- Kannada News Photo gallery Samantha visits Athirappilly Water Falls Kerala Samantha Hot Pose goes viral
ಜಲಪಾತದ ಎದುರು ಸಖತ್ ಆಗಿ ಪೋಸ್ ನೀಡಿದ ಸಮಂತಾ; ಇಲ್ಲಿವೆ ಫೋಟೋಗಳು
ಸಮಂತಾ ಅವರು ಈ ಬಾರಿ ಕೇರಳದ ಆದಿರಪ್ಪಳ್ಳಿ ಜಲಪಾತಕ್ಕೆ ಭೇಟಿ ನೀಡಿದ್ದಾರೆ. ಜಲಪಾತದ ಪಕ್ಕದಲ್ಲಿ ಕುಳಿತು ಅವರು ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Updated on: Feb 20, 2022 | 1:41 PM

ನಟಿ ಸಮಂತಾಗೆ ಬೇಡಿಕೆ ಹೆಚ್ಚಿದೆ. ಕೇವಲ ಟಾಲಿವುಡ್ ಮಾತ್ರವಲ್ಲದೆ, ಬಾಲಿವುಡ್, ಕಾಲಿವುಡ್ನಲ್ಲೂ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸಮಂತಾ ಈಗ ಲೈಫ್ಅನ್ನು ಸಂಪೂರ್ಣವಾಗಿ ಎಂಜಾಯ್ ಮಾಡೋಕೆ ಆರಂಭಿಸಿದ್ದಾರೆ. ವಿಚ್ಛೇದನದ ನಂತರದಲ್ಲಿ ಸಮಂತಾ ಸಾಕಷ್ಟು ಕಡೆಗಳಲ್ಲಿ ಪ್ರವಾಸ ತೆರಳುತ್ತಿದ್ದಾರೆ.

ಸಮಂತಾ ಅವರು ಈ ಬಾರಿ ಕೇರಳದ ಆದಿರಪ್ಪಳ್ಳಿ ಜಲಪಾತಕ್ಕೆ ಭೇಟಿ ನೀಡಿದ್ದಾರೆ. ಜಲಪಾತದ ಪಕ್ಕದಲ್ಲಿ ಕುಳಿತು ಅವರು ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.

ಸಮಂತಾ ಅವರು ಹಂಚಿಕೊಂಡ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರ ಫೋಟೋಗೆ ನಾನಾ ರೀತಿಯಲ್ಲಿ ಕಮೆಂಟ್ಗಳನ್ನು ಅಭಿಮಾನಿಗಳು ಹಾಕುತ್ತಿದ್ದಾರೆ. ಅವರು ಎಂಜಾಯ್ ಮಾಡುತ್ತಿರುವ ರೀತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸಮಂತಾ ಈ ಮೊದಲು ಸ್ವಿಜರ್ಲೆಂಡ್ಗೆ ತೆರಳಿದ್ದರು. ಚಳಿಗಾಲದಲ್ಲಿ ಸ್ವಿಜರ್ಲೆಂಡ್ನಲ್ಲಿ ಹಿಮ ಬೀಳುತ್ತದೆ. ಅಲ್ಲಿಗೆ ತೆರಳಿ ಸಮಂತಾ ಹಿಮದ ಮೇಲೆ ಸ್ಕೀಯಿಂಗ್ ಮಾಡಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಸಮಂತಾ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೆ, ವೆಬ್ ಸೀರಿಸ್ ಕೆಲಸಗಳಲ್ಲೂ ಅವರು ಬ್ಯುಸಿ ಆಗಿದ್ದಾರೆ. ವಿಚ್ಛೇದನದ ನಂತರದಲ್ಲಿ ಹಲವು ಭಿನ್ನ ಪಾತ್ರಗಳನ್ನು ಸಮಂತಾ ಒಪ್ಪಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸಮಂತಾ ಏರ್ಪೋರ್ಟ್ನಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು. ದಳಪತಿ ವಿಜಯ್ ಹಾಗೂ ಪೂಜಾ ಹೆಗ್ಡೆ ನಟನೆಯ ‘ಬೀಸ್ಟ್’ ಚಿತ್ರದ ಹಾಡಿಗೆ ಸಮಂತಾ ಸ್ಟೆಪ್ ಹಾಕಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.



















