ದೇವನಹಳ್ಳಿ: ರಾಜ್ಯ ಸರ್ಕಾರಕ್ಕೆ 3 ವರ್ಷ ಮತ್ತು ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ ಪೂರೈಕೆ ಹಿನ್ನೆಲೆ, ಸರ್ಕಾರದ ಮೂರನೆ ವರ್ಷದ ಸಾಧನಾ ಸಮಾವೇಶಕ್ಕೆ (Sadhana Conference) ಸಿದ್ದತೆ ನಡೆಯುತ್ತಿದ್ದು, ಜುಲೈ 28ಕ್ಕೆ ಸರ್ಕಾರದ ಮೂರನೆ ವರ್ಷದ ಸಾಧನಾ ಸಮಾವೇಶ ದೊಡ್ಡಬಳ್ಳಾಪುರ ಹೊರವಲಯದಲ್ಲಿ ನಡೆಯಲಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗದ ಕಾರ್ಯಕರ್ತರನ್ನ ಸೇರಿಸಿ, ಲಕ್ಷಾಂತರ ಜನರ ಸಮ್ಮುಖದಲ್ಲಿ ಸಮಾವೇಶಕ್ಕೆ ಪ್ಲಾನ್ ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ಬಳಿ ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಸಮಾವೇಶ ನಡೆಯಲಿದ್ದು, ಈಗಾಗಲೇ ದೊಡ್ಡಬಳ್ಳಾಪುರ ಹೊರವಲಯದಲ್ಲಿ 29 ಎಕರೆ ಜಾಗ ಗುರುತು ಮಾಡಲಾಗಿದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ
ಸಚಿವ ಸುಧಾಕರ್ ನೇತೃತ್ವದಲ್ಲಿ ಬೃಹತ್ ಸಾಧನಾ ಸಮಾವೇಶ ನಡೆಯಲಿದ್ದು, ಸಚಿವ ಸುಧಾಕರ್ ಮತ್ತು ಶಾಸಕ ಎಸ್.ಆರ್.ವಿಶ್ವನಾಥ್ ಸಮಾವೇಶ ಮಾಡುತ್ತಿರುವ ಸ್ಥಳ ಪರಿಶೀಲನೆ ಮಾಡಿದರು. ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರು ಭಾಗಿವಾಗಲಿದ್ದು, ಸಮಾವೇಶದ ಮೂಲಕ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಸರ್ಕಾರ ಪ್ಲಾನ್ ಮಾಡುತ್ತಿದೆ.
ಇದನ್ನೂ ಓದಿ: ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ನಾನು ಮುಖ್ಯಮಂತ್ರಿ ಆಗಬಹುದೇ?; ಮಹಾ ಸಿಎಂಗೆ ಬಾಲಕಿಯ ಪ್ರಶ್ನೆ
ಸಿಎಂ, ಗೃಹಸಚಿವ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಸಾವಿರಾರು ಪತ್ರ.!
ಗುಟ್ಕಾ, ಸಿಗರೇಟ್ ಬ್ಯಾನ್ ಮಾಡದಂತೆ ಸಿಎಂ, ಗೃಹಸಚಿವ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯಲಾಗಿದ್ದು, ಸರ್ಕಾರ ಚಾಪೆ ಕೆಳಗೆ ನುಗ್ಗಿದರೆ, ಗುಟ್ಕಾ ಕಂಪನಿಗಳು ರಂಗೋಲೆ ಕೆಳಗೆ ನುಗ್ಗಿವೆ. ಒಂದೇ ಮಾದರಿಯ ಪತ್ರ ಬರೆದು, ರಾಜ್ಯದ ಎಲ್ಲಾ ಅಂಗಡಿಗಳಿಂದ ಡೀಲರ್‌ಗಳು ಸಹಿ ಹಾಕಿಸಿಕೊಂಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಪತ್ರ ಬರೆದಿದ್ದು, ವಿಧಾನಸೌಧದ ಸಚಿವರ ಕೊಠಡಿಗೂ ಪತ್ರ ಬರೆಯಲಾಗಿದೆ. ಇನ್ನು ಪೋಸ್ಟ್ ಆಫಿಸ್‌ನಲ್ಲಿ ಮೂಟೆಗಟ್ಟಲೆ ಪತ್ರ ಉಳಿದುಕೊಂಡಿವೆ. ಕರಡು ಕರ್ನಾಟಕ ಪುರಸಭೆಗಳಿಗೆ ಆಕ್ಷೇಪ ಮಾಡಿದ್ದು, ಕರ್ನಾಟಕ ಪುರಸಭೆಗಳ ಕರಡು ಮಾದರಿ ಬೈಲಾ 2020ಕ್ಕೆ ವಿರೋಧಿಸಲಾಗಿದೆ. ಬೈರತಿ ಬಸವರಾಜ್ ಅವರ ಕಚೇರಿಗೆ ಐದು ಸಾವಿರಕ್ಕೂ ಹೆಚ್ಚು ಪತ್ರಗಳ ರವಾನೆ ಮಾಡಿದ್ದು, ಅದೇ ಮಾದರಿಯಲ್ಲಿ ಸಿಎಂ ಕಚೇರಿ ಹಾಗೂ ಗೃಹಸಚಿವರ ಕಚೇರಿಗೂ ಪತ್ರಗಳ ರವಾನೆ ಮಾಡಲಾಗಿದೆ. ನಮ್ಮ ವ್ಯಾಪಾರಕ್ಕೆ ಕಲ್ಲು ಹಾಕಬೇಡಿ ಅಂತ ಪಾನ್ ಮಸಾಲ ಅಂಗಡಿಗಳಿಂದ ಸಹಿ ಪಡೆದು ಪತ್ರ ರವಾನೆ ಮಾಡಲಾಗಿದೆ.