂ 3 ಆಗಿರುತ್ತದೆ. ಅದನ್ನು ಗುಣಿಸಿದಾಗ 45 ಸಿಗುತ್ತದೆ. ಇದು ಕೂಡ ಲಕ್ಕಿ ನಂಬರ್ ಆಗಿರುತ್ತದೆ. ಬಾಗಿಸಿದಾಗ 5 ಸಿಗುತ್ತದೆ. ಹಾಗೂ 15, 3 ಅದನ್ನು ಸೇರಿಸಿದಾಗ 18 ಆಗುತ್ತದೆ. ಈ ರಾಶಿಯ ಲಕ್ಕಿ ನಂಬರ್ 5, 18, 45 ಆಗಿದೆ.

ಕುಂಭ: ಈ ರಾಶಿಯವರು ತಮ್ಮ ಬಗ್ಗೆ ತಾವು ಅತ್ಯಂತ ಹೆಚ್ಚು ಕಾಳಜಿ ಹೊಂದಿರುತ್ತಾರೆ. 1 ಹಾಗೂ 17 ಇವರ ಲಕ್ಕಿ ನಂಬರ್ ಆಗಿದೆ. ಲಕ್ಕಿ ನಂಬರ್ 1ನ್ನು ಹೆಚ್ಚುಗೊಳಿಸಿ 11 ಕೂಡ ಶುಭ ಸಂಖ್ಯೆ ಎಂದು ಪರಿಗಣಿಸಬಹುದು.

ಮೀನ: ಈ ರಾಶಿಯ ಜನರಿಗೆ 2 ಹಾಗೂ 18 ಲಕ್ಕಿ ನಂಬರ್ ಆಗಿದೆ. ಈ ಸಂಖ್ಯೆಗಳನ್ನು ಕೂಡಿಸಿದಾಗ 20 ಹಾಗೂ ಕಳೆದಾಗ 16 ಆಗುತ್ತದೆ. ಮತ್ತು ಗುಣಿಸಿದಾಗ 36 ಆಗುತ್ತದೆ. ಹೀಗಾಗಿ ಲಕ್ಕಿ ನಂಬರ್ 20, 16, 36 ಎಂದು ಹೇಳಬಹುದು.

ಇದನ್ನೂ ಓದಿ: Zodiac Signs: ನಿಮ್ಮ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದುವ ಗಿಡ ಯಾವುದು? ಇಲ್ಲಿದೆ ಮಾಹಿತಿ

ಇದನ್ನೂ ಓದಿ: Zodiac Signs: ಈ 4 ರಾಶಿಯ ಜನರು ತಮ್ಮ ಪರಿಶ್ರಮ ಮತ್ತು ಅದೃಷ್ಟದಿಂದ ಶ್ರೀಮಂತರಾಗುತ್ತಾರೆ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?