AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಟ್ರೇಲರ್! ನಿಮ್ಮ ಪಕ್ಷದ ಬೆಂಬಲಿಗನಿಗೇ ರಕ್ಷಣೆ ನೀಡಿಲ್ಲ, ಇನ್ನು ನೀವು ರಾಜ್ಯದ ಜನರಿಗೆ ರಕ್ಷಣೆ ಕೊಡುತ್ತೀರಾ? ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

ಒಬ್ಬ ಯುವಕನಿಗೆ ರಕ್ಷಣೆ ಕೊಡೋಕೆ ಆಗದ ಸರ್ಕಾರ, ರಾಜ್ಯದ ಜನತೆಗೆ ಹೇಗೆ ರಕ್ಷಣೆ ಕೊಡ್ತೀರಿ? 2023ರಲ್ಲಿ ಏನಾಗುತ್ತೆ ಅಂತ ಟ್ರೈಲರ್ ಬಿಟ್ಟಿದ್ದಾರೆ. ಮುಂದೆ ಫುಲ್ ಫಿಕ್ಚರ್ ಬಾಕಿ ಇದೆ. ಇದು ಪ್ರಾರಂಭಿಕ ಹಂತನಾ ಅಂತ ನನಗೆ ಅನುಮಾನ. ಪ್ರಜೆಗಳ ರಕ್ಷಣೆಗೆ ಸರ್ಕಾರ ಬೇಕು. ಊರೆಲ್ಲ ಬೆಂಕಿ ಹಚ್ಚಿದ ಮೇಲೆ ಆರಿಸೋಕೆ ಹೋಗೊದಲ್ಲ -ಮಾಜಿ ಸಿಎಂ ಕುಮಾರಸ್ವಾಮಿ

ಇದು ಟ್ರೇಲರ್! ನಿಮ್ಮ ಪಕ್ಷದ ಬೆಂಬಲಿಗನಿಗೇ ರಕ್ಷಣೆ ನೀಡಿಲ್ಲ, ಇನ್ನು ನೀವು ರಾಜ್ಯದ ಜನರಿಗೆ ರಕ್ಷಣೆ ಕೊಡುತ್ತೀರಾ? ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ
ಹೆಚ್​​ ಡಿ ಕುಮಾರಸ್ವಾಮಿ
TV9 Web
| Updated By: ಆಯೇಷಾ ಬಾನು|

Updated on:Feb 21, 2022 | 1:12 PM

Share

ಶಿವಮೊಗ್ಗ: ಶಿವಮೊಗ್ಗದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಬಡಾವಣೆಯಲ್ಲಿ ದುಷ್ಕರ್ಮಿಗಳು ನಿನ್ನೆ ಅಟ್ಟಹಾಸ ಮೆರೆದಿದ್ರು. ಕಾರಿನಲ್ಲಿ ಬಂದಿದ್ದ 4ರಿಂದ 6 ಜನರ ಗುಂಪು, ಬಜರಂಗದಳ ಕಾರ್ಯಕರ್ತ ಹರ್ಷ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದ್ರು. ಸದ್ಯ ಈ ಘಟನೆ ಇಡೀ ಕರ್ನಾಟದಲ್ಲೇ ಭಾರಿ ಚರ್ಚೆಯಾಗುತ್ತಿದೆ. ಈಗ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕೂಡ ಮಾತನಾಡಿದ್ದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಒಬ್ಬ ಯುವಕನಿಗೆ ರಕ್ಷಣೆ ಕೊಡೋಕೆ ಆಗದ ಸರ್ಕಾರ, ರಾಜ್ಯದ ಜನತೆಗೆ ಹೇಗೆ ರಕ್ಷಣೆ ಕೊಡ್ತೀರಿ? 2023ರಲ್ಲಿ ಏನಾಗುತ್ತೆ ಅಂತ ಟ್ರೈಲರ್ ಬಿಟ್ಟಿದ್ದಾರೆ. ಮುಂದೆ ಫುಲ್ ಫಿಕ್ಚರ್ ಬಾಕಿ ಇದೆ. ಇದು ಪ್ರಾರಂಭಿಕ ಹಂತನಾ ಅಂತ ನನಗೆ ಅನುಮಾನ. ಪ್ರಜೆಗಳ ರಕ್ಷಣೆಗೆ ಸರ್ಕಾರ ಬೇಕು. ಊರೆಲ್ಲ ಬೆಂಕಿ ಹಚ್ಚಿದ ಮೇಲೆ ಆರಿಸೋಕೆ ಹೋಗೊದಲ್ಲ ಎಂದು ಟ್ವೀಟ್ ಮೂಲಕ ಗರಂ ಆಗಿದ್ದಾರೆ.

