ವಿಧಾನಸಭೆಯಲ್ಲಿ 2022ನೇ ಸಾಲಿನ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ ಅಂಗೀಕಾರ
2022ನೇ ಸಿವಿಲ್ ಸೇವೆಗಳ ವಿಧೇಯಕ ಅಂಗೀಕಾರ ಮಾಡಲಾಗಿದ್ದು, ಕಾಂಗ್ರೆಸ್ ಗದ್ದಲದ ನಡುವೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಹಿ ಹಾಕಿದ್ದಾರೆ. ಡಿಜಿಟಲ್ ಸ್ಟ್ಯಾಂಪ್ ಬಳಕೆಗೆ ಅನುಮತಿ ನೀಡುವ ವಿಧೇಯಕ ಇದಾಗಿದೆ.
ಬೆಂಗಳೂರು: ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಹೇಳಿಕೆಯನ್ನು ಖಂಡಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮುಂದುವರಿಸಿದ್ದಾರೆ. ಕಾಂಗ್ರೆಸ್ ನಾಯಕರ ಧರಣಿ ನಡುವೆ ಇಂದು ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕಗಳಿಗೆ ಅಂಗೀಕಾರ ದೊರೆತಿದೆ. 2022ನೇ ಸಿವಿಲ್ ಸೇವೆಗಳ ವಿಧೇಯಕ ಅಂಗೀಕಾರ ಮಾಡಲಾಗಿದ್ದು, ಕಾಂಗ್ರೆಸ್ ಗದ್ದಲದ ನಡುವೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತಕ್ಕೆ ಹಾಕಿದ್ದಾರೆ. ಡಿಜಿಟಲ್ ಸ್ಟ್ಯಾಂಪ್ (Digital Stamp) ಬಳಕೆಗೆ ಅನುಮತಿ ನೀಡುವ ವಿಧೇಯಕ ಇದಾಗಿದೆ.
ಡಿಜಿಟಲ್ ಸ್ಟಾಂಪ್ ಬಳಕೆಗೆ ಅನುಮತಿ ನೀಡುವ ವಿಧೇಯಕವನ್ನು ಕಂದಾಯ ಸಚಿವ ಆರ್ ಅಶೋಕ್ ಮಂಡನೆ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ನವರು ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿದ್ದರು. ಗದ್ದಲದ ನಡುವೆಯೇ ಸ್ಪೀಕರ್ ಸ್ಟಾಂಪು ವಿಧೇಯಕ ಮತಕ್ಕೆ ಹಾಕಿದ್ದಾರೆ. ಕೈಗಾರಿಕೆಗಳು ರಾಜ್ಯಕ್ಕೆ ಬರಲು ವಿಧೇಯಕ ಪ್ರೋತ್ಸಾಹ ನೀಡುತ್ತದೆ. ಕೈಗಾರಿಕೆಗಳಿಗೆ ಸ್ಟಾಂಪು ಡ್ಯೂಟಿಯನ್ನು 25 ಲಕ್ಷ ರೂ. ಗಳಿಗೆ ಮಿತಿಗೊಳಿಸುತ್ತದೆ.
ಆರ್ಎಸ್ಎಸ್ ವಿರುದ್ಧ ಘೋಷಣೆಗೆ ಸ್ಪೀಕರ್ ಕಾಗೇರಿ ಗರಂ: ಆರ್ಎಸ್ಎಸ್ ವಿರುದ್ಧ ಘೋಷಣೆ ಕೂಗಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಸ್ಪೀಕರ್ ಕಾಗೇರಿ ಗರಂ ಆದರು. ಸದನದಲ್ಲಿ ಆರ್ಎಸ್ಎಸ್ ವಿರೋಧ ಮಾಡಿದ್ದಕ್ಕೆ ಕಾಂಗ್ರೆಸ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಅನಗತ್ಯವಾಗಿ ಆರ್ಎಸ್ಎಸ್ ಅನ್ನು ಏಕೆ ಚರ್ಚೆಗೆ ತರುತ್ತೀರಿ? ಆರ್ಎಸ್ಎಸ್ನವರು ಏನು ಕಾರಣ ಇದಕ್ಕೆ? ಪದೇ ಪದೇ ಚರ್ಚೆಗೆ ತರಬೇಡಿ. ಅದು ರಾಷ್ಟ್ರೀಯ ವಿಚಾರದ ಸಂಘಟನೆ. ಹಿಂದೂಗಳನ್ನು ಸಂಘಟಿಸಲು ಅವರು ಮಾಡುತ್ತಿರುವ ಪ್ರಯತ್ನಗಳಿಗೆ ನಿಮ್ಮ ಸಹಕಾರ ಇರಬೇಕು ಎಂದು ಸ್ಪೀಕರ್ ಹೇಳಿದರು.
ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದ್ದಾರೆ. ನಿಮ್ಮ ಉಳಿದ ಭಿನ್ನಾಭಿಪ್ರಾಯ ಇದ್ದರೆ ಮುಗಿಸಿಕೊಳ್ಳಿ ಅಂತ ವಿಧಾನಸಭೆಯಲ್ಲಿ ಪ್ರತಿಭಟನೆಗೆ ಸ್ಪೀಕರ್ ಕಾಗೇರಿ ಗರಂ ಆದರು.
ಇದನ್ನೂ ಓದಿ
ಶಕುಂತಲೆ ಅವತಾರದಲ್ಲಿ ಸಮಂತಾ; ‘ಶಾಕುಂತಲಂ’ ಫಸ್ಟ್ ಲುಕ್ ಪೋಸ್ಟರ್ ಕಂಡು ಫ್ಯಾನ್ಸ್ ಫಿದಾ
ಗೃಹ ಸಚಿವರ ಜಿಲ್ಲೆಯಲ್ಲಿ ಕೊಲೆ ಆಗಿದೆ ಅಂದರೆ ಏನು ಅರ್ಥ, ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು; ಸಿದ್ದರಾಮಯ್ಯ
Published On - 12:50 pm, Mon, 21 February 22