AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಕುಂತಲೆ ಅವತಾರದಲ್ಲಿ ಸಮಂತಾ; ‘ಶಾಕುಂತಲಂ’ ಫಸ್ಟ್​ ಲುಕ್​ ಪೋಸ್ಟರ್​ ಕಂಡು ಫ್ಯಾನ್ಸ್​ ಫಿದಾ

Shakuntalam Movie First Look: ಯಾವ ಪಾತ್ರ ಕೊಟ್ಟರೂ ಸೈ ಎಂಬಂತಹ ಪ್ರತಿಭಾವಂತೆ ಸಮಂತಾ. ಅವರನ್ನು ಶಕುಂತಲೆ ಪಾತ್ರದಲ್ಲಿ ನೋಡಲು ಫ್ಯಾನ್ಸ್​ ಕಾದಿದ್ದಾರೆ. ‘ಶಾಕುಂತಲಂ’ ಚಿತ್ರದ ಫಸ್ಟ್​ಲುಕ್​ ವೈರಲ್​ ಆಗುತ್ತಿದೆ.

ಶಕುಂತಲೆ ಅವತಾರದಲ್ಲಿ ಸಮಂತಾ; ‘ಶಾಕುಂತಲಂ’ ಫಸ್ಟ್​ ಲುಕ್​ ಪೋಸ್ಟರ್​ ಕಂಡು ಫ್ಯಾನ್ಸ್​ ಫಿದಾ
‘ಶಾಕುಂತಲಂ‘ ಚಿತ್ರದ ಸಮಂತಾ ಫಸ್ಟ್​ಲುಕ್​
TV9 Web
| Edited By: |

Updated on:Feb 21, 2022 | 11:58 AM

Share

ನಟಿ ಸಮಂತಾ (Samantha) ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ತೆಲುಗಿನ ‘ಶಾಕುಂತಲಂ’ ಸಿನಿಮಾ (Shakuntalam Movie) ಮೇಲೆ ಬಹಳ ನಿರೀಕ್ಷೆ ಇದೆ. ಪೌರಾಣಿಕ ಕಥಾಹಂದರ ಇರುವ ಈ ಚಿತ್ರವನ್ನು ಸಮಂತಾ ಆಯ್ಕೆ ಮಾಡಿಕೊಂಡಾಗಲೇ ಅಭಿಮಾನಿಗಳ ವಲಯದಲ್ಲಿ ಹೈಪ್​ ಸೃಷ್ಟಿ ಆಗಿತ್ತು. ಈಗ ಈ ಸಿನಿಮಾದಿಂದ ಫಸ್ಟ್​ಲುಕ್​ ಪೋಸ್ಟ್​ ಬಿಡುಗಡೆ ಮಾಡಲಾಗಿದೆ. ಶಕುಂತಲೆಯಾಗಿ ಸಮಂತಾ ಅವರು ಪೋಸ್​ ನೀಡಿದ್ದಾರೆ. ಶ್ವೇತವರ್ಣದ ಸೀರೆಯಲ್ಲಿ, ಪರಿಸರದ ಮಧ್ಯೆ ಕುಳಿತು ಅವರು ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಮಂತಾ ಈ ಪೋಸ್ಟರ್​ ಹಂಚಿಕೊಂಡಿದ್ದಾರೆ. ‘ಶಾಕುಂತಲಂ’ ಚಿತ್ರದ ಬಗ್ಗೆ ಅವರಿಗೂ ವಿಶೇಷವಾದ ನಿರೀಕ್ಷೆ ಇದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಪೋಸ್ಟರ್​ ಅನ್ನು ಲಕ್ಷಾಂತರ ಮಂದಿ ಲೈಕ್​ ಮಾಡಿದ್ದಾರೆ. ಆ ಮೂಲಕ ಚಿತ್ರದ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಎಂಥದ್ದು ಎಂಬುದು ಗೊತ್ತಾಗಿದೆ. ‘ಶಾಕುಂತಲಂ’ ಫಸ್ಟ್​ಲುಕ್​ (Shakuntalam First Look) ಪೋಸ್ಟರ್​ ಕಂಡು ಸೆಲೆಬ್ರಿಟಿಗಳು ಕೂಡ ವಾವ್​ ಎನ್ನುತ್ತಿದ್ದಾರೆ. ಕಮೆಂಟ್​ಗಳ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ.

