Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಈಶ್ವರಪ್ಪ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಕಾಂಗ್ರೆಸ್ ಪ್ಲ್ಯಾನ್; ಬಿಜೆಪಿಯಿಂದಲೂ ಕೌಂಟರ್ ಪ್ಲ್ಯಾನ್! ಏನದು?

KPCC: ಅಹೋರಾತ್ರಿ ಧರಣಿ ವೇಳೆ ಕಾಂಗ್ರೆಸ್‌ನಿಂದಲೇ ಊಟದ ವ್ಯವಸ್ಥೆ ಇರಲಿದೆ. ಸಚಿವಾಲಯದ ಹಣವನ್ನ ಬಳಸಿಕೊಳ್ಳದೇ ಇರಲು ತೀರ್ಮಾನ ಮಾಡಲಾಗಿದೆ. ಊಟ ಮಾಡ್ಕೊಂಡು ಮಲ್ಕೊಂಡಿದ್ದಾರೆಂದು ಅಂತಾ ಸಚಿವ ಅಶೋಕ್ ವ್ಯಂಗ್ಯವಾಡಿದ್ದರು. ಹೀಗಾಗಿ ನಿನ್ನೆ ಮತ್ತು ಮೊನ್ನೆ ರಾತ್ರಿ ಕೆಪಿಸಿಸಿ ವತಿಯಿಂದಲೇ ಊಟದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಸಚಿವ ಈಶ್ವರಪ್ಪ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಕಾಂಗ್ರೆಸ್ ಪ್ಲ್ಯಾನ್; ಬಿಜೆಪಿಯಿಂದಲೂ ಕೌಂಟರ್ ಪ್ಲ್ಯಾನ್! ಏನದು?
ಈಶ್ವರಪ್ಪ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಕಾಂಗ್ರೆಸ್ ಪ್ಲ್ಯಾನ್; ಬಿಜೆಪಿಯಿಂದಲೂ ಕೌಂಟರ್ ಪ್ಲ್ಯಾನ್! ಏನದು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 21, 2022 | 8:50 AM

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್​ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಕಹಳೆ (Karnataka Congress).. ಈಶ್ವರಪ್ಪ ವಜಾಕ್ಕೆ ಕೈ ರಣಕಹಳೆ.. ಪಟ್ಟು ಬಿಡ್ತಿಲ್ಲ. ಹೋರಾಟ ನಿಲ್ಲಿಸ್ತಿಲ್ಲ. ಸದನದಲ್ಲಿ ಘೋಷಣೆ ಕೂಗಿದರೂ, ಅಹೋರಾತ್ರಿ ಪ್ರತಿಭಟನೆ ನಡೆಸಿದರೂ ಸರ್ಕಾರ ಮಾತ್ರ ಬಗ್ಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಪಡೆ ಇಂದಿನಿಂದ ಈಶ್ವರಪ್ಪ ವಿರುದ್ಧದ ಹೋರಾಟವನ್ನ ಮತ್ತಷ್ಟು ತೀವ್ರಗೊಳಿಸಲು ಪ್ಲ್ಯಾನ್ ಮಾಡಿದೆ. ಸದನದ ಒಳಗೂ ಮತ್ತು ಹೊರಗೂ ಧ್ವಜ ದಂಗಲ್‌ ನಡೆಯಲಿದೆ. ಈಗಾಗ್ಲೇ ಹೈಕಮಾಂಡ್ ಮಟ್ಟಕ್ಕೆ ಮುಟ್ಟಿರೋ ಸಮರ, ಇಂದಿನಿಂದ ಹೊಸ ತಿರುವು ಪಡೆದುಕೊಳ್ತಿದೆ. ಈಶ್ವರಪ್ಪ (ks eshwarappa) ವಿರುದ್ಧ ತೊಡೆ ತಟ್ಟಿರೋ ಕಾಂಗ್ರೆಸ್ ಇಂದಿನಿಂದ ಹೋರಾಟದ ದಿಕ್ಕನ್ನೇ ಬದಲಿಸ್ತಿದೆ. ಆದರೆ ಇದಕ್ಕೆ ಆಡಳಿತಾರೂಢ ಬಿಜೆಪಿ (karnataka bjp) ಸರ್ಕಾರ ಸಹ ಕೌಂಟರ್ ಪ್ಲ್ಯಾನ್ ಮಾಡಿದೆ.

