ಬೆಂಗಳೂರು ಏರ್​ಪೋರ್ಟ್: ಪ್ಯಾಂಟ್ ಒಳಗಡೆ ಪೌಡರ್ ರೂಪದ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ವಶ, ಚಿನ್ನ ಜಪ್ತಿ

| Updated By: ಆಯೇಷಾ ಬಾನು

Updated on: Feb 22, 2024 | 9:00 AM

ಬೆಂಗಳೂರು ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪ್ಯಾಂಟ್ ಒಳಗಡೆ ಅಡಗಿಸಿ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ ಚಿನ್ನ ವಶಕ್ಕೆ ಪಡೆದಿದ್ದಾಋಏ. 22.5 ಲಕ್ಷ ಮೌಲ್ಯದ 367 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಶಾರ್ಜಾದಿಂದ ಬೆಂಗಳೂರಿಗೆ ಬಂದಿದ್ದ ಈ ಆರೋಪಿ ಪ್ಯಾಂಟ್ ಒಳಗಡೆ ಹಲವು ಲೇಯರ್ಗಳನ್ನ ಮಾಡಿ ಅದರಲ್ಲಿ ಚಿನ್ನ ಅಡಗಿಸಿಟ್ಟಿದ್ದ.

ಬೆಂಗಳೂರು ಏರ್​ಪೋರ್ಟ್: ಪ್ಯಾಂಟ್ ಒಳಗಡೆ ಪೌಡರ್ ರೂಪದ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ವಶ, ಚಿನ್ನ ಜಪ್ತಿ
ಪ್ಯಾಂಟ್ ಒಳಗಡೆ ಪೌಡರ್ ರೂಪದ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ
Follow us on

ಬೆಂಗಳೂರು, ಫೆ.22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ (Kempegowda International Airport Bengaluru) 22.5 ಲಕ್ಷ ಮೌಲ್ಯದ ಚಿನ್ನ (Gold Powder) ಜಪ್ತಿ ಮಾಡಲಾಗಿದೆ. ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪ್ಯಾಂಟ್ ಒಳಗಡೆ ಪೌಡರ್ ರೂಪದ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನಿಂದ ಚಿನ್ನ ಜಪ್ತಿ ಮಾಡಿದ್ದಾರೆ. ಹಾಗೂ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ.

ಶಾರ್ಜಾದಿಂದ ಕೆಐಎಬಿಗೆ ವಿಮಾನದಲ್ಲಿ ಬಂದಿಳಿದಿದ್ದ ಆರೋಪಿ ಕಸ್ಟಮ್ ಅಧಿಕಾರಿಗಳ ಕಣ್ತಪ್ಪಿಸಲು ಡಿಸೈನ್ ಪ್ಯಾಂಟ್ ಮಾಡಿಸಿದ್ದ. ಪ್ಯಾಂಟ್ ಒಳಗಡೆ ಲೇಯರ್​ಗಳನ್ನ ಮಾಡಿ ಚಿನ್ನ ಅಡಗಿಸಿಟ್ಟಿದ್ದ. ಪೌಡರ್ ರೂಪದ ಚಿನ್ನವನ್ನ ಅಡಗಿಸಿ ಸಾಗಾಟ ಮಾಡಲು ಯತ್ನಿಸಿದ್ದ. ಸದ್ಯ ಕಸ್ಟಮ್ಸ್​ ಅಧಿಕಾರಿಗಳ ಚಾಣಾಕ್ಷತನದಿಂದ 22.5 ಲಕ್ಷ ಮೌಲ್ಯದ 367 ಗ್ರಾಂ ಚಿನ್ನ ಜಪ್ತಿಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಶೇರ್ ಟ್ರೇಡಿಂಗ್ ಪರ್ಚೇಸ್ ಹೆಸರಲ್ಲಿ ಉದ್ಯಮಿಗಳಿಗೆ 16 ಕೋಟಿ ದೋಖಾ

