Shashti puja 2022: ಇಂದು ಷಷ್ಠಿ ಪೂಜೆ – ಭಗವಾನ್ ಕಾರ್ತಿಕೇಯನ ಆರಾಧನೆ, ಮಹತ್ವ ತಿಳಿಯಿರಿ

Lord Kartikeya: ಒಂದು ದಂತಕಥೆಯ ಪ್ರಕಾರ, ಕಾರ್ತಿಕೇಯನು 6 ಅಪ್ಸರೆಯರ 6 ವಿಭಿನ್ನ ಗರ್ಭಗಳಿಂದ ಜನಿಸಿದನು ಮತ್ತು ನಂತರ ಅವರು 6 ವಿಭಿನ್ನ ದೇಹಗಳನ್ನು ಒಂದೇ ರೂಪದಲ್ಲಿ ಪಡೆದನು ಎನ್ನುವ ನಂಬಿಕೆಯೂ ಇದೆ.

Shashti puja 2022: ಇಂದು ಷಷ್ಠಿ ಪೂಜೆ - ಭಗವಾನ್ ಕಾರ್ತಿಕೇಯನ ಆರಾಧನೆ, ಮಹತ್ವ ತಿಳಿಯಿರಿ
ಮಂಗಳವಾರ ಷಷ್ಠಿ ಪೂಜೆ - ಭಗವಾನ್ ಕಾರ್ತಿಕೇಯನ ಆರಾಧನೆ ಮಹತ್ವ ತಿಳಿಯಿರಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 22, 2022 | 6:02 AM

ಇದೇ ಫೆಬ್ರವರಿ 22 ರಂದು ಮಂಗಳವಾರ ಯುಕ್ತ (Shashti puja). ಅಷ್ಟೇ ಅಲ್ಲದೇ ಈ ದಿನ ಸ್ವಾತಿ ನಕ್ಷತ್ರವು ಸಹ ಸಂಯೋಗವಾಗಿದೆ. ಪ್ರತಿ ತಿಂಗಳ ಶುಕ್ಲ ಪಕ್ಷದ ಷಷ್ಠಿಯ ದಿನದಂದು ಸ್ಕಂದ ಷಷ್ಠಿ ಉಪವಾಸವನ್ನು ಆಚರಿಸಲಾಗುತ್ತದೆ. ನಂಬಿಕೆಯ ಪ್ರಕಾರ, ಈ ಉಪವಾಸವನ್ನು ಕಾರ್ತಿಕೇಯ ದೇವರಿಗಾಗಿ ಆಚರಿಸಲಾಗುತ್ತದೆ. ಮುಖ್ಯವಾಗಿ ಈ ಉಪವಾಸ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಪ್ರಿಯವಾಗಿದೆ. ಈ ದಿನ ಶಿವ ಮತ್ತು ಪಾರ್ವತಿಯ ಹಿರಿಯ ಮಗನಾದ ಕಾರ್ತಿಕೇಯನನ್ನು (lord Kartikeya) ಕ್ರಮಬದ್ಧವಾಗಿ ಪೂಜಿಸಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಗವಾನ್ ಕಾರ್ತಿಕೇಯನು ಷಷ್ಠಿ ತಿಥಿಯಲ್ಲಿ ಜನಿಸಿದನು. ಈ ದೇವನು ಮಂಗಳ ಗ್ರಹದ ಅಧಿಪತಿಯಾಗಿದ್ದು ಆತನ ವಾಸಸ್ಥಾನ ದಕ್ಷಿಣ ದಿಕ್ಕಿನಲ್ಲಿದೆ. ಆದ್ದರಿಂದಲೇ ಕರ್ಕಾಟಕ ರಾಶಿಯವರು ಸೇರಿದಂತೆ ತಮ್ಮ ಜಾತಕದಲ್ಲಿ ದುರ್ಬಲ ಮಂಗಳ ಇರುವವರು ಈ ದಿನ ಉಪವಾಸ ವ್ರತವನ್ನು ಆಚರಿಸಿ, ಕಾರ್ತಿಕೇಯನನ್ನು ಪೂಜಿಸುವ ಮೂಲಕ ಕುಂಡಲಿಯಲ್ಲಿ ಮಂಗಳನನ್ನು ಬಲಪಡಿಸಿಕೊಳ್ಳುತ್ತಾರೆ ಮತ್ತು ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಕಾರ್ತಿಕೇಯನು ತನ್ನ ಹೆತ್ತವರ ಮೇಲೆ ಕೋಪಗೊಂಡ ನಂತರ ಕೈಲಾಸ ಪರ್ವತವನ್ನು ತೊರೆದು ಮಲ್ಲಿಕಾರ್ಜುನನ ಬಳಿಗೆ ಬಂದನು ಮತ್ತು ಕಾರ್ತಿಕೇಯನು ಸ್ಕಂದ ಷಷ್ಠಿಯಂದು ತಾರಕಾಸುರನನ್ನು ಕೊಂದರು ಮತ್ತು ಈ ದಿನದಂದು ಕಾರ್ತಿಕೇಯನು ದೇವತೆಗಳನ್ನು ಪೂಜಿಸಿ ಸೈನ್ಯದ ಅಧಿಪತಿಯಾದನು.