ಈಶ್ವರಪ್ಪ ವಿರುದ್ಧ ನಿಲ್ಲದ ಕಾಂಗ್ರೆಸ್ ನಾಯಕರ ಸಮರ! ಸದನದೊಳಗೂ ಕಿಚ್ಚು.. ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು: ಯೆಸ್.. ಈಶ್ವರಪ್ಪ ಧ್ವಜ ಹೇಳಿಕೆ ವಿರುದ್ಧ ಸಿಡಿದೆದ್ದಿರೋ ಕೈ ಪಡೆ ಈಶ್ವರಪ್ಪ ವಜಾ ಮಾಡುವಂತೆ ಪಟ್ಟು ಹಿಡಿದು ಕೂತಿದೆ. ಹೋರಾಟವನ್ನ ತೀವ್ರಗೊಳಿಸಲು ಕಾಂಗ್ರೆಸ್ ಭರ್ಜರಿಯಾಗಿಯೇ ಪ್ಲ್ಯಾನ್ ಮಾಡಿದೆ. ಹೋರಾಟಕ್ಕೆ ಬೂಸ್ಟ್‌ ನೀಡಲು, ಸಮರವನ್ನ ಬಲಗೊಳಿಸಲು, ಈಶ್ವರಪ್ಪ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ ಡಿಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ.

ಇಂದಿನಿಂದ ಸದನದ ಒಳಗೆ – ಹೊರಗೆ ರಾಜ್ಯಾದ್ಯಂತ ಈಶ್ವರಪ್ಪ ವಿರುದ್ಧ ಪ್ರೊಟೆಸ್ಟ್​, ಅಧಿವೇಶನ ಬಳಿಕವೂ ರಾಜ್ಯಾದ್ಯಂತ ಹೋರಾಟಕ್ಕೆ ಚಿಂತನೆ: ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅಹೋರಾತ್ರಿ ಧರಣಿ ನಡೆಸ್ತಿರೋ ಕಾಂಗ್ರೆಸ್, ನಾಳೆ ಸದನದೊಳಗೂ ಧರಣಿ ಮುಂದುವರಿಸಲು ನಿರ್ಧಾರ ಮಾಡಿದೆ. ಅಷ್ಟೇ ಅಲ್ಲ, ನಾಳೆಯಿಂದ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ. ಈಶ್ವರಪ್ಪ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ ಡಿಕೆಶಿ ಕರೆ ಕೊಟ್ಟಿದ್ದು, ಪ್ರತಿ ತಾಲೂಕು, ವಿಧಾನಸಭಾ ಕ್ಷೇತ್ರದಲ್ಲೂ ಬೃಹತ್​ ಧರಣಿಯನ್ನ ಕಾರ್ಯಕರ್ತರು ನಡೆಸಲಿದ್ದಾರೆ.

ಸಂಪುಟದಿಂದ ಈಶ್ವರಪ್ಪರನ್ನ ವಜಾ ಮಾಡುವಂತೆ ಒತ್ತಾಯ ಮಾಡಲಿದ್ದಾರೆ. ಈ ಮೂಲಕ ಸದನದ ಒಳಗೆ ಮತ್ತು ಹೊರಗೆ ಈಶ್ವರಪ್ಪ ವಿರುದ್ಧ ಪ್ರೊಟೆಸ್ಟ್ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡ್ಕೊಂಡಿದೆ. ಅಲ್ಲದೇ ಒಂದು ವೇಳೆ ಈಶ್ವರಪ್ಪ ವಜಾ ಮಾಡದಿದ್ರೆ, ಕಲಾಪವನ್ನ ಅನಿರ್ಧಿಷ್ಟಾವಧಿಗೆ ಮುಂದೂಡಿದ್ರೆ, ಅಧಿವೇಶನ ಬಳಿಕವೂ ರಾಜ್ಯಾದ್ಯಂತ ಹೋರಾಟ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ!

