Air India: ತಾಂತ್ರಿಕ ದೋಷದ ನಡುವೆಯೂ ಬೆಂಗಳೂರಿನಲ್ಲಿ ವಿಮಾನ ಲ್ಯಾಂಡಿಂಗ್; ಪೈಲಟ್ನ ಸಮಯಪ್ರಜ್ಞೆಯಿಂದ 164 ಪ್ರಯಾಣಿಕರು ಪಾರು
ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ದೋಷ ಕಂಡುಬಂದಿತ್ತು. ದೆಹಲಿಯಿಂದ 164 ಜನ ಪ್ರಯಾಣಿಕರನ್ನ ಹೊತ್ತು ಬಂದಿದ್ದ ಏರ್ ಇಂಡಿಯಾ ವಿಮಾನದಲ್ಲಿದ್ದವರು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ.
ಬೆಂಗಳೂರು: ಹಾರಾಟದ ವೇಳೆಯೇ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಏರ್ ಇಂಡಿಯಾ ವಿಮಾನ ಸೇಫ್ ಆಗಿ ಲ್ಯಾಂಡ್ ಆಗಿದೆ. ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ದೋಷ ಕಂಡುಬಂದಿದ್ದು, ದೋಷವಿದ್ದರೂ ಸೇಫ್ ಲ್ಯಾಂಡಿಂಗ್ ಮಾಡುವಲ್ಲಿ ಪೈಲಟ್ ಯಶಸ್ವಿಯಾಗಿದ್ದಾರೆ. ಇದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ತಾಂತ್ರಿಕ ದೋಷ ಉಂಟಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿ 164 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.
ಚಲಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ದೋಷ ಕಂಡುಬಂದಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಆದರೆ, ತಾಂತ್ರಿಕ ದೋಷದ ನಡುವೆಯೂ ವಿಮಾನವನ್ನು ಬೆಂಗಳೂರಿನಲ್ಲಿ ಸೇಫ್ ಆಗಿ ಲ್ಯಾಂಡ್ ಮಾಡಲಾಯಿತು. ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೈಡ್ರೋನಿಕ್ ಸಮಸ್ಯೆಯಿಂದ ದೋಷ ಕಂಡುಬಂದಿತ್ತು. ಇಂದು ಮಧ್ಯಾಹ್ನ 12.47ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ದೆಹಲಿಯಿಂದ 164 ಜನ ಪ್ರಯಾಣಿಕರನ್ನ ಹೊತ್ತು ಬಂದಿದ್ದ ಏರ್ ಇಂಡಿಯಾ ವಿಮಾನದಲ್ಲಿದ್ದವರು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ.
ಎರಡೆರಡು ಬಾರಿ ಸಂಚರಿಸಿದ ವಿಮಾನ: ಇನ್ನೊಂದೆಡೆ ಇಂದು ಬೆಳಗ್ಗೆ 7.40ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ತೆರಳಿದ್ದ ವಿಮಾನ ಮಂಗಳೂರು ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಈ ವೇಳೆ ಬೆಳಗ್ಗೆ ದಟ್ಟ ಮಂಜು ಕವಿದಿದ್ದ ಕಾರಣದಿಂದ ಲ್ಯಾಂಡ್ ಮಾಡಲಾಗದೆ ವಿಮಾನ ಬೆಂಗಳೂರಿಗೆ ವಾಪಾಸ್ ಬಂದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಈ ವಿಮಾನ ಎರಡೆರಡು ಬಾರಿ ಪ್ರಯಾಣ ಮಾಡಿದೆ. ಇಂದು ಬೆಳಗ್ಗೆ ಲ್ಯಾಂಡಿಂಗ್ಗೆ ಕ್ಲಿಯರೆನ್ಸ್ ಸಿಗದ ಕಾರಣ ಎರಡು ಬಾರಿ ಸಂಚಾರ ಮಾಡಿದೆ. ಮಂಗಳೂರಿನಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ವಿಮಾನ ನಂತರ ಬೆಂಗಳೂರಿನಿಂದ ಮತ್ತೆ ಬೆಳಗ್ಗೆ 9.40ಕ್ಕೆ ಹೊರಟಿದೆ. ಮಂಜು ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ 9.40ಕ್ಕೆ ಹೊರಟು ಮಂಗಳೂರಿನಲ್ಲಿ ಲ್ಯಾಂಡಿಂಗ್ ಆಗಿದೆ. ಪ್ರತಿಕೂಲ ಹವಾಮಾನದಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಎರಡೆರಡು ಬಾರಿ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುವಂತಾಯಿತು.
ಇದನ್ನೂ ಓದಿ: ದೆಹಲಿ ಏರ್ಪೋರ್ಟ್ನಿಂದ ಹೊರಟಿದ್ದ ವಿಸ್ತಾರ ವಿಮಾನ ಕೆಲವೇ ಕ್ಷಣಗಳಲ್ಲಿ ವಾಪಸ್; ತುರ್ತು ಭೂಸ್ಪರ್ಶ
Published On - 4:46 pm, Mon, 21 February 22