ಷಷ್ಠಿ ಮತ್ತು ಕಾರ್ತಿಕೇಯ ಭಗವಾನ್ ಕಾರ್ತಿಕೇಯನು ಚಂಪಾ ಹೂವುಗಳನ್ನು ಇಷ್ಟಪಡುತ್ತಾನೆ. ಕಾರ್ತಿಕೇಯನ ವಾಹನ ನವಿಲು. ಸ್ಕಂದ ಪುರಾಣವು ಕಾರ್ತಿಕೇಯನಿಗೆ ಮಾತ್ರ ಸಮರ್ಪಿತವಾಗಿದೆ ಎಂಬುದನ್ನು ತಿಳಿದಿರಬೇಕು. ಸ್ಕಂದ ಪುರಾಣವು ಋಷಿ ವಿಶ್ವಾಮಿತ್ರರಿಂದ ರಚಿಸಲ್ಪಟ್ಟ ಕಾರ್ತಿಕೇಯನ 108 ಹೆಸರುಗಳನ್ನು ಉಲ್ಲೇಖಿಸುತ್ತದೆ. ಈ ದಿನ ಕಾರ್ತಿಕೇಯನನ್ನು ಈ ಕೆಳಗಿನ ಮಂತ್ರದಿಂದ ಪೂಜಿಸಬೇಕು ಎಂಬ ನಿಯಮವಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಈ ದಿನ ಭಗವಾನ್ ಕಾರ್ತಿಕೇಯನ ದೇವಾಲಯಕ್ಕೆ ಭೇಟಿ ನೀಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಕಾರ್ತಿಕೇಯನನ್ನು ಸ್ಕಂದ ದೇವ, ಮುರುಗನ್, ಸುಬ್ರಹ್ಮಣ್ಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಷಷ್ಠಿ ಪೂಜೆ ವಿಧಾನ:

– ಷಷ್ಠಿ ವ್ರತದ ದಿನ ಉಪವಾಸ ಮಾಡುವವರು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ದೇವರ ಧ್ಯಾನ ಮಾಡುತ್ತಾ ಉಪವಾಸ ವ್ರತದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು.

– ಈಗ ಭಗವಾನ್ ಕಾರ್ತಿಕೇಯನ ಜೊತೆ ಶಿವ-ಪಾರ್ವತಿಯರ ವಿಗ್ರಹವನ್ನು ಸ್ಥಾಪಿಸಿ.

– ನೀರು ಮತ್ತು ಪಂಚಾಮೃತ ಅಭಿಷೇಕ ಮಾಡಿ, ಹೂವುಗಳು, ಅರ್ಘ್ಯವನ್ನು ಅರ್ಪಿಸಬೇಕು.

– ಕಲವಾ, ಅಕ್ಷತೆ, ಅರಿಶಿನ, ಶ್ರೀಗಂಧ, ಸುಗಂಧ ಇತ್ಯಾದಿಗಳಿಂದ ಕೂಡ ಪೂಜಿಸಿ.

– ಕಾಲೋಚಿತ ಹಣ್ಣುಗಳನ್ನು, ಹೂವುಗಳನ್ನು, ಬೀಜಗಳನ್ನು ಅರ್ಪಿಸಿ. ಪೂಜೆಯಲ್ಲಿ ತಿಳಿದೋ ತಿಳಿಯದೆಯೋ ತಪ್ಪಾಗಿದ್ದರೆ ಕ್ಷಮಿಸುವಂತೆ ಪ್ರಾರ್ಥಿಸಿ ಮತ್ತು ಇಡೀ ದಿನ ಉಪವಾಸದಿಂದಿರಿ.