ಇನ್ನು ದೆಹಲಿ ಅಂಗಳಕ್ಕೂ ಧ್ವಜ ದಂಗಲ್ ಕಾಲಿಟ್ಟಿದ್ದು, ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಫೆಬ್ರವರಿ 25ಕ್ಕೆ ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಸೇರಿ ಹಲವರನ್ನ ಆಹ್ವಾನಿಸಿದೆ. ಹಿಜಾಬ್​, ರಾಷ್ಟ್ರಧ್ವಜ ವಿವಾದದ ಸೇರಿ ಹಲವು ವಿಷಯ ಚರ್ಚೆ ನಡೆಯೋ ಸಾಧ್ಯತೆ ಇದೆ.

‘ಕೈ’ತಂತ್ರ, ಕೇಸರಿ ರಣತಂತ್ರ! ಈಶ್ವರಪ್ಪ ಧ್ವಜ ಹೇಳಿಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ತಲುಪಿರೋದ್ರಿಂದ, ಕೇಸರಿ ಟೀಮ್‌ಗೂ ಬಿಜೆಪಿ ಹೈಕಮಾಂಡ್‌ ಸೂಚನೆ ಬಂದಿದೆ. ಹೀಗಾಗಿ ಕಾಂಗ್ರೆಸ್‌ ಕೌಂಟರ್ ಕೊಡಲು ಪ್ಲ್ಯಾನ್ ರಾಜ್ಯ ಬಿಜೆಪಿ ನಾಯಕರು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ’

‘ಕೇಸರಿ’ಯಲ್ಲಿ ಗಂಭೀರವಾಯ್ತಾ ಈಶ್ವರಪ್ಪ ವಿಚಾರ? ಬಿಜೆಪಿ ನಾಯಕರು ತುರ್ತು ಸಭೆ ಕರೆದಿದ್ಯಾಕೆ? ಒಂದೆಡೆ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದು, ಪ್ರತಿಭಟನೆಗೆ ಕರೆ ಕೊಟ್ಟಿರೋದು ಬಿಜೆಪಿ ನಾಯಕರಿಗೆ ಟೆನ್ಷನ್ ಹೆಚ್ಚಿಸಿದೆ. ಹೀಗಾಗಿ ಈಶ್ವರಪ್ಪ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಡ್ಯಾಮೇಜ್​ ಕಂಟ್ರೋಲ್​ಗೆ ಜಾಣ ಹೆಜ್ಜೆ ಇಡೋಕೆ ಮುಂದಾಗಿದೆ. ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಕೌಂಟರ್ ಪ್ಲ್ಯಾನ್ ರೂಪಿಸಿದೆ.

ಕಾಂಗ್ರೆಸ್​ ಧರಣಿಯನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಮಹತ್ವದ ಸಭೆ ಕರೆದಿದೆ. ಸಭೆಯಲ್ಲಿ CM ಬೊಮ್ಮಾಯಿ, ಮಾಜಿ ಸಿಎಂ BSY, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, BJP ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಈಶ್ವರಪ್ಪ ಹಾಗೂ ರಾಜ್ಯದ BJP ಪ್ರಮುಖರು ಇಂದಿನ ಭಾಗಿಯಾಗಲಿದ್ದಾರೆ. ಇಂದಿನ ಕಾಂಗ್ರೆಸ್​ ಪ್ರತಿಭಟನೆಗೆ ಏನ್​ ಮಾಡಬೇಕು ಹಾಗೇ ಮುಂದಿನ ಕಾರ್ಯತಂತ್ರದ ಬಗ್ಗೆಯೂ ನಾಯಕರು ಚರ್ಚೆ ಮಾಡಲಿದ್ದಾರಂತೆ.

