Yashoda jayanti 2022: ಮಾತೃ ಹೃದಯಿ ತಾಯಿ ಯಶೋದೆಯ ಕೃಪೆ ತಮ್ಮ ಮಕ್ಕಳ ಮೇಲಿರಲು ಇಂದು ಕೃಷ್ಣ-ಯಶೋದೆಯ ಪೂಜೆ ಮಾಡಿ

ಈ ದಿನ ತಾಯಿ ಯಶೋದೆಯನ್ನು ಪೂಜಿಸಲಾಗುತ್ತದೆ. ಶ್ರೀಕೃಷ್ಣನ ತಾಯಿ ಯಶೋದೆಯ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಶ್ರೀ ಕೃಷ್ಣನ ದೇವಸ್ಥಾನಗಳನ್ನು ವಿಶೇಷ ರೀತಿಯಲ್ಲಿ ಸಜ್ಜುಗೊಳಿಸಿ ಅಲಂಕರಿಸಲಾಗುತ್ತದೆ.

Yashoda jayanti 2022: ಮಾತೃ ಹೃದಯಿ ತಾಯಿ ಯಶೋದೆಯ ಕೃಪೆ ತಮ್ಮ ಮಕ್ಕಳ ಮೇಲಿರಲು ಇಂದು ಕೃಷ್ಣ-ಯಶೋದೆಯ ಪೂಜೆ ಮಾಡಿ
ತಾಯಿ ಯಶೋದೆ ಮತ್ತು ಬಾಲ ಕೃಷ್ಣ
Follow us
TV9 Web
| Updated By: ಆಯೇಷಾ ಬಾನು

Updated on: Feb 22, 2022 | 7:15 AM

ಭಗವಾನ್ ಶ್ರೀ ಕೃಷ್ಣನಿಗೆ(Lord Krishna) ಇಬ್ಬರು ತಾಯಂದಿರು. ಹೆತ್ತ ತಾಯಿ ದೇವಕಿಯಾದ್ರೆ(Devaki) ಕೃಷ್ಣನನ್ನು ತನ್ನದೇ ಮಗನಂತೆ ಪಾಲನೆ-ಪೋಷಣೆ ಮಾಡಿದ್ದು ಯಶೋದೆ(Yashoda). ಕಂಸನ ಕೈಗೆ ಸಿಕ್ಕಿ ತನ್ನ 8ನೇ ಮಗು ಕೂಡ ಬಲಿಯಾಗಬಾರದೆಂದು ತ್ಯಾಗ ಮಾಡಿದ ದೇವಕಿ ಒಂದು ಕಡೆಯಾದ್ರೆ. ಕೃಷ್ಣನ ತುಂಟಾಟ, ಚೆಲ್ಲಾಟಗಳನ್ನು ಸಹಿಸಿಕೊಂಡು ತನ್ನದೇ ಮಗುವೆಂದು ಭಾವಿಸಿ ಮಾತೃ ಮಾತ್ಸಲ್ಯ ಮೆರೆದ ಯಶೋದೆ ಮತ್ತೊಂದು ಕಡೆ. ಆದ್ರೆ ಶ್ರೀ ಕೃಷ್ಣ ತನ್ನ ಇಬ್ಬರೂ ತಾಯಂದಿರನ್ನು ಸಮಾನವಾದ ಪ್ರೀತಿ ನೀಡಿ ಗೌರವಿಸಿದ್ದಾನೆ. ಇಂದು ಕಷ್ಣನ ಸಾಕು ತಾಯಿ ಯಶೋದೆಯ ಜಯಂತಿಯನ್ನು ಆಚರಿಸಲಾಗುತ್ತೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ತಾಯಿ ಯಶೋದಾ ಜಯಂತಿಯನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷ ಷಷ್ಠಿಯಂದು ಆಚರಿಸಲಾಗುತ್ತದೆ. ಯಶೋದಾ ಜಯಂತಿ ಫೆಬ್ರವರಿ 22 ರಂದು ಅಂದ್ರೆ ಮಂಗಳವಾರದಂದು ಬಂದಿದೆ.

ಈ ದಿನ ತಾಯಿ ಯಶೋದೆಯನ್ನು ಪೂಜಿಸಲಾಗುತ್ತದೆ. ಶ್ರೀಕೃಷ್ಣನ ತಾಯಿ ಯಶೋದೆಯ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಶ್ರೀ ಕೃಷ್ಣನ ದೇವಸ್ಥಾನಗಳನ್ನು ವಿಶೇಷ ರೀತಿಯಲ್ಲಿ ಸಜ್ಜುಗೊಳಿಸಿ ಅಲಂಕರಿಸಲಾಗುತ್ತದೆ. ಈ ದಿನ ಭಕ್ತರು ಕೃಷ್ಣನ ದರ್ಶನ ಮಾಡಿ ತಾಯಿ ಯಶೋದೆಯ ಪೂಜೆ ಮಾಡುತ್ತಾರೆ. ಫೆಬ್ರವರಿ 21, 2022 ರಂದು ಸಂಜೆ 07:57 ಷಷ್ಠಿ ತಿಥಿ ಆರಂಭವಾಗಿ ಫೆಬ್ರವರಿ 22, 2022 ರಂದು 06:34 PM ರಂದು ಷಷ್ಠಿ ತಿಥಿ ಮುಕ್ತಾಯವಾಗುತ್ತದೆ.