– ಸಂಜೆ ಮತ್ತೆ ಪೂಜೆ ಮಾಡಿ, ಆರತಿ ಮಾಡಿದ ನಂತರ ಫಲಾಹಾರವನ್ನು ಸೇವಿಸಿ.

– ಉಪವಾಸ ಮಾಡುವವರು ಕಾರ್ತಿಕೇಯನನ್ನು ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ಪೂಜಿಸಬೇಕು.

– ರಾತ್ರಿ ನೆಲದ ಮೇಲೆ ಮಲಗಬೇಕು.

​ಕಾರ್ತಿಕೇಯ ಪೂಜೆಯ ಮಂತ್ರ: ದೇವ ಸೇನಾಪತೇ ಸ್ಕಂದ ಕಾರ್ತಿಕೇಯ ಭವೋದ್ಭವ| ಕುಮಾರ ಗುಹ ಗಾಂಗೇಯ ಶಕ್ತಿಹಸ್ತ ನಮೋಸ್ತುತೇ||

​ಕಾರ್ತಿಕೇಯ ಗಾಯತ್ರಿ ಮಂತ್ರ – ಓಂ ತತ್ಪುರುಷಾಯ ವಿದ್ಮಹೇ ಮಹಾಸೇನಾಯ ಧೀಮಹೀ ತನ್ನೋ ಸ್ಕಂದ ಪ್ರಚೋದಯಾತ್‌|

ಈ ಮಂತ್ರವು ಎಲ್ಲಾ ರೀತಿಯ ದುಃಖ ಮತ್ತು ನೋವುಗಳ ನಾಶಕ್ಕೆ ಪರಿಣಾಮಕಾರಿಯಾದ ಮಂತ್ರವಾಗಿದೆ.

​ಶತ್ರು ವಿನಾಶಕ ಮಂತ್ರ: ಓಂ ಶರವಣ ಭವಾಯ ನಮಃ | ಜ್ಞಾನಶಕ್ತಿಧರಾ ಸ್ಕಂದ ವಲ್ಲೀಕಲ್ಯಾಣ ಸುಂದರಾ| ದೇವಸೇನಾ ಮನಃ ಕಾಂತಾ ಕಾರ್ತಿಕೇಯ ನಮೋಸ್ತುತೇ|

ಈ ರೀತಿ ಕಾರ್ತಿಕೇಯನನ್ನು ಪೂಜಿಸುವುದರಿಂದ ಜೀವನದ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.

ಷಷ್ಠಿ ವ್ರತ ಕಥೆ: ಶಿವನ ಪತಿ ಸತಿಯು ತನ್ನ ತಂದೆ ದಕ್ಷನ ಯಜ್ಞದಲ್ಲಿ ಬೂದಿಯಾದಾಗ, ಶಿವನು ದುಃಖಿಸುತ್ತಾ ತೀವ್ರ ತಪಸ್ಸಿನಲ್ಲಿ ಮುಳುಗಿದನು. ಇದರಿಂದ ಸಂಪೂರ್ಣ ಪ್ರಪಂಚವೇ ಶಕ್ತಿಯನ್ನು ಕಳೆದುಕೊಂಡಿತು. ರಾಕ್ಷಸರು ಈ ಅವಕಾಶವನ್ನು ಬಳಸಿಕೊಂಡು ತಾರಕಾಸುರ ಎಂಬ ರಾಕ್ಷಸನು ಮೂರು ಲೋಕಗಳಲ್ಲೂ ಭಯವನ್ನು ಸೃಷ್ಟಿಸಿದನು. ದೇವತೆಗಳು ಸೋಲನ್ನು ಎದುರಿಸಬೇಕಾಗುತ್ತದೆ. ಇದರಿಂದ ಚಿಂತೆಗೊಳಗಾದ ದೇವತೆಗಳು ಬ್ರಹ್ಮನ ಆಸರೆಯನ್ನು ಕೇಳಿಕೊಂಡರು. ಆಗ ಬ್ರಹ್ಮನು ಶಿವನ ಮಗನು ಮಾತ್ರ ತಾರಕಾಸುರನನ್ನು ಕೊಲ್ಲಲು ಸಾಧ್ಯ ಎನ್ನುತ್ತಾನೆ.