ಶಿವಮೊಗ್ಗದಲ್ಲಿ ಅಮಾಯಕ ಯುವಕನ ಕೊಲೆಯಾಗಿದೆ. ಇನ್ನೊಂದು ವಾರ ಅವರ ಮನೆಗೆ ಭೇಟಿ ನೀಡುತ್ತಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮೊಸಳೆ ಕಣ್ಣೀರು ಸುರಿಸ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಅಹಿತಕರ ಘಟನೆ ನಡೆದಿತ್ತು. ಆಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆರೋಪಿಸಿತ್ತು. ಅವರ ಆರೋಪದಲ್ಲಿ ಕೆಲವೊಂದು ಸತ್ಯವೂ ಇದೆ. ನಿನ್ನೆ ಘಟನೆಯ ಹಿಂದಿನ ಉದ್ದೇಶ ಏನೆಂದು ಗೊತ್ತಾಗಬೇಕು. 2 ವರ್ಷದ ಹಿಂದೆ ಹರ್ಷ ಕೊಲೆಗೆ ಘೋಷಣೆ ಮಾಡಿದ್ದರು. 10 ಲಕ್ಷ ಹಣ ಕೊಡುವುದಾಗಿ ಘೋಷಿಸಿದ್ದರೆಂದು ಮೃತ ಹರ್ಷ ಸಂಬಂಧಿಕರೊಬ್ಬರು ಈ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರಿಗೆ ಮಾಹಿತಿ ಇರಲಿಲ್ಲವೇ? ನಿಮ್ಮ ಪಕ್ಷಕ್ಕೆ ಬೆಂಬಲ ನೀಡುವ ಸದಸ್ಯನಿಗೆ ರಕ್ಷಣೆ ನೀಡಿಲ್ಲ. ಇನ್ನು ನೀವು ಈ ರಾಜ್ಯದ ಜನರಿಗೆ ರಕ್ಷಣೆ ಕೊಡುತ್ತೀರಾ? ಮುಂದೆ ರಾಜ್ಯದಲ್ಲಿ ಏನಾಗುತ್ತೆ ಎಂಬುದಕ್ಕೆ ಇದು ಟ್ರೇಲರ್ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಡಿಕೆಶಿ ಪ್ರಚೋದನೆಯಿಂದ ಹತ್ಯೆಯಾಗಿದೆ ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ ಹೀಗೆ ಹೇಳುವ ಬಿಜೆಪಿ ನಾಯಕರು ಕ್ರಮಕೈಗೊಳ್ಳಬೇಕಿತ್ತು. ಅವರ ವಿರುದ್ಧ ಸರ್ಕಾರ ಮೊದಲೇ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದರು. ಊರೆಲ್ಲಾ ಬೆಂಕಿ ಇಟ್ಟ ಮೇಲೆ ಫೈರ್ ಇಂಜಿನ್ ಹೋಗಬಾರದು. ರಾಜ್ಯದಲ್ಲಿ 100ಕ್ಕೆ 50ರಷ್ಟು ರಾಜಕಾರಣಿಗಳ ಶಾಲೆಗಳಿವೆ. ಈ ಶಾಲೆಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಇದ್ಯಾ. ಕೇವಲ ಅಮಾಯಕ ಮಕ್ಕಳಿರುವ ಶಾಲೆಗಳಲ್ಲಿ ವಿವಾದ ಇದೆ. ಚುನಾವಣೆಗಾಗಿ ಈ ವಿವಾದ ಹುಟ್ಟು ಹಾಕಿರುವ ಆರೋಪ ರಾಜ್ಯದ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.

ಇದನ್ನೂ ಓದಿ: R Praggnanandhaa: ವಿಶ್ವದ ನಂ.1 ಚೆಸ್ ಆಟಗಾರನಿಗೆ ಸೋಲಿನ ರುಚಿ ತೋರಿಸಿದ ಭಾರತದ ಆರ್. ಪ್ರಗ್ನಾನಂದ

ಕೆಜಿ ಹಳ್ಳಿಯಲ್ಲಿ ತಲ್ವಾರ್ ಹಿಡಿದು ಧಮ್ಕಿ- ವಿಡಿಯೋ ವೈರಲ್! ಹಣ ವಸೂಲಿಗೆ ಮುಂದಾದ ಕಿರಾತಕರ ವಿರುದ್ಧ ಕ್ರಮಕ್ಕೆ ಸೂಚನೆ

Published On - 12:36 pm, Mon, 21 February 22