ಯಾವ ಪಾತ್ರ ಕೊಟ್ಟರೂ ಸೈ ಎಂಬಂತಹ ಪ್ರತಿಭಾವಂತೆ ಸಮಂತಾ. ಅವರನ್ನು ಶಕುಂತಲೆ ಪಾತ್ರದಲ್ಲಿ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಈಗ ಬಿಡುಗಡೆ ಆಗಿರುವ ಫಸ್ಟ್​ಲುಕ್​ನಿಂದಾಗಿ ಫ್ಯಾನ್ಸ್​ ನಿರೀಕ್ಷೆ ದುಪ್ಪಟ್ಟಾಗಿದೆ. ಇತ್ತೀಚಿನ ದಿನಗಳಲ್ಲಿ ಸಮಂತಾ ಅವರ ಜನಪ್ರಿಯತೆ ಹೆಚ್ಚಿದೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಅವರು ಸಖತ್​ ಬೋಲ್ಡ್​ ಆದಂತಹ ಪಾತ್ರ ಮಾಡಿದರು. ಬಳಿಕ ‘ಪುಷ್ಪ’ ಸಿನಿಮಾದಲ್ಲಿ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡಿನಲ್ಲಿ ಗ್ಲಾಮರಸ್​ ಆಗಿ ಹೆಜ್ಜೆ ಹಾಕಿದರು. ಈಗ ಶಕುಂತಲೆಯಾಗಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಈ ಚಿತ್ರದ ಫಸ್ಟ್​ಲುಕ್​ ವೈರಲ್​ ಆಗುತ್ತಿದೆ.

ಮೇನಕೆ ಮತ್ತು ವಿಶ್ವಾಮಿತ್ರರ ಮಗಳು ಶಕುಂತಲೆ. ಕಣ್ವ ಮಹರ್ಷಿಗಳ ಆಶ್ರಮದಲ್ಲಿ ಬೆಳದ ಆಕೆಗೆ ಪ್ರಕೃತಿ ಮತ್ತು ಪ್ರಾಣಿಗಳೆಂದರೆ ತುಂಬ ಪ್ರೀತಿ. ಅದನ್ನು ಬಿಂಬಿಸುವ ರೀತಿಯಲ್ಲೇ ‘ಶಾಕುಂತಲಂ’ ಚಿತ್ರದ ಫಸ್ಟ್​ಲುಕ್​ ಮೂಡಿಬಂದಿದೆ. ಈ ಪಾತ್ರ ಆಯ್ಕೆ ಮಾಡಿದ್ದು ಯಾಕೆ ಎಂಬ ಬಗ್ಗೆ ಸಮಂತಾ ಅವರು ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ವಿವರಿಸಿದ್ದರು.

‘ನಾನು ಯಾವಾಗಲೂ ಡಿಫರೆಂಟ್​​ ಪಾತ್ರ ಮಾಡಲು ಇಷ್ಟಪಡುತ್ತೇನೆ. ‘ಶಾಕುಂತಲಂ’ ಸಿನಿಮಾದ ಪ್ರತಿ ಫ್ರೇಮ್​ ಕೂಡ ಪೇಂಟಿಂಗ್ ರೀತಿ ಇದೆ. ಶಕುಂತಲೆಯ ಪಾತ್ರದಲ್ಲಿ ಹಿಂದೆಂದಿಗಿಂತಲೂ ನಾನು ​ಸುಂದರವಾಗಿ ಕಾಣಿಸಿಕೊಳ್ಳಬೇಕು. ಆ ಒತ್ತಡ ನನ್ನ ಮೇಲೆ ಇತ್ತು. ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳೆಂದರೆ ನನಗೆ ಯಾವಾಗಲೂ ಇಷ್ಟ. ಇದು ನನ್ನ ಕನಸಿನ ಪಾತ್ರ. ಕೆಲವು ದೃಶ್ಯಗಳನ್ನು ನೋಡಿದರೆ ಅದು ನಾನೇ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅಷ್ಟು ಚೆನ್ನಾಗಿ ಇಡೀ ತಂಡ ಕೆಲಸ ಮಾಡಿದೆ. ಮೇಕಪ್​, ಕಾಸ್ಟ್ಯೂಮ್​, ಪ್ರೊಡಕ್ಷನ್​ ಡಿಸೈನ್​, ಲೈಟಿಂಗ್​ ಹೀಗೆ ಎಲ್ಲವೂ ಚೆನ್ನಾಗಿದೆ’ ಎಂದು ಸಮಂತಾ ಹೇಳಿದ್ದರು.

ಖ್ಯಾತ ನಿರ್ದೇಶಕ ಗುಣಶೇಖರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ನೀಲಿಮಾ ಗುಣ ಅವರ ನಿರ್ಮಾಣದಲ್ಲಿ ‘ಶಾಕುಂತಲಂ’ ಮೂಡಿಬರುತ್ತಿದೆ. ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾ ಕೂಡ ಬಣ್ಣ ಹಚ್ಚಿದ್ದಾಳೆ ಎಂಬುದು ವಿಶೇಷ.

ಇದನ್ನೂ ಓದಿ:

ಸಮಂತಾ ಹಾಡಿಗೆ ಮಸ್ತ್​ ಆಗಿ ಡ್ಯಾನ್ಸ್ ಮಾಡಿದ ಆಶಿಕಾ ರಂಗನಾಥ್​; ಇಲ್ಲಿದೆ ವಿಡಿಯೋ

ಜಲಪಾತದ ಎದುರು ಸಖತ್​ ಆಗಿ ಪೋಸ್​ ನೀಡಿದ ಸಮಂತಾ; ಇಲ್ಲಿವೆ ಫೋಟೋಗಳು

Published On - 11:39 am, Mon, 21 February 22

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?