ಇಂದ್ರ ಮತ್ತು ಇತರ ದೇವರುಗಳು ಭಗವಾನ್ ಶಿವನ ಬಳಿಗೆ ಹೋಗುತ್ತಾರೆ, ನಂತರ ಭಗವಾನ್ ಶಂಕರನು ಪಾರ್ವತಿಯನ್ನು ಮಂಗಳಕರ ಸಮಯದಲ್ಲಿ ಮದುವೆಯಾಗುತ್ತಾನೆ. ನಂತರ ಕಾರ್ತಿಕೇಯನ ಜನನವಾಗುತ್ತದೆ. ಕಾರ್ತಿಕೇಯನು ತಾರಕಾಸುರನನ್ನು ಕೊಂದು ತನ್ನ ಸ್ಥಾನವನ್ನು ದೇವತೆಗಳಿಗೆ ನೀಡುತ್ತಾನೆ. ಪುರಾಣಗಳ ಪ್ರಕಾರ, ಕಾರ್ತಿಕೇಯನು ಷಷ್ಠಿ ತಿಥಿಯಂದು ಜನಿಸಿದನು, ಆದ್ದರಿಂದ ಈ ದಿನದಂದು ಅವನ ಪೂಜೆಗೆ ವಿಶೇಷ ಮಹತ್ವವಿದೆ.

ಮತ್ತೊಂದು ದಂತಕಥೆಯ ಪ್ರಕಾರ, ಕಾರ್ತಿಕೇಯನು 6 ಅಪ್ಸರೆಯರ 6 ವಿಭಿನ್ನ ಗರ್ಭಗಳಿಂದ ಜನಿಸಿದನು, ನಂತರ ಆ ಆರೂ ವಿಭಿನ್ನ ದೇಹಗಳನ್ನು ಒಂದೇ ರೂಪದಲ್ಲಿ ಪಡೆದನು ಎನ್ನುವ ನಂಬಿಕೆಯೂ ಇದೆ.

ಷಷ್ಠೀ ‌ತಿಥಿ ಸಮಯ: ತಿಥಿ ಪ್ರಾರಂಭ : ಫೆಬ್ರವರಿ 21, ಸೋಮವಾರ ರಾತ್ರಿ 07:57 ಗಂಟೆಗೆ ತಿಥಿ ಅಂತ್ಯ : ಫೆಬ್ರವರಿ 22, ಮಂಗಳವಾರ ರಾತ್ರಿ 06:33 ಗಂಟೆಯವರೆಗೆ.

ಸ್ವಾತಿ ‌ನಕ್ಷತ್ರ ಸಮಯ: ಪ್ರಾರಂಭ : ಫೆಬ್ರವರಿ 21, ಸೋಮವಾರ ಹಗಲು 04:15 ಗಂಟೆಗೆ ಅಂತ್ಯ : ಫೆಬ್ರವರಿ 22, ಮಂಗಳವಾರ ಹಗಲು 03:34 ಗಂಟೆಗೆ

ಈ ದಿನ ಮಂಗಳವಾರಯುಕ್ತ ಷಷ್ಠೀ ಜೊತೆಗೆ ರಾಹುವಿನ ಆಧಿಪತ್ಯದ ಸ್ವಾತಿ ನಕ್ಷತ್ರ ಬಂದಿದೆ. ಇಂತಹ ಸಮಯದಲ್ಲಿ ಸುಬ್ರಹ್ಮಣ್ಯ ದೇವರ ಆರಾಧನೆ ಮಾಡಿದರೆ, ಸರ್ಪ‌ದೋಷ, ಕುಜ ದೋಷ ಇತ್ಯಾದಿ ದೋಷಗಳಿಂದ ನಿವಾರಣೆ ಪಡೆಯಬಹುದು.

ಶ್ರೀ ಸುಬ್ರಹ್ಮಣ್ಯ ಅಷ್ಟೋತ್ತರ ಶತನಾಮಾವಳಿಃ

ಓಂ ಸ್ಕಂದಾಯ ನಮಃ | ಓಂ ಗುಹಾಯ ನಮಃ | ಓಂ ಷಣ್ಮುಖಾಯ ನಮಃ | ಓಂ ಫಾಲನೇತ್ರಸುತಾಯ ನಮಃ | ಓಂ ಪ್ರಭವೇ ನಮಃ | ಓಂ ಪಿಂಗಳಾಯ ನಮಃ | ಓಂ ಕೃತ್ತಿಕಾಸೂನವೇ ನಮಃ | ಓಂ ಶಿಖಿವಾಹಾಯ ನಮಃ | ಓಂ ದ್ವಿಷಡ್ಭುಜಾಯ ನಮಃ | 9