ಸರ್ಕಾರಕ್ಕೆ ಸಡ್ಡುಹೊಡೆದ ಕಾಂಗ್ರೆಸ್, ಕಾಂಗ್ರೆಸ್‌ನಿಂದಲೇ ಊಟದ ವ್ಯವಸ್ಥೆ! ಪ್ರತಿಭಟನೆ ವಿಚಾರದಲ್ಲಿ ಸರ್ಕಾರಕ್ಕೆ ಸೆಡ್ಡುಹೊಡೆದ ಕಾಂಗ್ರೆಸ್, ಊಟದ ವೆಚ್ಚವನ್ನ ಕೆಪಿಸಿಸಿ ವತಿಯಿಂದಲೇ ಭರಿಸಲು ನಿರ್ಧಾರ ಮಾಡಿದೆ. ಅಹೋರಾತ್ರಿ ಧರಣಿ ವೇಳೆ ಕಾಂಗ್ರೆಸ್‌ನಿಂದಲೇ ಊಟದ ವ್ಯವಸ್ಥೆ ಇರಲಿದೆ. ಸಚಿವಾಲಯದ ಹಣವನ್ನ ಬಳಸಿಕೊಳ್ಳದೇ ಇರಲು ತೀರ್ಮಾನ ಮಾಡಲಾಗಿದೆ. ಊಟ ಮಾಡ್ಕೊಂಡು ಮಲ್ಕೊಂಡಿದ್ದಾರೆಂದು ಅಂತಾ ಸಚಿವ ಅಶೋಕ್ ವ್ಯಂಗ್ಯವಾಡಿದ್ದರು. ಹೀಗಾಗಿ ನಿನ್ನೆ ಮತ್ತು ಮೊನ್ನೆ ರಾತ್ರಿ ಕೆಪಿಸಿಸಿ ವತಿಯಿಂದಲೇ ಊಟದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದೀಗ ಮೊದಲೆರೆಡು ದಿನದ ವೆಚ್ಚವನ್ನೂ ಸರ್ಕಾರಕ್ಕೆ ವಾಪಸ್ ನೀಡಲು ಕೆಪಿಸಿಸಿ ನಿರ್ಧರಿಸಿದೆ.

ಧರಣಿ ವೇಳೆ ಕ್ರಿಕೆಟ್ ವೀಕ್ಷಿಸಿದ ಸಿದ್ದರಾಮಯ್ಯ & ಟೀಂ! ಅಹೋರಾತ್ರಿ ಧರಣಿ ವೇಳೆ ವಿಧಾನಸಭೆಯಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಶಾಸಕರು ಭಾರತ ಮತ್ತು ವೆಸ್ಟ್ ಇಂಡೀಸ್​ ಮಧ್ಯೆ ನಡೆದ ಮೂರನೇ ಟಿಟ್ವೆಂಟಿ ಪಂದ್ಯವನ್ನ ವೀಕ್ಷಿಸಿದರು. ಒಟ್ಟಿನಲ್ಲಿ ಹೈಕಮಾಂಡ್ ಲೆವೆಲ್‌ಗೆ ಧ್ವಜ ದಂಗಲ್ ಮುಟ್ಟಿರೋದ್ರಿಂದ ಉಭಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಧ್ವಜ ದಂಗಲ್​ ವಿಚಾರದಲ್ಲಿ ತಲೆದಂಡಕ್ಕೆ ಕಾಂಗ್ರೆಸ್​ ಪಟ್ಟು ಹಿಡಿದಿದ್ರೆ, ಕಾಂಗ್ರೆಸ್ ಪ್ರತಿಭಟನಾ ಆಸ್ತ್ರಕ್ಕೆ ತಣ್ಣೀರೆರಚಲು, ಬಿಜೆಪಿ ಪ್ರತಿತಂತ್ರ ರೂಪಿಸ್ತಿದೆ. – ಕಿರಣ್ ಹನಿಯಡ್ಕ ಟಿವಿ9 ಬೆಂಗಳೂರು

ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್