ಈ ದಿನ ಈ ರೀತಿ ಮಾಡುವುದಿಂದ ಯಶೋದೆ-ಕೃಷ್ಣನ ಕೃಪೆಗೆ ಪಾತ್ರರಾಗುತ್ತೀರಿ -ಯಶೋದಾ ಜಯಂತಿಯ ದಿನದಂದು ಕೃಷ್ಣನ ದೇವಸ್ಥಾನದಲ್ಲಿ ಗೋಧಿ ತುಂಬಿದ ತಾಮ್ರದ ಕಲಶವನ್ನು ಅರ್ಪಿಸುವುದು ಒಳ್ಳೆಯದು ಎಂದು ನಂಬಲಾಗಿದೆ. -ಮನೆಯ ಸಂಕಷ್ಟಗಳು ದೂರವಾಗಲು ತಾಯಿ ಯಶೋದೆ ಮೇಲೆ ಶ್ರೀಕೃಷ್ಣ ಕುಳಿತಿರುವ ಫೋಟೋವನ್ನು ಮನೆಯ ಮುಖ್ಯ ದ್ವಾರದಲ್ಲಿ ಅಂಟಿಸಬೇಕು ಎಂದು ಹೇಳಲಾಗುತ್ತದೆ. -ಯಶೋದಾ ಜಯಂತಿಯ ದಿನದಂದು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. -ಈ ದಿನದಂದು ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಅಥವಾ ಓಂ ಅನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿಯು ಹೊರಬರುತ್ತದೆ ಎಂದು ನಂಬಲಾಗಿದೆ.

ಯಶೋದಾ ಜಯಂತಿ ಪೂಜಾ ವಿಧಿ ಯಶೋದಾ ಜಯಂತಿಯ ದಿನದಂದು ಮಾತೆ ಯಶೋದೆಯ ಮಡಿಲಲ್ಲಿ ಕುಳಿತಿರುವ ಶ್ರೀ ಕೃಷ್ಣನ ಚಿತ್ರ ಅಥವಾ ಮೂರ್ತಿಯನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಮಾತೃ ಹೃದಯಿ ಯಶೋದೆಯ ಕೃಪೆ ತಮ್ಮ ಮಗುವಿನ ಮೇಲಿದ್ದು ಮಗುವಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ದಿನ ಮಹಿಳೆಯರು ಶ್ರೀ ಕೃಷ್ಣ ಮತ್ತು ತಾಯಿ ಯಶೋದೆಯನ್ನು ಪೂಜಿಸಿದರೆ, ಶ್ರೀಕೃಷ್ಣನು ಮಗುವಿನ ರೂಪದಲ್ಲಿ ಕೃಪೆ ನೀಡುತ್ತಾನೆ ಎಂದು ನಂಬಲಾಗಿದೆ.

ಯಶೋದಾ ಜಯಂತಿಯ ದಿನ ಪೂಜೆ ಮಾಡುವುದರಿಂದ ಆಗುವ ಲಾಭಗಳು ತಾಯಿ ಯಶೋದಾ ಮತ್ತು ಶ್ರೀ ಕೃಷ್ಣನನ್ನು ಪೂಜಿಸುವುದು ಮತ್ತು ಈ ದಿನದಂದು ಉಪವಾಸ ಮಾಡುವುದರಿಂದ ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಈ ದಿನದಂದು ಶ್ರೀಕೃಷ್ಣ ಮತ್ತು ತಾಯಿ ಯಶೋದೆಯನ್ನು ಪೂಜಿಸುವುದರಿಂದ ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳಾಗುತ್ತವೆ. ಜೊತೆಗೆ ಮನೆಯಲ್ಲಿನ ತೊಂದರೆಗಳಿಂದ ಮುಕ್ತರಾಗುತ್ತಾರೆ.

ಇದನ್ನೂ ಓದಿ: ನಂಬಿದ ಭಕ್ತರ ಕೈ ಬಿಡುವುದಿಲ್ಲ ಶ್ರೀ ಕೃಷ್ಣ; ದಿನ ನಿತ್ಯ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದ ಪೂಜಾರಿಗಾಗಿ ಪವಾಡ ಸೃಷ್ಟಿಸಿದ ಮುರಳೀಧರ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