ಓಂ ದ್ವಿಷಣ್ಣೇತ್ರಾಯ ನಮಃ | ಓಂ ಶಕ್ತಿಧರಾಯ ನಮಃ | ಓಂ ಪಿಶಿತಾಶಪ್ರಭಂಜನಾಯ ನಮಃ | ಓಂ ತಾರಕಾಸುರಸಂಹರಿಣೇ ನಮಃ | ಓಂ ರಕ್ಷೋಬಲವಿಮರ್ದನಾಯ ನಮಃ | ಓಂ ಮತ್ತಾಯ ನಮಃ | ಓಂ ಪ್ರಮತ್ತಾಯ ನಮಃ | ಓಂ ಉನ್ಮತ್ತಾಯ ನಮಃ | ಓಂ ಸುರಸೈನ್ಯಸುರಕ್ಷಕಾಯ ನಮಃ | 18

ಓಂ ದೇವಸೇನಾಪತಯೇ ನಮಃ | ಓಂ ಪ್ರಾಜ್ಞಾಯ ನಮಃ | ಓಂ ಕೃಪಾಳವೇ ನಮಃ | ಓಂ ಭಕ್ತವತ್ಸಲಾಯ ನಮಃ | ಓಂ ಉಮಾಸುತಾಯ ನಮಃ | ಓಂ ಶಕ್ತಿಧರಾಯ ನಮಃ | ಓಂ ಕುಮಾರಾಯ ನಮಃ | ಓಂ ಕ್ರೌಂಚದಾರಣಾಯ ನಮಃ | ಓಂ ಸೇನಾನ್ಯೇ ನಮಃ | 27

ಓಂ ಅಗ್ನಿಜನ್ಮನೇ ನಮಃ | ಓಂ ವಿಶಾಖಾಯ ನಮಃ | ಓಂ ಶಂಕರಾತ್ಮಜಾಯ ನಮಃ | ಓಂ ಶಿವಸ್ವಾಮಿನೇ ನಮಃ | ಓಂ ಗಣಸ್ವಾಮಿನೇ ನಮಃ | ಓಂ ಸರ್ವಸ್ವಾಮಿನೇ ನಮಃ | ಓಂ ಸನಾತನಾಯ ನಮಃ | ಓಂ ಅನಂತಶಕ್ತಯೇ ನಮಃ | ಓಂ ಅಕ್ಷೋಭ್ಯಾಯ ನಮಃ | 36

ಓಂ ಪಾರ್ವತೀಪ್ರಿಯನಂದನಾಯ ನಮಃ | ಓಂ ಗಂಗಾಸುತಾಯ ನಮಃ | ಓಂ ಶರೋದ್ಭೂತಾಯ ನಮಃ | ಓಂ ಆಹೂತಾಯ ನಮಃ | ಓಂ ಪಾವಕಾತ್ಮಜಾಯ ನಮಃ | ಓಂ ಜೃಂಭಾಯ ನಮಃ | ಓಂ ಪ್ರಜೃಂಭಾಯ ನಮಃ | ಓಂ ಉಜ್ಜೃಂಭಾಯ ನಮಃ | ಓಂ ಕಮಲಾಸನಸಂಸ್ತುತಾಯ ನಮಃ | 45

ಓಂ ಏಕವರ್ಣಾಯ ನಮಃ | ಓಂ ದ್ವಿವರ್ಣಾಯ ನಮಃ | ಓಂ ತ್ರಿವರ್ಣಾಯ ನಮಃ | ಓಂ ಸುಮನೋಹರಾಯ ನಮಃ | ಓಂ ಚತುರ್ವರ್ಣಾಯ ನಮಃ | ಓಂ ಪಂಚವರ್ಣಾಯ ನಮಃ | ಓಂ ಪ್ರಜಾಪತಯೇ ನಮಃ | ಓಂ ಅಹರ್ಪತಯೇ ನಮಃ | ಓಂ ಅಗ್ನಿಗರ್ಭಾಯ ನಮಃ | 54

ಓಂ ಶಮೀಗರ್ಭಾಯ ನಮಃ | ಓಂ ವಿಶ್ವರೇತಸೇ ನಮಃ | ಓಂ ಸುರಾರಿಘ್ನೇ ನಮಃ | ಓಂ ಹರಿದ್ವರ್ಣಾಯ ನಮಃ | ಓಂ ಶುಭಕರಾಯ ನಮಃ | ಓಂ ವಟವೇ ನಮಃ | ಓಂ ವಟುವೇಷಭೃತೇ ನಮಃ | ಓಂ ಪೂಷ್ಣೇ ನಮಃ | ಓಂ ಗಭಸ್ತಯೇ ನಮಃ | 63

