AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಏರ್​ಪೋರ್ಟ್​​ನಿಂದ ಹೊರಟಿದ್ದ ವಿಸ್ತಾರ ವಿಮಾನ ಕೆಲವೇ ಕ್ಷಣಗಳಲ್ಲಿ ವಾಪಸ್​; ತುರ್ತು ಭೂಸ್ಪರ್ಶ

ವಿಮಾನ ವಾಪಸ್ ಬರುವಷ್ಟರಲ್ಲಿ ಏರ್​ಪೋರ್ಟ್​ನಲ್ಲಿ ಪೊಲೀಸರು, ಆರು ಅಗ್ನಿಶಾಮಕದಳದ ಘಟಕಗಳು ಸಿದ್ಧವಾಗಿ ನಿಂತಿದ್ದರು. ಅದು ಭೂಸ್ಪರ್ಶ ಆಗುವ ಹೊತ್ತಿಗೆ ಯಾವುದೇ ರೀತಿಯ ಅಪಾಯ ಆಗುವುದನ್ನು ತಪ್ಪಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿತ್ತು.

ದೆಹಲಿ ಏರ್​ಪೋರ್ಟ್​​ನಿಂದ ಹೊರಟಿದ್ದ ವಿಸ್ತಾರ ವಿಮಾನ ಕೆಲವೇ ಕ್ಷಣಗಳಲ್ಲಿ ವಾಪಸ್​; ತುರ್ತು ಭೂಸ್ಪರ್ಶ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Feb 17, 2022 | 6:08 PM

Share

ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Delhi Airport) ಹೊರಟಿದ್ದ ಅಮೃತ್​ಸರ್​ ಮೂಲದ ವಿಸ್ತಾರ ಏರ್​​ಲೈನ್ಸ್​ (Vistara Flight) ವಿಮಾನ ಕೆಲವೇ ಕ್ಷಣಗಳಲ್ಲಿ ಹಿಂದಿರುಗಿ ಬಂದು, ದೆಹಲಿ ಏರ್​ಪೋರ್ಟ್​ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಫ್ಲೈಟ್​​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದೇ ತುರ್ತು ಭೂಸ್ಪರ್ಶಕ್ಕೆ ಕಾರಣ ಎಂದು ಹೇಳಲಾಗಿದೆ. ವಿಸ್ತಾರಾ ಏರ್​ಲೈನ್ಸ್​ನ ಯುಕೆ 697 ಎಂಬ ವಿಮಾನ ದೆಹಲಿಯಿಂದ ಅಮೃತ್​ಸರ್​ಗೆ ಹೊರಟಿತ್ತು. ಆದರೆ ಕೆಲವೇ ಕ್ಷಣದಲ್ಲಿ ತಾಂತ್ರಿಕ ಅಡಚಣೆಯಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಪೈಲಟ್​ ವಿಮಾನವನ್ನು ವಾಪಸ್​ ದೆಹಲಿ ಏರ್​ಪೋರ್ಟ್​ಗೇ ತಂದರು ಎಂದು ಏರ್​ಲೈನ್ಸ್​ನ ವಕ್ತಾರ ತಿಳಿಸಿದ್ದಾರೆ.

ಈ ವಿಮಾನದಲ್ಲಿ 146 ಮಂದಿ ಪ್ರಯಾಣಿಕರು ಇದ್ದರು. ಬೆಳಗ್ಗೆ ಎಂದಿನಂತೆ ದೆಹಲಿಯಿಂದ ಹೊರಟಿತ್ತು. ಆದರೆ 10.15ರ ಹೊತ್ತಿಗೆ ಈ ವಿಮಾನ ವಾಪಸ್​ ಏರ್​​ಪೋರ್ಟ್​ಗೆ ಬಂದು ತುರ್ತು ಭೂಸ್ಪರ್ಶ ಆಗುವ ಬಗ್ಗೆ ಇಲ್ಲಿನ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಕರೆ ಬಂತು. ಸಣ್ಣ ತಾಂತ್ರಿಕ ದೋಷ ಉಂಟಾದರೂ ಅದು ಮುಂದೆ ದೊಡ್ಡ ಅಪಾಯ ತಂದೊಡ್ಡುವ ಸಂಭವ ಇರುತ್ತದೆ. ಹೀಗಾಗಿ ಪೈಲಟ್​ ಅದನ್ನು ತುರ್ತು ಭೂಸ್ಪರ್ಶ ಮಾಡಿಸುವ ನಿರ್ಧಾರ ಕೈಗೊಂಡರು ಎಂದು ಏರ್​ಪೋರ್ಟ್​ ಆಡಳಿತ ಹೇಳಿದೆ.

ವಿಮಾನ ವಾಪಸ್ ಬರುವಷ್ಟರಲ್ಲಿ ಏರ್​ಪೋರ್ಟ್​ನಲ್ಲಿ ಪೊಲೀಸರು, ಆರು ಅಗ್ನಿಶಾಮಕದಳದ ಘಟಕಗಳು ಸಿದ್ಧವಾಗಿ ನಿಂತಿದ್ದರು. ಅದು ಭೂಸ್ಪರ್ಶ ಆಗುವ ಹೊತ್ತಿಗೆ ಯಾವುದೇ ರೀತಿಯ ಅಪಾಯ ಆಗುವುದನ್ನು ತಪ್ಪಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿತ್ತು. ಅದೃಷ್ಟವಶಾತ್​ ವಿಮಾನ ಸುರಕ್ಷಿತವಾಗಿ ಕೆಳಗೆ ಇಳಿಯಿತು. ಯಾರೊಬ್ಬರಿಗೂ ಏನೂ ಆಗಲಿಲ್ಲ ಎಂದೂ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.  ನಮಗೆ ನಮ್ಮ ಪ್ರಯಾಣಿಕರ ಸುರಕ್ಷತೆ ಮುಖ್ಯ. ಹೀಗಾಗಿ ಈ ವಿಮಾನವನ್ನು ಹಿಂದಕ್ಕೆ ತರಲಾಯಿತು. ನಂತರ ತಕ್ಷಣವೇ ಅಮೃತ್​ಸರ್​ಗೆ ಇನ್ನೊಂದು ಫ್ಲೈಟ್ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಕಳಿಸಲಾಯಿತು ಎಂದೂ ವಿಸ್ತಾರಾ ಏರ್​ಲೈನ್ಸ್ ವಕ್ತಾರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಅಭ್ಯರ್ಥಿಗಳು ಅನುಮತಿಯಿಲ್ಲದೆ ಸಾರ್ವಜನಿಕ, ಖಾಸಗಿ ಆಸ್ತಿಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಬಾರದು: ಮದ್ರಾಸ್ ಹೈಕೋರ್ಟ್

Published On - 6:06 pm, Thu, 17 February 22

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!