ಶೇರ್ ಮಾರ್ಕೇಟ್ ಟ್ರೇಡಿಂಗ, IPO ಪರ್ಚೇಸ್ & ಸೆಲ್ಲಿಂಗ್ ಹೆಸರಲ್ಲಿ ಬೆಂಗಳೂರಿನ ಉದ್ಯಮಿಗಳಿಗೆ ಬರೋಬ್ಬರಿ 16 ಕೋಟಿ ಒಂದು ಲಕ್ಷ ಹಣ ವಂಚಿಸಿರೋ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಹರಿಪಾಲ್ ಸಿಂಗ್ ಎಂಬುವವರಿಗೆ ಮತ್ತು ಕೋಟಿ ಸಿಸ್ಟಮ್ ಮಾಲೀಕರರಿಗೆ ಫೇಸ್ಬುಕ್ ಮೂಲಕ ಪರಿಚಿತರಾದ ಈ ಜಾಲ ಶೇರ್ ಟ್ರೇಡಿಂಗ್ ಕಂಪನಿ ಹೆಸರಲ್ಲಿ ಬಲೆಬೀಸಿತ್ತು. ಫೇಸ್ಬುಕ್ ಅಡ್ವಟೈಸ್ಮೆಂಟ್ ನೋಡಿ ಉದ್ಯಮಿಗಳು ವಂಚಕ ಜಾಲವನ್ನ ಸಂಪರ್ಕಿಸಿದ್ರು. ಗೋಲ್ಡ್ಸ್ ಮೆನ್ ಸಾಚಸ್ ಈಕ್ವಿಟಿ ಅಸೆಟ್ ಮ್ಯಾನೇಜ್ಮೆಂಟ್ ಗ್ರೂಪ್ 109 ಹಾಗೂ ಸ್ಕೈ ರಿಮ್ ಕ್ಯಾಪಿಟಲ್ ಇಮಿಲಿ ಕುನಾಲ್ ಎಂಬ ಶೇರ್ ಟ್ರೇಡಿಂಗ್ ಕಂಪನಿಗಳ ಪರಿಚಯವಾಗಿತ್ತು. ಕಂಪನಿಯ ಶೇರುಗಳನ್ನ ಖರೀದಿಸಿದ್ರೆ, ಸ್ಟಾಕ್ ಮಾರ್ಕೆಟ್ ನಲ್ಲಿ ಕಂಪನಿಗಳ ಷೇರುಗಳ ಮೇಲೆ ಇನ್ವೆಸ್ಟ್ ಮಾಡಿದ್ರೆ ಹೆಚ್ಚಿನ ಲಾಭ ಬರೋದಾಗಿ ನಂಬಿಸಿದ್ರು. ಅಲ್ಲದೇ ಫೇಸ್ಬುಕ್ ಪರಿಚಿತರಾದ ಆರೋಪಿಗಳು ತಮ್ಮ ವಾಟ್ಸಾಫ್ ಗ್ರೂಪ್ ಗೆ ಹರಿಪಾಲ್ ಸಿಂಗ್ ರನ್ನ ಸೇರಿಸಿದ್ರು. ಗ್ರೂಪ್ ನ ಸದಸ್ಯರಿಗೆ ಹೆಚ್ಚಿನ ಲಾಭ ದೊರೆಯುತ್ತಿರೋದಾಗಿ ಸುಳ್ಳು ಸುಳ್ಳು ಮೆಸೇಜ್ ಗಳನ್ನ ಗ್ರೂಪ್‌ನಲ್ಲಿ ಹಾಕಿ ಹರಿಪಾಲ್ ಸಿಂಗ್ ರನ್ನು ನಂಬಿಸಿ ಇನ್ವೆಸ್ಟ್ ಮಾಡುವಂತೆ ಮಾಡಿದ್ರು.

ಇದನ್ನೂ ಓದಿ: ಫರೀದಾಬಾದ್: ಕಾರು ಕದಿಯಲು ಹೋಗಿ ನಿದ್ರೆಗೆ ಜಾರಿದ ಕಳ್ಳ

ಹೆಚ್ಚಿನ ಲಾಭ ದೊರೆಯುವ ನಿರೀಕ್ಷೆಯಲ್ಲಿ ಹರಿಪಾಲ್ ಸಿಂಗ್ ಕಳೆದ ಡಿಸೆಂಬರ್ ನಿಂದ ಫೆಬ್ರವರಿ ಮೊದಲ ವಾರದ ವರೆಗೂ ಆರೋಪಿಗಳ ಸುಮಾರು 26 ಅಕೌಂಟ್ ಗಳಿಗೆ ಬರೋಬ್ಬರಿ 6 ಕೋಟಿ 1 ಲಕ್ಷ ಹಣ ಸಂದಾಯ ಮಾಡಿ ಕಂಪನಿ ಷೇರು ಖರೀದಿ ಮಾಡಿದ್ರು. ನಂತರ ಕಂಪನಿ ಷೇರು ಮಾರಾಟ ಮಾಡಿ ಹಣ ಹಿಂದುರಿಗಿಸಿ ಲಾಭಾಂಶ ಪಡೆಯಲು ಹರಿಪಾಲ್ ಸಿಂಗ್ ಯತ್ನಿಸಿದ ವೇಳೆ ಆರೋಪಿಗಳು ನಾನಾ ಕಾರಣ ನೀಡಿ ಹಣ ಹಿಂದಿರುಗಿಸದೇ ವಿಳಂಬ ಮಾಡ್ತಿದ್ರು. ಇದೇ ವೇಳೆ ಹರಿಪಾಲ್ ಸಿಂಗ್ ಹೂಡಿಕೆ ಮಾಡಿದ್ದ ಕಂಪನಿ ಹೆಸರಲ್ಲಿ ಕೇರಳದ ಉದ್ಯಮಿಯೊಬ್ಬನಿಗೂ ಇದೇ ರೀತಿ ವಂಚನೆ ಆಗಿರೋದು ಹರಿಪಾಲ್ ಸಿಂಗ್ ರಿಗೆ ಗೊತ್ತಾಗಿತ್ತು. ಕಡೆಗೆ ಎಚ್ಚೆತ್ತ ಹರಿಪಾಲ್ ಸಿಂಗ್ ಬೆಂಗಳೂರು ಸೈಬರ್ ಕ್ತೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಕೋಟಿ ಸಿಸ್ಟಮ್ ಮಾಲಿಕರಿಗೂ ಇದೇ ರೀ ಫೇಸ್ ಬುಕ್ ಮೂಲಕ ತಲುಪಿ ವಾಟ್ಸಪ್ ಹಾಗು ಟೆಲಿಗ್ರಾಮ್ ನಲ್ಲಿ ಪೋಸ್ಟ್ ಮಾಡಿಸಿ ಹಂತ ಹಂತವಾಗಿ ಹತ್ತು ಕೋಟಿ ವಂಚನೆ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