ಓಂ ಗಹನಾಯ ನಮಃ | ಓಂ ಚಂದ್ರವರ್ಣಾಯ ನಮಃ | ಓಂ ಕಳಾಧರಾಯ ನಮಃ | ಓಂ ಮಾಯಾಧರಾಯ ನಮಃ | ಓಂ ಮಹಾಮಾಯಿನೇ ನಮಃ | ಓಂ ಕೈವಲ್ಯಾಯ ನಮಃ | ಓಂ ಶಂಕರಾತ್ಮಜಾಯ ನಮಃ | ಓಂ ವಿಶ್ವಯೋನಯೇ ನಮಃ | ಓಂ ಅಮೇಯಾತ್ಮನೇ ನಮಃ | 72

ಓಂ ತೇಜೋನಿಧಯೇ ನಮಃ | ಓಂ ಅನಾಮಯಾಯ ನಮಃ | ಓಂ ಪರಮೇಷ್ಠಿನೇ ನಮಃ | ಓಂ ಪರಬ್ರಹ್ಮಣೇ ನಮಃ | ಓಂ ವೇದಗರ್ಭಾಯ ನಮಃ | ಓಂ ವಿರಾಟ್ಸುತಾಯ ನಮಃ | ಓಂ ಪುಳಿಂದಕನ್ಯಾಭರ್ತ್ರೇ ನಮಃ | ಓಂ ಮಹಾಸಾರಸ್ವತಾವೃತಾಯ ನಮಃ | ಓಂ ಆಶ್ರಿತಾಖಿಲದಾತ್ರೇ ನಮಃ | 81

ಓಂ ಚೋರಘ್ನಾಯ ನಮಃ | ಓಂ ರೋಗನಾಶನಾಯ ನಮಃ | ಓಂ ಅನಂತಮೂರ್ತಯೇ ನಮಃ | ಓಂ ಆನಂದಾಯ ನಮಃ | ಓಂ ಶಿಖಂಡಿಕೃತಕೇತನಾಯ ನಮಃ | ಓಂ ಡಂಭಾಯ ನಮಃ | ಓಂ ಪರಮಡಂಭಾಯ ನಮಃ | ಓಂ ಮಹಾಡಂಭಾಯ ನಮಃ | ಓಂ ವೃಷಾಕಪಯೇ ನಮಃ | 90

ಓಂ ಕಾರಣೋಪಾತ್ತದೇಹಾಯ ನಮಃ | ಓಂ ಕಾರಣಾತೀತವಿಗ್ರಹಾಯ ನಮಃ | ಓಂ ಅನೀಶ್ವರಾಯ ನಮಃ | ಓಂ ಅಮೃತಾಯ ನಮಃ | ಓಂ ಪ್ರಾಣಾಯ ನಮಃ | ಓಂ ಪ್ರಾಣಾಯಾಮಪರಾಯಣಾಯ ನಮಃ | ಓಂ ವಿರುದ್ಧಹಂತ್ರೇ ನಮಃ | ಓಂ ವೀರಘ್ನಾಯ ನಮಃ | ಓಂ ರಕ್ತಾಸ್ಯಾಯ ನಮಃ | 99

ಓಂ ಶ್ಯಾಮಕಂಧರಾಯ ನಮಃ | ಓಂ ಸುಬ್ರಹ್ಮಣ್ಯಾಯ ನಮಃ | ಓಂ ಗುಹಾಯ ನಮಃ | ಓಂ ಪ್ರೀತಾಯ ನಮಃ | ಓಂ ಬ್ರಹ್ಮಣ್ಯಾಯ ನಮಃ | ಓಂ ಬ್ರಾಹ್ಮಣಪ್ರಿಯಾಯ ನಮಃ | ಓಂ ವಂಶವೃದ್ಧಿಕರಾಯ ನಮಃ | ಓಂ ವೇದವೇದ್ಯಾಯ ನಮಃ | ಓಂ ಅಕ್ಷಯಫಲಪ್ರದಾಯ ನಮಃ | 108 ಇತಿ ಶ್ರೀಸುಬ್ರಹ್ಮಣ್ಯ ಅಷ್ಟೋತ್ತರ ಶತನಾಮಾವಳಿಃ | (ವಾಟ್ಸಪ್​ ಮಾಹಿತಿ)

Published On - 1:55 pm, Mon, 21 February 22

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